Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -

ಆದ್ಯತ್‌ರ ಪುಸ್ತಕ 46 - ಕೊಡವ ಬೈಬಲ್


ಯಾಕೋಬ ಐಗುಪ್ತ ದೇಶಕ್‌ ಪೋಪದ್‌

1 ಇಸ್ರಾಯೇಲ್‌ ಅಂವೊಂಗ್‌ ಇಂಜ ಎಲ್ಲಾನ ಎಡ್‌ತಂಡ್‌ ಪ್ರಯಾಣ ಮಾಡಿತ್‌ ಬೇರ್ಷೇಬಕ್‌ ಬಂದಿತ್‌ ತಾಂಡ ಅಪ್ಪನಾನ ಇಸಾಕಂಡ ದೇವಕ್‌ ಬಲಿ ಕೊಡ್‌ತತ್.

2 ಅಂದ್‌ ಬಯಿಟ್ ದೇವ ಇಸ್ರಾಯೇಲ್‌ಂಗ್‌ ದರ್ಶನತ್‌ಲ್‌ ಅಂವೊನ ಕಾಂಬ್‌ಚಿಟ್ಟಿತ್: ಯಾಕೋಬನೇ ಯಾಕೋಬನೇಂದ್‌ ಕಾಕ್‌ಚಿ. ಅಂವೊ: ನಾನ್‌ ಇಲ್ಲಿ ಉಳ್ಳ್ಂದ್‌ ಎಣ್ಣ್‌ಚಿ.

3 ಅಕ್ಕ ಅಂವೊ: ನಾನ್‌ ದೇವ, ನೀಡ ಅಪ್ಪಂಡ ದೇವ. ನೀನ್‌ ಐಗುಪ್ತ ದೇಶಕ್‌ ಪೋಪಕ್‌ ಬೊತ್ತತೆ. ಅಲ್ಲಿ ನಾನ್‌ ನೀಡ ಸಂತಾನತ್‌ನ ಬಲ್ಯ ಜನಾಂಗಳಾಯಿತ್‌ ಮಾಡ್‌ವಿ.

4 ನಾನೇ ನೀಡ ಕೂಡೆ ಐಗುಪ್ತ ದೇಶಕ್‌ ಬಪ್ಪಿ. ನಾನ್‌ ನೀಡ ಸಂತಾನತ್‌ನ ತಿರಿತ್‌ ಕಾಕಿಯಂಡ್‌ ಬಪ್ಪಿ. ನೀನ್‌ ಚಾವಕ ಯೋಸೇಫ ನೀಡ ಇಂಜಿತ್‌ ನೀಡ ಕಣ್ಣ್‌ನ ಮುಚ್ಚುವಾಂದ್‌ ಎಣ್ಣ್‌ಚಿ.

5 ಅಲ್ಲಿಂಜ ಯಾಕೋಬ ಬೇರ್ಷೇಬಯಿಂಜ ಪೊರ್‌ಟತ್. ಇಸ್ರಾಯೇಲ್‌ಂಡ ಕ್‌ಣ್ಣ ಮಕ್ಕ ತಾಂಡ ಅಪ್ಪನಾನ ಯಾಕೋಬನ ಪಿಂಞ ಅಯಿಂಗಡ ಪೊಣ್ಣ್‌ ಮಕ್ಕಳ ಫರೋಹನ ಅಯಿಚಿಕೊಡ್‌ತ ಎತ್ತ್‌ಗಾಡಿರ ಮೇಲೆ ಅಳ್‌ಪ್‌ಚಿಟ್ಟಂಡ್‌ ಪೊರ್‌ಟತ್.

6 ಯಾಕೋಬ ಪಿಂಞ ಅಂವೊಂಡ ಇಡೀ ಕುಟುಂಬ, ಎತ್ತ್‌ ಕಡ್‌ಚಿಯಳ ಕೊರಿಯಳ ಪಿಂಞ ಅಯಿಂಗ ಕಾನಾನ್‌ ದೇಶತ್‌ಲ್‌ ಸಂಪಾದನೆ ಮಾಡಿತ್‌ಂಜ ಆಸ್ತಿನೆಲ್ಲಾ ಎಡ್‌ತಂಡ್‌ ಐಗುಪ್ತ ದೇಶತ್‌ನ ಎತ್ತ್‌ಚಿ.

7 ಇನ್ನನೆ ಯಾಕೋಬ ತಾಂಡ ಕ್‌ಣ್ಣ ಮಕ್ಕ ಪಿಂಞ ಮೂಡಿ ಮಕ್ಕಳ, ಕ್‌ರ್‌ಮಕ್ಕಳ ತಾಂಡ ಮನೆಕಾರಳ ಎಲ್ಲಾರ್‌ನ ತಾಂಡ ಕೂಡೆ ಕಾಕಿಯಂಡ್‌ ಐಗುಪ್ತ ದೇಶಕ್‌ ಪೊರ್‌ಟ್ ಪೋಚಿ.

8 ಐಗುಪ್ತ ದೇಶಕ್‌ ಬಂದ ಇಸ್ರಾಯೇಲ್‌ ಎಣ್ಣುವ ಯಾಕೋಬಂಡ ಸಂತಾನತ್‌ರ ವಿವರ: ಯಾಕೋಬಂಡ ಪೆರಿಯ ಮೊಂವೊನಾನ ರೂಬೇನ.

9 ರೂಬೇನಂಡ ಮಕ್ಕ ಹನೋಕ, ಫಲ್ಲೂ, ಹೆಚ್ರೋನ ಪಿಂಞ ಕರ್ಮೀ ಎಣ್ಣುವಯಿಂಗಳೇ.

10 ಸಿಮೆಯೋನಂಡ ಮಕ್ಕ ಯೆಮೂವೇಲ, ಯಾಮಿನ, ಓಹದ, ಯಾಕೀನ, ಚೋಹರ, ಪಿಂಞ ಕಾನಾನ್‌ ಪೊಣ್ಣಾಳ್‌ ಪೆತ್ತ ಸೌಲ ಎಣ್ಣುವಯಿಂಗಳೇ.

11 ಲೇವಿಯಡ ಮಕ್ಕ ಗೇರ್ಷೋನ, ಕೆಹಾತ, ಮೇರಾರೀ ಎಣ್ಣುವಯಿಂಗಳೇ.

12 ಯೆಹೂದಂಡ ಮಕ್ಕ ಏರ, ಓನಾನ, ಶೇಲಾಹ, ಪೆರೆಚ, ಜೆರಹ ಎಣ್ಣುವಯಿಂಗಳೇ. ಇಯಂಗಡಲ್ಲಿ ಏರ್‌ ಪಿಂಞ ಓನಾನ ಕಾನಾನ್‌ ದೇಶತ್‌ಲ್‌ ಚತ್ತ್‌ ಪೋಚಿ. ಪೆರೆಚಂಡ ಮಕ್ಕ ಹೆಚ್ರೋನ, ಹಾಮೂಲ ಎಣ್ಣುವಯಿಂಗಳೇ.

13 ಇಸ್ಸಕಾರಂಡ ಮಕ್ಕ ತೋಲಾ, ಪುವ್ವಾ, ಯೋಬ, ಶಿಮ್ರೋನ ಎಣ್ಣುವಯಿಂಗಳೇ.

14 ಜೆಬುಲೋನಂಡ ಮಕ್ಕ ಸೆರೆದ, ಏಲೋನ, ಯಹ್ಲೇಲ ಎಣ್ಣುವಯಿಂಗಳೇ.

15 ಇಯಂಗೆಲ್ಲಾ ಲೇಯಾಳಂಡ ಕ್‌ಣ್ಣ ಮಕ್ಕ. ಅವ ಈ ಕ್‌ಣ್ಣ ಮಕ್ಕಡ ಕೂಡೆ ದೀನ ಎಣ್ಣುವ ಒರ್‌ ಮೂಡಿ ಕುಂಞಿನ ಪದ್ದನ್‌ ಆರಾಮ್‌ಲ್‌ ಯಾಕೋಬಂಗ್‌ ಪೆತ್ತತ್. ಕ್‌ಣ್ಣ ಪಿಂಞ ಮೂಡಿ ಮಕ್ಕಳ ಒಟ್ಟ್‌ ಕೂಟಿತ್‌ ಲೇಯಳಿಂಜ ಅಂವೊಂಡ ಸಂತಾನ ನುಪ್ಪತ್ಮೂಂದ್‌ ಜನ ಇಂಜತ್.

16 ಗಾದಂಡ ಮಕ್ಕ ಚಿಪ್ಯೋನ, ಹಗ್ಗೀ, ಶೂನೀ, ಎಚ್ಬೋನ, ಏರೀ, ಅರೋದೀ, ಅರೇಲೀ ಎಣ್ಣುವಯಿಂಗಳೇ.

17 ಆಶೇರಂಡ ಮಕ್ಕ ಇಮ್‌ನಾ, ಇಷ್ವಾ, ಇಷ್ವೀ, ಬೆರೀಗಾ, ಇಯಂಗಡ ತಂಗೆ ಸೆರಹ ಎಣ್ಣುವವ; ಬೆರೀಗಾಂಡ ಮಕ್ಕ ಹೆಬೆರ ಪಿಂಞ ಮಲ್ಕೀಯೇಲ ಎಣ್ಣುವಯಿಂಗಳೇ.

18 ಇಯಂಗ ಲಾಬಾನ ತಾಂಡ ಮೋವಳಾನ ಲೇಯಳ್‌ಕ್‌ ಕೊಡ್‌ತ ಜಿಲ್ಪಳಂಡ ಮಕ್ಕ. ಅವ ಈ ಪದಿನಾರ್‌ ಮಕ್ಕಳ ಯಾಕೋಬಂಗ್‌ ಪೆತ್ತತ್.

19 ಯಾಕೋಬಂಡ ಪೊಣ್ಣಾನ ರಾಹೇಲಂಗ್‌ ಪುಟ್ಟ್‌ನ ಮಕ್ಕ ಯೋಸೇಫ ಪಿಂಞ ಬೆನ್ಯಾಮೀನ ಎಣ್ಣುವಯಿಂಗಳೇ.

20 ಐಗುಪ್ತ ದೇಶತ್‌ಲ್‌ ಯೋಸೇಫಂಗ್‌ ಮನಸ್ಸೆ ಪಿಂಞ ಎಫ್ರಾಯಿಮ ಎಣ್ಣುವ ಮಕ್ಕ ಪುಟ್ಟ್‌ಚಿ. ಅಯಿಂಗಳ ಓನ್‌ ಪಟ್ಟಣತ್‌ರ ಯಾಜಕನಾನ ಪೋಟೀಫರಂಡ ಮೋವಳಾನ ಆಸನತ್‌ ಎಣ್ಣ್‌ವವ ಯೋಸೇಫಂಗ್‌ ಪೆತ್ತತ್.

21 ಬೆನ್ಯಾಮೀನಂಡ ಮಕ್ಕ ಬಿಳಾ, ಬೆಕೆರ, ಅಶ್ಬೇಲ, ಗೇರಾ, ನಾಮಾನ, ಏಹೀ, ರೋಷ, ಮುಪ್ಪೀಮ, ಹುಪ್ಪಿಮ, ಆರ್ದ ಎಣ್ಣುವಯಿಂಗಳೇ.

22 ಒಟ್ಟ್‌ ಕೂಟಿತ್‌ ಈ ಪದಿನಾಲ್‌ ಮಕ್ಕಳು ರಾಹೇಲಂಡ ಮೂಲಕ ಯಾಕೋಬಂಗ್‌ ಕ್‌ಟ್ಟನ ಸಾಂತಾನ ಆಚಿ.

23 ದಾನಂಡ ಮೋಂವೊ ಹುಶೀಮ.

24 ನಫ್ತಾಲಿಯಂಡ ಮಕ್ಕ ಯಹೇಲ, ಗೂನೀ, ಯೇಚೆರ, ಶಿಲ್ಲೇಮ ಎಣ್ಣುವಯಿಂಗಳೇ.

25 ಇಯಿಂಗ ಲಾಬಾನ ತಾಂಡ ಮೋವಳಾನ ರಾಹೇಲಂಗ್‌ ಕೊಡ್‌ತ ಬಿಲ್ಹಳಂಡ ಮಕ್ಕ. ಒಟ್ಟ್‌ ಕೂಟಿತ್‌ ಬಿಲ್ಹಳ ಯಾಕೋಬಂಗ್‌ ಏಳ್‌ ಮಕ್ಕಳ ಪೆತ್ತತ್.

26 ಯಾಕೋಬಂಡ ಮೈಮಕ್ಕಳ ಬುಟ್ಟಿತ್, ಯಾಕೋಬಂಡ ಮೂಲಕ ಪುಟ್ಟ್‌ನ ಅಂವೊಂಡ ಮಕ್ಕ, ಕರ್ಮಕ್ಕಳ ಒಟ್ಟ್‌ ಕೂಟಿತ್‌ ಯಾಕೋಬಂಡ ಕೂಡೆ ಐಗುಪ್ತ ದೇಶಕ್‌ ಪೋನಯಿಂಗ ಅರ್ವತ್ತಾರ್‌ ಜನಯಿಂಜತ್.

27 ಅಯಿಂಗ ಅಲ್ಲತೆ ಐಗುಪ್ತ ದೇಶತ್‌ಲ್‌ ಯೋಸೇಫಂಗ್‌ ಪುಟ್ಟ್‌ನ ದಂಡ್‌ ಕ್‌ಣ್ಣ ಮಕ್ಕ ಇಂಜತ್. ಅನ್ನನೆ ಐಗುಪ್ತ ದೇಶಕ್‌ ಪೋನ ಯಾಕೋಬಂಡ ಕುಟುಂಬತ್‌ಲ್‌ ಏಳ್‌ವದ್‌ ಜನಯಿಂಜತ್.

28 ಯಾಕೋಬ ಗೋಷೆನ್‌ ನಾಡ್‌ಕ್‌ ಪೋಪ ಬಟ್ಟೆನ ಅರಿಯೊಕಾಯಿತ್, ಯೆಹೂದನ ಮಿಂಞ ಯೋಸೇಫಂಡ ಪಕ್ಕ ಅಯಿಚತ್. ಅಯಿಂಗೆಲ್ಲಾರು ಗೋಷೇನ್‌ ಊರ್‌ಲ್‌ ಕೂಡ್‌ಚಿ.

29 ಯೋಸೇಫ ತಾಂಡ ರಥತ್‌ನ ತಯಾರ್‌ ಮಾಡಿತ್, ತಾಂಡ ಅಪ್ಪನಾನ ಇಸ್ರಾಯೇಲ್‌ನ ಕಾಂಬಕ್‌ ಗೋಷೆನ್‌ ಊರ್‌ಕ್‌ ಪೋಯಿತ್, ಅಲ್ಲಿ ಅಂವೊಂಡ ಅಪ್ಪನ ಕಂಡಿತ್, ಅಂವೊನ ತಬ್ಬಿಯಂಡ್‌ ದುಂಬ ನೇರ ಮೊರ್‌ಟತ್.

30 ಅಕ್ಕ ಇಸ್ರಾಯೇಲ ಯೋಸೇಫನ ನೋಟಿತ್: ನೀನ್‌ ಇಂಞು ಬದ್‌ಕಿತುಳ್ಳದ್‌ನ ನಾನ್‌ ನಾಡ ಕಣ್ಣಾರೆ ಕಂಡಿತುಳ್ಳಂಗ್, ಇಕ್ಕ ನಾನ್‌ ಚಾವಕ್‌ ತಯಾರಾಯಿತುಳ್ಳ್ಂದ್ ಎಣ್ಣ್‌ಚಿ.

31 ಯೋಸೇಫ ತಾಂಡ ಅಣ್ಣತಮ್ಮಣಂಗಳ ಪಿಂಞ ತಾಂಡ ಅಪ್ಪಂಡ ಮನೆಕಾರಳ ನೋಟಿತ್: ನಾನ್‌ ಫರೋಹನಂಡ ಪಕ್ಕ ಪೋಯಿತ್, ಕಾನಾನ್‌ ದೇಶತ್‌ಂಜ ನಾಡ ಅಣ್ಣತಮ್ಮಣಂಗ ಪಿಂಞ ನಾಡ ಅಪ್ಪಂಡ ಮನೆಕಾರಂಗ ನಾಡ ಪಕ್ಕ ಬಂದಿತುಂಡ್.

32 ಅಯಿಂಗೆಲ್ಲಾರು ಕೊರಿಕಾಪಯಿಂಗ. ಅಯಿಂಗ ಎತ್ತ್‌ಕಡ್‌ಚಿಯಳ, ಆಡ್‌ಕೊರಿಯಳ ಮೇಯಿಚಿಡುವ. ಅಯಿಂಗ ಅಯಿಂಗಡ ಆಡ್‌ಕೊರಿಯಳ, ಎತ್ತಕಡ್‌ಚಿಯಳ ಪಿಂಞ ಅಯಿಂಗಕ್‌ ಕೂಡ್‌ನ ಎಲ್ಲಾನ ಎಡ್‌ತಂಡ್‌ ಬಂದಿತುಂಡ್‍ೕಂದ್‌ ಎಣ್ಣ್‌ವಿ.

33 ಫರೋಹನ ನಿಂಗಳ ಕಾಕಿತ್, ನಿಂಗಡ ಕೆಲಸ ಎಂತ್‍ೕದ್‌ ಕ್‍ೕಟತೇಂಗಿ,

34 ನಿಂಗ ಅಂವೊಂಗ್: ನಿಂಗಡ ಸೇವಕಂಗ ಚೆರಿಯತ್‌ಂಜ ಇಲ್ಲಿಕತ್ತನೆ, ನಂಗಡ ಮುತ್ತಜ್ಜಂಗಡನೆಕೆ ಕೊರಿಕಾಪಯಿಂಗಾಂದ್‌ ಎಣ್ಣಿ. ಅಕ್ಕ ನಿಂಗಳ ಗೋಷೆನ್‌ ಊರ್‌ಲ್‌ ವಾಸಮಾಡ್‌ವಕ್‌ ಬುಡುವ. ಎನ್ನಂಗೆಣ್ಣ್‌ಚೇಂಗಿ ಐಗುಪ್ತ ಜನ ಕೊರಿಕಾಪಯಿಂಗಳ ಅಸಹ್ಯವಾಯಿತ್‌ ಕಾಂಬ.

© 2017, New Life Literature (NLL)

ကြှနျုပျတို့နောကျလိုကျပါ:



ကြော်ငြာတွေ