Biblia Todo Logo
အွန်လိုင်း သမ္မာကျမ်းစာ

- ကြော်ငြာတွေ -

ಆದ್ಯತ್‌ರ ಪುಸ್ತಕ 26 - ಕೊಡವ ಬೈಬಲ್


ಇಸಾಕ ಪಿಂಞ ಅಬಿಮೆಲೆಕ

1 ಅಬ್ರಹಾಮಂಡ ಕಾಲತ್‌ಲ್‌ ಉಂಟಾನ ಬರಗಾಲ ಅಲ್ಲತೆ ಇಂಞೋರ್‌ ಬರಗಾಲ ಕಾನಾನ್‌ ದೇಶತ್‌ಲ್‌ ಉಂಟಾಚಿ. ಅಕ್ಕ ಇಸಾಕ ಫಿಲಿಷ್ಟಿಯರಡ ರಾಜನಾನ ಅಬೀಮೆಲೆಕಂಡ ಪಕ್ಕ ಗೆರಾರ್‌ಕ್‌ ಪೋಚಿ.

2 ಅಲ್ಲಿ ಯೆಹೋವ ಅಂವೊಂಗ್‌ ಅಂವೊನ ಕಾಂಬ್‌ಚಿಟ್ಟಿತ್: ನೀನ್‌ ಐಗುಪ್ತ ದೇಶಕ್‌ ಪೋಕತೆ, ನಾನ್‌ ನೀಕ್‌ ಎಣ್ಣುವ ದೇಶತ್‌ಲ್‌ ವಾಸ ಮಾಡಿಯಂಡಿರ್‌ಂದ್‌ ಎಣ್ಣ್‌ಚಿ.

3 ನೀನ್‌ ಈ ದೇಶತ್‌ಲ್‌ ಚೆನ್ನ ಕಾಲ ವಾಸ ಮಾಡ್. ನಾನ್‌ ನೀಡ ಕೂಡೆ ಇಂಜಿತ್, ನಿನ್ನ ಆಶೀರ್ವಾದ ಮಾಡುವಿ; ನಾನ್‌ ನೀಕು ನೀಡ ಸಂತಾನಕು ಈ ದೇಶತ್‌ನೆಲ್ಲ ತಂದಿತ್‌ ನೀಡ ಅಪ್ಪನಾನ ಅಬ್ರಹಾಮಂಗ್‌ ಮಾಡ್‌ನ ಆಣೆನ ನೆರೆವೇರಿಚಿಡುವಿ.

4 ಅಬ್ರಹಾಮ ನಾಡ ತಕ್ಕ್‌ಕ್‌ ತಗ್ಗಿತ್, ನಾನ್‌ ಎಣ್ಣ್‌ನನೆಕೆ ಮಾಡಿತ್, ನಾನ್‌ ಕೊಡ್‌ತ ಆಜ್ಞೆನ, ನಿಯಮತ್‌ನ, ಪ್ರಮಾಣತ್‌ರನೆಕೆ ನಡ್‌ಂದಂಗ್,

5 ನಾನ್‌ ನೀಡ ಸಂತಾನತ್‌ನ ಬಾನತ್‌ರ ಮೀನ್‌ರಚ್ಚಕ್‌ ಬಲ್ಯದ್‌ ಮಾಡುವಿ. ನೀಡ ಸಂತಾನಕ್‌ ಈ ದೇಶತ್‌ನೆಲ್ಲಾ ತಪ್ಪಿ; ನೀಡ ಸಂತಾನತ್‌ರ ಮೂಲಕ ಈ ಲೋಕತ್‌ ಉಳ್ಳ ಇಡೀ ಜನಾಂಗ ಆಶೀರ್ವಾದ ಪೊಂದುವಾಂದ್‌ ಎಣ್ಣ್‌ಚಿ.

6 ಇಸಾಕ ಗೆರಾರ್‌ಲ್‌ ವಾಸ ಮಾಡ್‌ಚಿ.

7 ಆ ಜಾಗತ್‌ರ ಜನ ಇಸಾಕನ ಅಂವೊಂಡ ಪೊಣ್ಣ್‌ರ ವಿಷಯತ್‌ನ ಕ್‍ೕಪಕ: ಇವ ನಾಡ ತಂಗೇಂದ್‌ ಎಣ್ಣ್‌ಚಿ. ಎನ್ನಂಗೆಣ್ಣ್‌ಚೇಂಗಿ ರೆಬೆಕ್ಕ ನೋಟ್‌ವಕ್‌ ಚಾಯಿಕಾರ್ತಿಯಾಯಿತ್‌ಂಜಂಗ್, ಈ ಜಾಗತ್‌ರ ಜನ ಅವಕಾಯಿತ್‌ ಅಂವೊನ ಕೊಂದ್‌ರ್‌ವಾಂದ್‌ ಗೇನ ಮಾಡಿತ್, ಅವಳ ತಾಂಡ ಪೊಣ್ಣ್‌ಂದ್‌ ಎಣ್ಣ್‌ವಕ್‌ ಇಸಾಕಂಗ್‌ ಪೋಡಿಯಾಚಿ.

8 ಇಸಾಕ ಆ ಊರ್‌ಲ್‌ ಸುಮಾರ್‌ ಕಾಲ ಇಪ್ಪಕ, ಒರ್‌ ದಿವಸ ಫಿಲಿಷ್ಟಿಯರಡ ರಾಜನಾನ ಅಬೀಮೆಲೆಕ ಕಿಟಕಿಯಿಂಜ ನೋಟ್‌ವಕ, ಇಸಾಕ ತಾಂಡ ಪೊಣ್ಣ್‌ರ ಕೂಡೆ ಕುಷಿಲ್‌ ಕಳಿಚ್ಚಂಡ್‌ ಇಪ್ಪದ್‌ನ ಕಂಡತ್.

9 ಅಕ್ಕ ಅಬೀಮೆಲೆಕ ಇಸಾಕನ ಕಾಕಿತ್: ನೇರಾಯಿತ್‌ ಅವ ನೀಡ ಪೋಣ್ಣ್‌! ಪಿಂಞ ಎನ್ನಂಗ್‌ ಅವಳ ನೀಡ ತಂಗೇಂದ್‌ ಎಣ್ಣಿಯೇಂದ್‌ ಕ್‍ೕಟತ್. ಅದ್‌ಂಗ್‌ ಇಸಾಕ: ಜನ ಅವಕಾಯಿತ್‌ ನನ್ನ ಕೊಂದ್‌ರ್‌ವಾಂದ್‌ ಅನ್ನನೆ ಎಣ್ಣ್‌ನ್‍ೕಂದ್‌ ಎಣ್ಣ್‌ಚಿ.

10 ಅದ್‌ಂಗ್‌ ಅಬೀಮೆಲೆಕ: ನೀನ್‌ ಎನ್ನಂಗ್‌ ನಂಗಕ್‌ ಇನ್ನನೆ ಮಾಡಿಯಾ? ದಾರೇಂಗಿ ಅವಡ ಕೂಡೆ ಬುದ್ದತ್ತಿಂಜತೇಂಗಿ, ನೀನ್‌ ಆ ಅಪರಾದತ್‌ನ ನಂಗಡ ಮೇಲೆ ಬಪ್ಪ್‌ಚಿಡುವಕಿಂಜಿಯಲ್ಲಾಂದ್‌ ಎಣ್ಣ್‌ಚಿ.

11 ಅಲ್ಲಿಂಜ ಅಬೀಮೆಲೆಕ ತಾಂಡ ಎಲ್ಲಾ ಜನಕ್: ದಾರೇಂಗಿ ಇಂವೊನ ಪಿಂಞ ಇಂವೊಂಡ ಪೊಣ್ಣ್‌ನ ಮುಟ್ಟ್‌ಚೇಂಗಿ, ನೇರಾಯಿತ್‌ ಅಂವೊನ ಕೊಲ್ಲುವಾಂದ್‌ ಎಣ್ಣ್‌ಚಿ.

12 ಪಿಂಞ ಇಸಾಕ ಆ ದೇಶತ್‌ಲ್‌ ಬೇಲ್‌ಲ್‌ ಬಿತ್ತ್‌ ಬೀಜಿಯತ್. ಯೆಹೋವ ಅಂವೊನ ಆಶೀರ್ವಾದ ಮಾಡ್‍ನಗುಂಡ್, ಆ ಕಾಲಕ್‌ ನೂರ್‌ ಪಟ್ಟ್‌ ಬೊಳೆ ಕ್‌ಟ್ಟ್‌ಚಿ.

13 ಅಂವೊ ಐಶ್ವರ್ಯವಂತಂವೊನಾಚಿ. ಐಶ್ವರ್ಯ ದಿನ ದಿನ ದುಂಬನಗುಂಡ್‌ ಅಂವೊ ಬಲ್ಯ ಮನುಷ್ಯನಾಚಿ.

14 ಅಂವೊಂಗ್‌ ಆಡ್‌ ಕೊರಿಯ, ಎತ್ತ್‌ ಕಡ್‌ಚಿಯ, ಪಿಂಞ ದುಂಬ ಪಣಿಕಾರಂಗ ಇಂಜತ್. ಇದ್‌ನ ನೊಟ್‌ನ ಫಿಲಿಷ್ಟಿರಯಿಂಗಕ್‌ ಅಂವೊಂಡ ಮೇಲೆ ಹೊಟ್ಟೆಕಿಚ್ಚ್‌ ಪಟ್ಟತ್.

15 ಅಂವೊಂಡ ಅಪ್ಪನಾನ ಅಬ್ರಹಾಮಂಡ ಕಾಲತ್‌ಲ್‌ ಅಂವೊಂಡ ಪಣಿಕಾರಂಗ ತೋಡ್‌ನ ಕಣತರೆನೆಲ್ಲ ಫಿಲಿಷ್ಟಿರಯಿಂಗ ಮಣ್ಣ್‌ಯಿಟ್ಟಿತ್‌ ಮುಚ್ಚಿರ್‌ತ್.

16 ಇನ್ನನೆ ಇಪ್ಪಕ ಅಬೀಮೆಲೆಕ ಇಸಾಕಂಗ್: ನೀನ್‌ ನಂಗಕಿಂಜಿ ಬಲ್ಯಂವೊನಾಯೇಂಡುಂಡ್. ಈ ದೇಶತ್‌ನ ಬುಟ್ಟಿತ್‌ ಪೊರ್‌ಟ್ ಪೋಂದ್‌ ಎಣ್ಣ್‌ಚಿ.

17 ಅದ್‌ಂಗ್‌ ಇಸಾಕ ಅಲ್ಲಿಂಜ ಪೋಯಿತ್‌ ಗೆರಾರ್‌ರ ಯಾರೆರ ಪಕ್ಕ ಗುಡಾರ ಇಟ್ಟಿತ್‌ ವಾಸ ಮಾಡ್‌ಚಿ.

18 ತಾಂಡ ಅಪ್ಪನಾನ ಅಬ್ರಹಾಮಂಡ ಕಾಲತ್‌ ತೋಡಿತ್‌ಂಜ ಕಣತರೆನೆಲ್ಲ ಅಂವೊ ಚತ್ತ ಪಿಂಞ ಫಿಲಿಷ್ಟಿರಯಿಂಗ ಮುಚ್ಚಿತ್‌ಂಜನಗೊಂಡ್, ಇಸಾಕ ಅದ್‌ನ ಪುನಃ ತೋಡ್‌ವಕ್‌ ಸುರುಮಾಡಿತ್, ತಾಂಡ ಅಪ್ಪ ಕೊಡ್‌ತ ಪೆದತ್‌ರ ಪ್ರಕಾರ ಇಸಾಕನು ಆ ಕಣತರೆಕ್‌ ಪೆದ ಬೆಚ್ಚತ್.

19 ಇಸಾಕಂಡ ಪಣಿಕಾರಂಗ ಗೆರಾರ್‌ರ ಯಾರೆಲ್‌ ಕಣತರೆನ ತೋಡಿತ್‌ ಅದ್‌ಲ್‌ ನೀರ್‌ನ ಕಂಡತ್.

20 ಗೆರಾರ್‌ರ ಎತ್ತ್‌ಕಾಪಯಿಂಗ ಇಸಾಕಂಡ ಎತ್ತ್‌ಕಾಪಯಿಂಗಡ ಕೂಡೆ ಈ ನೀರ್‌ ನಂಗಡದ್‍ೕಂದ್‌ ಎಣ್ಣಿತ್‌ ಜಗಳ ಮಾಡ್‌ಚಿ. ಆನಗುಂಡ್‌ ಇಸಾಕ ಆ ಕಣತರೆಕ್‌ ಏಸೆಕ್‌ ಎಣ್ಣಿಯಂಡ್‌ ಪೆದ ಬೆಚ್ಚತ್.

21 ಇಸಾಕಂಡ ಆಳ್‌ವ ದಂಡನೆ ಕಣತರೆನ ತೋಡ್‌ಚಿ. ಅದ್‌ಂಗ್‌ ಸಹ ಅಯಿಂಗ ಜಗಳ ಮಾಡ್‌ಚಿ. ಆನಗುಂಡ್‌ ಇಸಾಕ ಸಿಟ್‌ನಾ ಎಣ್ಣಿಯಂಡ್‌ ಪೆದ ಬೆಚ್ಚತ್.

22 ಪಿಂಞ ಇಸಾಕ ಆ ಜಾಗತ್‌ನ ಬುಟ್ಟಿತ್‌ ಪೋಯಿತ್‌ ಮೂಂದನೆ ಕಣತರೆನ ತೋಡ್‌ಚಿ. ಆಚೇಂಗಿ ಅದ್‌ಂಡ ವಿಷಯತ್‌ ಅಯಿಂಗ ಜಗಳ ಮಾಡಿತ್‌ಲ್ಲೆ. ಅಕ್ಕ ಇಸಾಕ: ನಂಗ ಅಬಿವೃದ್ದಿ ಪೊಂದಂಡೂಂದ್‌ ಇಕ್ಕ ಯೆಹೋವ ನಂಗಕಾಯಿತ್‌ ಜಾಗ ತಂದಿತ್‍ೕಂದ್‌ ಎಣ್ಣಿತ್‌ ಆ ಕಣತರೆಕ್‌ ರೆಹೋಬೋತ್‌ ಎಣ್ಣಿಯಂಡ್‌ ಪೆದ ಬೆಚ್ಚತ್.

23 ಇಸಾಕ ಅಲ್ಲಿಂಜ ಬೇರ್ಷೆಬಕ್‌ ಪೋಚಿ.

24 ಆ ಬಯಿಟ್ ಯೆಹೋವ ಅಂವೊಂಗ್‌ ಕಾಂಬ್‌ಚಿಟ್ಟಿತ್: ನಾನ್‌ ನೀಡ ಅಪ್ಪನಾನ ಅಬ್ರಹಾಮಂಡ ದೇವ, ಆನಗುಂಡ್‌ ನೀನ್‌ ಬೊತ್ತತೆ, ನಾನ್‌ ನೀಡ ಕೂಡೆ ಉಳ್ಳ. ನಾಡ ಸೇವಕನಾನ ಅಬ್ರಹಾಮನಗುಂಡ್, ನಿನ್ನ ಆಶೀರ್ವಾದ ಮಾಡಿತ್, ನೀಡ ಸಂತಾನತ್‌ನ ಬಲ್ಯದ್‌ ಮಾಡುವೀಂದ್‌ ಎಣ್ಣ್‌ಚಿ.

25 ಅಕ್ಕ ಇಸಾಕ ಅಲ್ಲಿ ಒರ್‌ ಬಲಿಪೀಠತ್‌ನ ಕೆಟ್ಟಿತ್‌ ಯೆಹೋವಂಡ ಪೆದತ್‌ನ ಎಣ್ಣಿತ್‌ ಆರಾದನೆ ಮಾಡಿತ್, ಅಲ್ಲಿಯೇ ತಾಂಡ ಗುಡಾರತ್‌ನ ಇಟ್ಟಂಡತ್. ಆ ಜಾಗತ್‌ಲ್‌ ಅಂವೊಂಡ ಪಣಿಕಾರಂಗ ಒರ್‌ ಕಣತರೆನ ತೋಡ್‌ಚಿ.


ಅಬೀಮೆಲೆಕಂಡ ಕೂಡೆ ಇಸಾಕಂಡ ಒಪ್ಪಂದ

26 ಒರ್‌ ದಿವಸ ಅಬೀಮೆಲೆಕ ತಾಂಡ ಆಲೋಚನೆ ಅದಿಕಾರಿಯನಾನ ಅಹುಜ್ಜತನ ಪಿಂಞ ಸೇನಾದಿಪತಿಯಾನ ಫೀಕೋಲನ ಕಾಕಿಯಂಡ್‌ ಗೆರಾರ್ಯಿಂಜ ಇಸಾಕಂಡ ಪಕ್ಕ ಬಾತ್.

27 ಅಕ್ಕ ಇಸಾಕ ಅಯಿಂಗಳ ನೋಟಿತ್: ನಿಂಗ ಎನ್ನಂಗ್‌ ಬಂದಿರ? ನನ್ನ ವಿರೋದ ಮಾಡಿತ್, ನಾನ್‌ ನಿಂಗಡ ಕೂಡೆ ಇಕ್ಕತನೆಕೆ ನನ್ನ ಅಲ್ಲಿಂಜ ಓಟ್‌ಚಿಟ್ಟಿರಲ್ಲಾಂದ್‌ ಎಣ್ಣ್‌ಚಿ.

28 ಅದ್‌ಂಗ್‌ ಅಯಿಂಗ: ನೇರಾಯಿತ್‌ ಯೆಹೋವ ನೀಡ ಕೂಡೆ ಉಂಡ್‌ಂದ್‌ ನಂಗಕ್‌ ಚಾಯಿತೆ ಗೊತ್ತಾಚಿ. ಆಂಗಾಯಿತ್‌ ನೀಕು ನಂಗಕು ಮದ್ಯತ್‌ಲ್‌ ಒರ್‌ ಒಪ್ಪಂದ ಆಂಡೂಂದ್‌ ತೀರ್ಮಾನ ಮಾಡಿಯೆ.

29 ನಂಗ ನೀಕ್‌ ಕ್‍ೕಡ್‌ ಮಾಡತೆ, ನಲ್ಲದ್‌ನೇ ಮಾಡಿತ್, ನಿನ್ನ ಸಮಾದಾನತ್‌ಲ್‌ ಅಯಿಚನೆಕೆ, ನೀನ್‌ ಸತ ನಂಗಕ್‌ ಕ್‍ೕಡ್‌ ಮಾಡತೆ ಇಪ್ಪಕ್‌ ನೀಡ ಕೂಡೆ ಒಪ್ಪಂದ ಮಾಡ್‌ವಕ್‌ ಬಂದಿತ್. ನೀನ್‌ ಯೆಹೋವಂಡ ಆಶೀರ್ವಾದ ಪಡಂದಂವೊನಲ್ಲಾಂದ್‌ ಎಣ್ಣ್‌ಚಿ.

30 ಅಕ್ಕ ಇಸಾಕ ಅಯಿಂಗಕಾಯಿತ್‌ ಗದ್ದಾಳ ತಯಾರ್‌ ಮಾಡ್‌ಚಿ. ಅಯಿಂಗ ಉಂಡಿತ್‌ ಕುಡಿಚತ್.

31 ಪೊಲಾಕ ನೇರತೆ ಎದ್ದಿತ್, ಅಯಿಂಗ ಒಬ್ಬೊಂಗೊಬ್ಬ ಒಪ್ಪಂದ್‌ ಮಾಡಿಯಂಡತ್. ಅಲ್ಲಿಂಜ ಇಸಾಕ ಅಯಿಂಗಳ ಅಯಿಚಿಕೊಡ್‌ಪಕ, ಅಯಿಂಗ ಸಮಾದಾನತ್‌ಲ್‌ ಪೊರ್‌ಟಿತ್‌ ಪೋಚಿ.

32 ಅದೇ ದಿವಸ ಇಸಾಕಂಡ ಪಣಿಕಾರಂಗ ಬಂದಿತ್, ಅಯಿಂಗ ತೋಡ್‌ನ ಕಣತರೆರ ವಿಷಯತ್‌ನ ಎಣ್ಣಿತ್, ನಂಗಕ್‌ ನೀರ್‌ ಕ್‌ಟ್ಟ್‌ಚೀಂದ್‌ ಅರಿಚಿಟ್ಟತ್.

33 ಅದ್‌ಂಗ್‌ ಇಸಾಕ ಆ ಕಣತರೆಕ್‌ ಷಿಬಾ ಎಣ್ಣಿಯಂಡ್‌ ಪೆದಬೆಚ್ಚತ್. ಅದನಗುಂಡ್, ಅಲ್ಲಿಯತ್‌ರ ನಾಡ್‌ಕ್‌ ಬೇರ್ಷೆಬಾಂದ್‌ ಬೆದ ಕ್‌ಟ್ಟ್‌ಚಿ, ಇಕ್ಕಲು ಅನ್ನನೆ ಅದನ ಕಾಕುವ.


ಏಸಾ ದಂಡ ಹಿತ್ತಿಯ ಮೂಡಿನ ಮಂಗಲ ಕಯಿಚದ್‌

34 ಏಸಾವಂಗ್‌ ನಾಪ್ಪದ್‌ ವಯಸ್ಸ್‌ ಆಪಕ ಹಿತ್ತಿಯನಾನ ಬೇರಿಯಂಡ ಮೋವಳಾನ ಯೆಹೂದೀತಳ ಪಿಂಞ ಹಿತ್ತಿಯನಾನ ಏಲೋನಂಡ ಮೋವಳಾನ ಬಾಸೆಮತಳ ಮಂಗಲ ಕಯಿಚಂಡತ್.

35 ಇಂವೊಂಡ ಪೊಣ್ಣಾಳ್‌ವ ಇಸಾಕ ಪಿಂಞ ಅಂವೊಂಡ ಪೊಣ್ಣ್‌ ರೆಬೆಕ್ಕಡ ಮನಸ್ಸ್‌ನ ದುಂಬ ನೊಂಬಲ ಮಾಡ್‌ಚಿ.

© 2017, New Life Literature (NLL)

ကြှနျုပျတို့နောကျလိုကျပါ:



ကြော်ငြာတွေ