4 ಯೋಹಾನನು ಲುಂಗ್ಡ ಊಟ್ನ ಕೇಖ್ಹ್‌ಥಿ ಬಣಿರ‍್ಹೂಥು; ಇನಿ ಕಂಬರ್‌ನ ಚಾ಼ಂಬ್ಡಾನು ಕಂಬರ್‌ಪಟೊ ಭಾಂದಿರಾಕ್‌ತೋಥೊ, ಚಿಡ್ಡೋಬಿ ಜ಼ಂಗಳ್ನಿ ಶೇತ್ ಇನು ಖಾಣು ಹುಯಿರ‍್ಹುಥು.
ಕಿಮ್‌ಕತೊ, ಯೋಹಾನ ಆಯೊ, ಯೋ ಖಾತೋಥೊಕೊಯ್ನಿ ಅಜು಼ ಪೀತೋಥೊಕೊಯ್ನಿ, ಅಜು಼ ಅದ್ಮಿಖ್ಹಾರು, ‘ಇನ ಭೂತ್ ಧರಿರಾಖ್ಯುಸ್’ ಕರಿ ಬೋಲ್ಯು.
ಕೊಯ್ನಿಕತೊ, ಶಾತ್ ದೇಕ್ಣುಕರಿ ಗಯಾಥ? ಶನ್ಗಾರ್‌ನ ಲುಂಗ್ಡ ಪೇರ‍್ಹಿರಾಖಾಸ್ತೆ ಅದ್ಮಿನಾಕಿ ಶು? ಅಛ಼್ಛ ಶನ್‌ಗಾರ‍್ನಲುಂಗ್ಡಾ ಪೇರ‍್ಹಿರಾಖಾಸ್ತೆ ಖ್ಹಾರು ರಾಜಾ಼ನ ಮಹೇಲ್‌ಮ ರ‍್ಹೇಸ್!
ಯೋಹಾನ ಊಟ್ನ ಕೇಖ್ಹ್‌ಥಿ ಬಣಾಯುಹುಯು ಲುಂಗ್ಡು ಪೇರ‍್ಹೀರಾಕ್ತೊಥೊ, ಕಂಬರ್‌ನ ಚಾ಼ಂಬ್ಡಾನು ಕಂಬರ್‌ಪಟೊ ಭಾಂದಿರಾಕ್‌ತೋಥೊ ಅಜು಼ ಚಿಡ್ಡೋಬಿ ಜ಼ಂಗಳ್ನಿ ಶೇತ್ ಇನು ಖಾಣು ಹುಯಿರ‍್ಹುಥು.
ಯೋ ಪ್ರಭುನ ಅಗಾಡಿ ಜೈ಼ನ್, ಪ್ರವಾದಿ ಎಲೀಯನಿಘೋಣಿ ಮಹಿಮೆಮಾಬಿ ಶಕತ್‍ಮಾಬಿ ಭರೈನ್, ಬಾನ ದಿಲ್ನ ಲಡ್ಕಾವ್‌ಭಣಿ ಫರಾವ್‌ಶೆ, ಅಜು಼ ಮೊಂಡಿ ಖ್ಹಾರಾನ ನೀತಿನಿ ವಾಟ್‌ಭಣಿ ಫರಾವ್‌ಶೆ. ಅಮ್ ಪ್ರಭುನ ಅಛ಼್ಛ ಅದ್ಮಿನ ತೈಯಾರ್ ಕರ್ಶೆ” ಕರಿ ಬೋಲ್ಯೊ.
ಅತ್ರೇಸ್ ಕಾಹೆತೆ ಮಾರ ಬೇ ಸಾಕ್ಷಿವಾಳ ಛೈ಼ನಕೋಥ್‌ಳಾನ ಹೋಡಿಲಿನ್ ಏಕ್ ಹಜಾ಼ರ್ ಬೇಖ್ಹೊ ತೀನಿಖ್ಹ್ ದನ್‌ಲಗು ಪ್ರವಾದ್‌ನೆ ಕರಾನಿತರ ಇವ್ಣುನ ಅದಿಕಾರ್ ದಿಶ್.