41 ಅಪ್ಣುನತೋಬಿ, ನಿಶತ್ ಮಳಿರ‍್ಹೀಸ್ತೆ ಇನಾಮ ನ್ಯಾವ್ ಛಾ಼; ಶನಕತೊ ಅಪ್ಣೆ ಕರ‍್ಯಾತೆ ಗಲತ್‌ನಖ್ಹಾಜೆ, ಅಪ್ಣುನ ನಿಶತ್ ಮಳಿರ‍್ಹಿಸ್. ಕತೋಬಿ ಅನೆ ಶನೀಬಿ ಗಲತ್ ಕೋ ಕರ‍್ಯೋನಿ!”
ಅತ್ರೇಸ್ ಕಾಹೆತೆ, ಪಿಲಾತ ನ್ಯಾವ್‍ನಿ ಖುಡ್‍ಶಿಪರ್ ಬೆಠೊರ‍್ಹವಾನಿ ವಖ್ಹತ್‌ಮ ಇನಿ ಬಾವಣ್ಣೆ, “ಯೋ ಅದ್ಮಿನ ಶಾತ್ಬಿ ನಕೊ ಕರೀಶ್, ಯೋ ನೀತಿವಾಳೊ ಹುಯಿರ‍್ಹೊಸ್, ಗಯೋತೆ ರಾತೆ ಖ್ಹೋಣ್ಯಮ ಮನ ಘಣು ಖ್ಹತಾಪ್ಣಿ ಹುಯು” ಕರಿ ಇನ ಬೋಲಿನ್ ಮೋಕ್ಲಿ.
ತದೆ ಪಿಲಾತನೆ ಮೇ ಕೆತ್ರು ಕರ‍್ಯೊತೋಬಿ ಚಾ಼ಲ್‌ಷೆ ಕೊಯ್ನಿ, ಅದ್ಮಿಖ್ಹಾರು ಕಲ್ಹಾಗಟ್ ಕರೆಜಾ಼ಯ್ ಕರಿ ಮಾಲುಮ್ ಕರಿಲೀನ್, ಪಾಣಿ ಲೀನ್, ಅದ್ಮಿನ ಖ್ಹಾಮ್ಣೆ ಇನ ಹಾತ್ನ ಧೊಯಿಲಿನ್, “ಆ ಅದ್ಮಿನ ಮರೈನಾಖನ ಮೇ ಜಿಮ್ಮೇದಾರ್ ಕಾಹೆ, ಆ ತುಮೇಸ್ ಕರುಕರಸ್ತೆ!” ಕರಿ ಬೋಲ್ಯೊ.
“ಶಾತ್ಬಿ ಗಲ್ತಿಕೊಂತೆ ಅದ್ಮಿನ ಧೋಕೇಥಿ ಮರೈನಾಖಿದ್ಯವಾನ ಧರಿ ದೀನ್, ಮೇ ಪಾಪ್ ಕರ‍್ಯೊ” ಕರಿ ಬೋಲ್ಯೊ. ತದೆ ಇವ್ಣೆ, “ಇನ ಹಮೆ ಶಾತ್ ಕರಿಯೆ? ಯೋ ತಾರು ಮಾಮ್ಲ!” ಕರಿ ಜ಼ವಾಬ್ ದಿದು.
ಖ್ಹೋಶಿಪಾಯಿನೊ ಮೋಟಾನೆ ಅಜು಼ ಇನಜೋ಼ಡೆ ಯೇಸುನ ಕಾವ್ಲಿ ಕರುಕರ್ತುಥೂತೆ ಇವ್ಣೆ ಜ಼ಮೀನ್ ಹಲ್ಯುತೆ ಅಜು಼ ಚಾ಼ಲ್ಯುತೆ ಖ್ಹಾರಸ್ನ ದೇಖಿನ್, ಘಣು ಡರಿನ್, “ಖ್ಹಾಚಮಾಬಿ ಆ ದೇವ್‌ನೊ ಛಿಯ್ಯೊ ಹುಯಿರ‍್ಹೋಥೊ!” ಕರಿ ಬೋಲ್ಯು.
ಕತೋಬಿ ಬಿಜೇಕ್ ಜ಼ಣಾನೆ ಇನ ಗುರ್‌ಕೈನ್, “ತುನ ದೇವ್‌ನೂ ಡರ್ ಕೊಯ್ನಿಕಿ ಶು? ತುನಾಬಿ ಇಮ್ನಿಸ್ ನಿಶತ್ ಮಳಿರ‍್ಹೀಸ್‌ನಿ.
ಅಜು಼ ಇನೆ ಯೇಸುನ, “ಯೇಸು, ತೂ ರಾಜ್ಯಲೀನ್ ಆವಾನಿ ವಖ್ಹತ್‌ಮ, ಮನ ಯಾದ್ ಕರಿಲಿಜೊ!” ಕರಿ ಬೋಲ್ಯೊ.
ನಂಬವಾಳ ಹುಯಿರ‍್ಹಾತೆ ತುಮಾರ ಜೋ಼ಡೆ ಹಮಾರಿ ಚಾ಼ಲ್‍ಚ಼ಲಣ್‍ಮ ಖ್ಹಾಚಿಥಿಬಿ ಪರಿಶುದ್ಧಬಿ, ನೀತಿವಾಳಬಿ ಅಜು಼ ನಿರ್ದೋಷಿ ಥಾ, ಕರಿ ಬೋಲಾನ ತುಮೇಬಿ ಸಾಕ್ಷಿ ಅಜು಼ ದೇವ್‌ಬಿ ಸಾಕ್ಷಿ ಹುಯಿರ‍್ಹಾಸ್.
ಅಮ್‌ರ‍್ಹವಾಪರ್ ದೇವ್ನ ಅಧೀನ್‌ಹುಯಿನ್ ಶೈತಾನ್ನ ಡರಾವೊ ತದೆ ಯೋ ತುಮುನ ಮ್ಹೇಲಿನ್ ಮಿಲೈನ್ ಜಾ಼ಶೆ.
ಯೇಸು ಕ್ರಿಸ್ತಕರಿ ಬೋಲಾನು ಶನು ದೋಷ್‍ಕೊಂತೆ, ಶುದ್ದ ಹುಯಿರ‍್ಹುತೆ ಮೇಂಢಾನ ಚೆಲ್ಕಾನು ಕಿಮ್ಮತ್ನ ಲ್ಹೋಯಿಥೀಸ್‍ಕರಿ ತುಮುನ ಮಾಲುಮ್‍ಛಾ಼ನಿ.
ಗಾಳೆ ದ್ಯವಾಳನ ಪಾಛೊ಼ ಗಾಳೆದಿದೊಕೊಯ್ನಿ. ಯೊ ಖ್ಹತಾಪ್ಣಿ ಕರಾನಿ ವಖ್ಹ್‌ತೆ ಕಿನಾಬಿ ಡರಾಯೊಕೊಂತೆ, ನ್ಯಾವ್‌ಥಿ ತೀರ್ಪ್ ಕರಾವಾಳನ ಇನ ಕಾಮ್ನ ದಿನಾಖಿದಿದೊ.