4 ಖಿವು ಏಕ್‍ಜ಼ಣೊ ಅದ್ಮಿಮ ವತಾಳಿಲೇವ್ಣು ಕರಿ ಇಷ್ಟ ಪಡಸ್‍ಕಿ ಯೋ ಇನಕಾಮ್‍ನ ಲಪಾಡಿನ್ ಕರಾಕೊಯ್ನಿ. ಶನಕತೊ ತೂ ಅದ್ಭುತ್ ಕಾಮ್ನ ಕರಾಸ್, ಇನಖ್ಹಾಜೆ, ಆ ಜಗತ್ನ ಖ್ಹಾಮ್ಣೆ ತಾರುತೂಸ್ ವತಾಳಿಲೆ” ಕರಿ ಬೋಲ್ಯು.
ಇವ್ಣೆ ಅದ್ಮಿನ ಖ್ಹಾರು ದೆಖಾವಾದೆ ಕರಿ ಇವ್ಣು ಕಾಮ್ನ ಕರಾಸ್. ವಚನ್ ಲೀಖೈರ‍್ಹೂತೆ ಪಟ್ಟಿಯೇನ ತಾಳ್ವಪರ್ ಅಜು಼ ಡಂಟ್‌ಪರ್ ಭಾಂದಿರಾಖಾಸ್ತೆ ದೇಖೊ. ಇವ್ಣೆ ಪೇರ‍್ಹಾಸ್ತೆ ಝ಼ಗ್ಗಾವ್‍ನ ಗೊಂಡಾನ ಲಾಂಬು ಕರಿಲೇಸ್!
“ತೂ ದೇವ್‌ನೊ ಛಿಯ್ಯೊ ಉಶೇತೊ, ಹಜ್ಜಾ಼ಥೊ ಹೇಟ್ ಕೂದ್, ‘ದೇವ್ ತಾರಿ ಬಾರೇಮ ಇನ ದೂತರ್‌ನ ಹುಕುಮ್ ದಿಶೆ; ತಾರ ಗೋಡೊ ಬಂಡಾನ ಠೋಕರ್ ನಾಲಗ್ನುತೆ ತಿಮ್ ಯೋ ತುನ ಹಾತ್‌ಮ ಪಾಡಿಲಿಶೆ. ಕರೀಬಿ ಪವಿತ್ರ ದಪ್ತರ್‌ಮ ಲೀಖೈರ‍್ಹೂಸ್‌ನಿ” ಕರಿ ಬೋಲ್ಯೊ.
“ತುಮೆ ಉಪವಾಸ್ ಕರಾನಿ ವಖ್ಹತ್‌ಮ, ಖೋಟ್ ದಿಲ್‌ವಾಳನಿಘೋಣಿ ಮ್ಹೋಡು ನಾ ಮುರ್‌ಝೈ಼ಲೇಣು. ಇವ್ಣೆ ಉಪವಾಸ್ ಛಾ಼ ಕರಿ ಅದ್ಮಿಯೇನ ವತಾಳಿಲೆವಾನಖ್ಹಾಜೆ ಇವ್ಣು ಮ್ಹೋಡಾನ ಇಮ್ ಕರಿಲೇಸ್, ಮೇ ತುಮೂನ ಖ್ಹಾಚಮಾಬಿ ಬೋಲುಸ್ಕಿ, ಇವ್ಣುನ ಮಳ್‌ಣುತೆ ಇನಾಮ್ ತದೇಸ್ ಮಳಿಗಯು.
“ತುಮೆ ಪ್ರಾರ್ಥನೆ ಕರಾನಿ ವಖ್ಹತ್‌ಮ, ಖೋಟ್ ದಿಲ್‌ವಳಾನಿಮತ್ ನಕೊ ಪ್ರಾರ್ಥನೆ ಕರ್; ಅದ್ಮಿಖ್ಹಾರು ದೇಖಾದೆಕರಿ ಇವ್ಣೆ ಸಬೇನು ಮಂದಿರ್‌ಮ ಅಜು಼ ಗಲ್ಲಿಯೇನು ಚೌ಼ಕ್‌ಮ ಭೀರಿನ್, ಪ್ರಾರ್ಥನೆ ಕರಾನ ಆಖ್ಹ್‌ಕರಾಸ್. ಮೇ ತುಮೂನ ಖ್ಹಾಚಮಾಬಿ ಬೋಲುಸ್ಕಿ, ಇವ್ಣುನ ಮಳ್‌ಣುತೆ ಇನಾಮ್ ತದ್ದೇಸ್ ಮಳಿಗಯು.
ಅಛ್ಛು಼ ಅದ್ಮಿ ಇನ ಮನ್‌ಮ ಜ಼ಮಕರಿರಾಖ್ಯೂತೆ ಅಛ್ಛಿ ಕಣ್ಗಿಮಾಥು ಅಛ್ಛಾ಼ನ ಭಾರ್ ಕಾಡಸ್; ಕತೋಬಿ ಖರಾಬ್ ಅದ್ಮಿ ಇನ ಮನ್‌ಮ ಜ಼ಮಕರಿರಾಖ್ಯೂತೆ ಖರಾಬ್ ಕಣ್ಗಿಮಾಥು ಖರಾಬ್‌ನ ಭಾರ್ ಕಾಡಸ್. ಮನ್‌ಮ ಶಾತ್ ಛಾ಼ಕಿ ಯೋಸ್ ಮ್ಹೋಡವಾಟೆ ನಿಕ್ಳಸ್.
ತದೆ ಯೇಸುನೆ, “ಮೇ ಕದೇಬಿ ಜಗತ್ನ ಖ್ಹಾಮ್ಣೆಸ್ ವಾತೆ ಬೋಲಿರಾಖ್ಯೊಸ್; ಯೆಹೂದ್ಯ ಅದ್ಮಿಖ್ಹಾರು ಎಕ್ಟು ಹುಯಿನ್ ಆವಸ್ತೆ ಸಭೆ ಭರಾವನು ಮಂದಿರ್‌ಮ ಅಜು಼ ಮೋಟಿ ಮಂದಿರ್‌ಮ ಮೇ ಕದೇಬಿ ಬೋಲಿವತಾಳ್‌ತೊ ಆಯೊ, ಮೇ ಲಪೀನ್ ಕದೇಬಿ ಶಾತ್ಬಿ ಕೋ ಬೋಲಿರಾಖ್ಯೊನಿ.
ಇನಖ್ಹಾಜೆ ಯೇಸುನ ಭೈಯೇ ಇನ, “ತೂ ಕರಾನು ಕಾಮ್‌ಖ್ಹಾರು ತಾರು ಶಿಷ್ಯರ್‌ಬಿ ದೇಖಾನ ಖ್ಹಾಜೆ, ಗಲಿಲಾಯ ಮ್ಹೇಲಿನ್ ಯೂದಾಯಾನ ಜಾ಼.ಕರಿ ಬೋಲಾಖ್ಹತರ್
ಯೇಸುನ ಭೈಯೇಬಿ ಇನ ನಂಬ್‍ತುಥು ಕೊಯ್ನಿ.