9 ಇನಪಾರ್ ಯೋ ಟಾಪನ ಅಜು಼ ಉಭ್‌ರ‍್ಯುತೆ ಖ್ಹಾರುಸ್ ರೋಗಿಬಿ ಪೌಲಕನ ಐನ್ ಗುಣ್‌ಹುಯು.
ಇನಿ ಬಾರೇಮಾನಿ ಖಬರ್ ಸಿರಿಯ ದೇಖ್ಹ್ ಅಖ್ಖುಸ್ ಫೈಲಿಗಯು. ತದೆ ಆದ್ಮಿಖ್ಹಾರು ರೋಗ್‌ಮ ರ‍್ಹವಾಳನ ಯೇಸುಕನ ಲಾಯು, ಇವ್ಣಾಮ ಕೈಯೆಕ್ಕಿ ತರ‍್ಹಾನು ರೋಗ್-ರಾಯಥಿ ತರಪ್‌ಡುಕರ್ತುಥೂತೆ ಅಜು಼ ಭೂತ್ ಧರಿರಾಖ್ಯುಥೂತೆ, ಮಿರ್‌ಘಿ ಥೂತೆ ಅಜು಼ ಲಕ್‍ವೊ ಮಾರಿರಾಖ್ಯುಥೂತೆ ಇವ್ಣ ಅಖ್ಖಾನ ಇನಕನ ಲಾಯು. ಯೇಸುನೆ ಇವ್ಣ ಖ್ಹಾರಸ್ನ ಅಛ್ಛು಼ ಕರ‍್ಯೊ.
ಇವ್ಣೆ ಯೋ ಟಾಪಾನಿ ಅಖ್ಖಿಬಾಜು಼ ಜಾ಼ತಹುಯಿನ್ ಪಾಫೋಸ್ ಕರಿ ಗಾಮ್‌ನಗಯ. ಇವ್ಣೆ ಜಾ಼ದುಜ಼ಮ್‌ಕರ್ ಕರಾವಾಳ ಏಕ್ ಯೆಹೂದ್ಯವಾಳನ ಪಾಫೋಸ್ಮ ದೇಖ್ಯ. ಇನು ನಾಮ್ ‘ಬಾರ್‌ಯೇಸು’ ಯೋ ಏಕ್ ಝೂ಼ಟುಪ್ರವಾದಿ ಹುಯಿರ‍್ಹೊಥೊ.
ಇವ್ಣೆ ಹಮೂನ ಜಾ಼ಖ್ಹತ್ ಮರ್ಯಾದಿ ದಿದು. ಹಮೆ ಹಿಜ್ಜಾ಼ಥು ಜಾ಼ವನ ಖ್ಹವಾರನಿ ವಖ್ಹ್‌ತೆ ಹಮೂನ ಜ಼ರೂರತ್‌ಥೂತೆ ಖ್ಹಾರು ಚೀಜ಼್ ಲಯಿನ್ ದಿದು.
ಪೋಪ್ಲಿಯಾನೊ ಬಾ ತಾವ್‍ಥೀಬಿ ಲ್ಹೊಯ್ಯವ್‌ಹುಯಿನ್ ಛಾ಼ದ್ರಿ ಧರಿರಾಖ್ಯೊಥೊ.ಪೌಲ ಇನಕನ ಜೈ಼ನ್ ಪ್ರಾರ್ಥನೆ ಕರೀನ್ ಇನ ಮುಡ್‌ಕ್ಯಪರ್ ಹಾತ್‍ಮ್ಹೇಲಿನ್ ಅಛ್ಛುಕರ‍್ಯೊ.
ಅಪೊಸ್ತಲರ್ ಖ್ಹಾರು ಕೈಏಕ್ ಖ್ಹಣೇದ್‍ನು ಕಾಮ್‍ಬಿ ಅದ್ಬುತ್‌ಕಾಮ್‌ಬಿ ಕರ‍್ಯು. ಅದ್ಮಿಖ್ಹಾರು ಯೋ ಕಾಮ್ನ ದೇಖ್ಯು. ಅಜು಼ ಅಖ್ಖುಜ಼ಣು ಎಕ್ಟು ಹುಯಿನ್ ಸೊಲೊಮೋನ್ನ ಛ಼ತ್‌ಕನ ಮಳಿನ್ ಆವ್ತುಥು.
ಅಮ್ ರ‍್ಹವಾನಿ ವೇಳ್ಮ ಅದ್ಮಿಖ್ಹಾರು ರೋಗ್‌ವಾಳನ ಡೋಲಿಪರ್ ಪಾಡಿಲೀನ್ ಪೇತ್ರ ಆವಾನಿ ವಾಟ್‌ಪರ್ ಲಯಿನ್, ರೋಗ್‌ವಾಳನ ಉಪ್ಪರ್ ಇನಿ ಛಾ಼ಳಿಪಡಾದೆ ಕರಿ ವಾಟ್‌ಪರ್ ಮ್ಹೆಲ್ತುಥು. ಪೇತ್ರನಿ ಛಾ಼ಳಿ ಪಡಿತೋಬಷ್ ಕರಿ ಅದ್ಮಿಖ್ಹಾರಾನೆ ಸೋಚಿಲಿದು.