11 ಮೇ ದೇವ್ನಿ ಆರಾದನೆ ಕರಾನ ಯೆರೂಸಲೇಮ್ನ ಜೈ಼ನ್, ಭಾರ ರೋಜ಼್ ಖಲಿ ಹುಯಿರಾಥ ಕರಿ ತೂ ಮಾಲುಮ್ ಕರಿಲೀಯೆಜಾ಼ಯ್.
ಅಗಲ್ಯದನ್ನೆ ಪೌಲನೆ ಹಮುನಖ್ಹಾರನ ಬುಲೈಲಿನ್ ಯಾಕೋಬನ ಮಳಾನ ಗಯ. ತದೆ ಸಬೇನು ಖ್ಹಾರಾಸ್ ಗಲ್‌ಢಬಿ ಹಿಜ್ಜಾ಼ಸ್ ಥಾ.
ಪೌಲನ ಉಪ್ಪರ್ ಯೆಹೂದ್ಯರ್ ಖ್ಹಾರು ಶನ ಅಪರಾದ್ ನಾಖುಕರಸ್ ಕರಿ ಮಾಲುಮ್ ಕರಿಲ್ಯಾವಾನಖ್ಹಾಜೆ ಸೇನಾಧಿಪತಿನೆ ತೀರ್ಮಾನ್ ಕರೀನ್, ಇನವ್ಹಾಣೆ ಪೌಲನ ಬೇಡಿನ ಛೋ಼ಡಿನ್ ಮಹಾಯಾಜಕಬಿ ನ್ಯಾವ್ನಿಸಬೆವಾಳು ಖ್ಹಾರುಸ್ ಭರಾವ್ಣುಕರಿ ಹುಕುಮ್ ದೀನ್, ಪೌಲನ ಬುಲೈಲೀಜೈ಼ನ್ ಇವ್ಣಖ್ಹಾಮೆ ಭೀರಾಖ್ಯೊ.
ಯೋ ದನ್ನಿ ರಾತ್ಮ ಪ್ರಭು ಪೌಲಕನ ಭೀರಿನ್, “ಭಾಲಿಥಿ ರ‍್ಹೇ; ತೂ ಯೆರೂಸಲೇಮ್ಮ ಮಾರಿಬಾರೇಮ ಬೋಲ್ಯೊತೆ ಇಮ್ಮಸ್ ರೋಮ್‍ನ ಅದ್ಮಿನಾಬಿ ಸಾಕ್ಷಿ ಬೋಲ್ನುಕರಿ ಬೋಲ್ಯೊ.
ಇನಪಾರ್ ಖ್ಹೋಶಿಪಾಯಿನ ಮೋಟಾನೆ ಬೇಜ಼ಣ ಸೇನಾಧಿಕಾರಿನ ಬುಲೈನ್ ಇವ್ಣುನ, “ಆ ರಾತ್ ನೌಘಂಟಾನ ಕೈಸರೈ ಖ್ಹಯೇರ‍್ನ ಜಾ಼ವಾನ ಬೇಖ್ಹೋ ಶಿಪಾಯಿನಾಬಿ, ಖ್ಹಡ್‌ತೀನಿಖ್ಹ್ ಅದ್ಮಿ ಘೋಡಾಚ಼ಲಾವಳನಾಬಿ, ಬೇಖ್ಹೊ ಅದ್ಮಿ ಭಾಲವಳಾನಾಬಿ, ತಯಾರ್‌ಕರೊ.
ಪಾಚ಼್ ದನ್‍ಹುವಾದಿನ್ ಗಲ್‌ಢಯಾಜಕ್ ಅನನೀಯನೆ, ಯೆಹೂದ್ಯರ್‌ನ ಥೋಡಘಲ್ಡಾನ ಅಜು಼ ತೆರ್ತುಲ್ಯಕರಿ ಏಕ್ ವಕೀಲ್ನ ಬುಲೈಲಾಯಿನ್, ರಾಜ್ಯಪಾಲ್‌ನ ಖ್ಹಾಮ್ಣೆ ಪೌಲನ ಉಪ್ಪರ್ ಫಿರಾದ್ ಬೋಲಾನ ಕೈಸರೈ ಖ್ಹಯೇರ‍್ನ ಆಯೊ.
“ಥೋಡ ವರಖ್ಹ್‌ನ ವಾರ್ ಮೆ, ಮಾರ ಶೊಂತ್ ದೇಖ್ಹ್‌ವಾಳಾನ ಪೈಶಾ, ಕಾಣ್ಕೆ ಅಜು಼ ಮುಡಪ್ ದ್ಯಾವಾನ ಆಯೋಥೊ.