18 ಅಗಲ್ಯದನ್ನೆ ಪೌಲನೆ ಹಮುನಖ್ಹಾರನ ಬುಲೈಲಿನ್ ಯಾಕೋಬನ ಮಳಾನ ಗಯ. ತದೆ ಸಬೇನು ಖ್ಹಾರಾಸ್ ಗಲ್‌ಢಬಿ ಹಿಜ್ಜಾ಼ಸ್ ಥಾ.
ಯೋ ಭಾರಜ಼ಣ ಅಪೊಸ್ತಲರ‍್ನು ನಾಮ್ ಕೆಹುಕತೊ: ಪಹಿಲೊ ಪೇತ್ರ ಕರಿ ಬೋಲೈಲಿದೋತೆ ಸೀಮೋನ, ಇನೊ ಭೈ ಅಂದ್ರೆಯ, ಜೆಬೆದಾಯನೊ ಛಿಯ್ಯೊ ಯಾಕೋಬ ಅಜು಼ ಇನೊ ಭೈ ಯೋಹಾನ.
ಇವ್ಣೆ ಪೈಶಾನ ಜ಼ಮಕರೀನ್ ಇನ ಬಾರ್ನಬ ಅಜು಼ ಸೌಲನ ಹಾಥ್ಥಿ ಯುದಾಯಮ ಥೂತೆ ಸಭೆನ ಗಲ್‌ಢಾವ್ನ ಲಯಿನ್ ದಿದಾ.
ಪೇತ್ರನೆ ಇವ್ಣುನ ಶೊಪೊರ‍್ಹೇವೊ ಕರಿ ಹಾತ್‌ನೊ ಇಷಾರ್ಕೊ ಕರೀನ್, ಪ್ರಭುನೆ ಇನ ಜೇಲ್‌ಮಾಥು ಕಿಮ್ ಛೋ಼ಡಾಯೊ ಕರಿ ಯೋ ಬಾರೇಮ ಇವ್ಣುನ ಅಖ್ಖು ಬೋಲಿ ಒತಾಳ್ಯೊ. “ಯಾಕೋಬ್‌ನಾಬಿ ಅಜು಼ ವಿಶ್ವಾಸಿವೊನಾಬಿ ಆ ಸಮಚಾರ್‌ನ ಬೋಲೊ” ಕರಿ ಬೋಲ್ಯೊ. ಇನಕೇಡೆಥು ಪೇತ್ರ ಬಿಜಿ ಝ಼ಗೊ ನಿಕ್ಳಿಗಯೊ.
ಇವ್ಣೆ ವಾತ್ ಬೋಲಾನು ಭೀರಾಖಾದಿನ್ ಯಾಕೋಬನೆ, “ಮಾರ ಭೇನೆ ಭೈಯೇವೊ ಮಾರಿ ವಾತೆ ಖ್ಹಮ್‍ಜೊ,
ಪೌಲ, ಬಾರ್ನಬನೆ ಆ ಉಪದೇಶ್‍ನ ವಿರೋದ್ ಕರಿನ್ ಇವ್ಣಿಜೋ಼ಡೆ ಅಬ್ಬಾಜ಼ಬ್ಬಿ ಬೋಲ್ಯ. ಆ ವಿವಾದ್ನಿ ಬಾರೇಮ ಅಪೊಸ್ತಲರ‍್ನಿ ಜೋ಼ಡೆ ಬಿಜು಼ ಗಲ್‌ಢಾವ್‌ನಿಜೋ಼ಡೆ ವಾತ್‍ಚೀತ್ ಕರಾನ ಪೌಲ,ಬಾರ್ನಬ ಬಿಜು಼ ಅಲಕ್ ಥೋಡಜ಼ಣಾನ ಯೆರೂಸಲೇಮ್ನ ಮೋಕ್ಲಾನ ಸಬೆವಾಳು ನಿರ್ಧಾರ್ ಕರ‍್ಯು.
ಇವ್ಣ ಹಾತ್ಮ ಲೀಖಿನ್ ದೀರಾಖ್ಯುಥೂತೆ ಶಾತ್‍ಕತೊ, ಭಯೇಖ್ಹಾರ ಹುಯಿರಾತೆ ಅಪೊಸ್ತಲರ‍್ನೇಬಿ ಗಲ್‌ಢಖ್ಹಾರಾನೇಬಿ ಅಂತಿಯೋಕ್ಯ, ಸಿರಿಯ, ಕಿಲಿಕ್ಯ ತಬರ್‌ಖಾಸ್‍ಮ ಛಾ಼ತೆ ಯೆಹೂದ್ಯರ್‌ಕಾಹೆತೆ ಭೈಯೇ ಭೇನೇನ ಹಮಾರಿ ಖ್ಹಲಾಮ್;
ತದೆ ಅಪೊಸ್ತಲರ್ ಖ್ಹಾರು ಬಿಜು಼ ಗಲ್‌ಢಖ್ಹಾರು ಆ ವಾತೆನ ಬಾರೇಮ ಸೋಚಾನಖ್ಹಾಜೆ ಎಕ್ಟು ಹುಯು.
ಪೌಲನೆ ಮಿಲೇತಥೊ ಎಫೆಸ ಖ್ಹಯೇರ‍್ನ ಸಬೆನ ಗಲ್‌ಢವ್‍ಖ್ಹಾರಾನ ಏಕ್ ಸಂದೇಶ್ ಬೋಲಿಮೋಕ್ಲಿನ್ ಇವ್ಣುನ ಬುಲೈಮಂಗಾಯೊ.
ಮೇ ದೇವ್ನಿ ಆರಾದನೆ ಕರಾನ ಯೆರೂಸಲೇಮ್ನ ಜೈ಼ನ್, ಭಾರ ರೋಜ಼್ ಖಲಿ ಹುಯಿರಾಥ ಕರಿ ತೂ ಮಾಲುಮ್ ಕರಿಲೀಯೆಜಾ಼ಯ್.
ಕತೋಬಿ ಪ್ರಭುನೊ ಭೈಹುಯಿರ‍್ಹಾವಳೊ ಯಾಕೋಬ್ ಕಾಹೆತೆ ಅಪೊಸ್ತಲರ್‌ಮ ಬಿಜು಼ ಕಿನಾಬಿ ಕೊ ದೇಖ್ಯೋನಿ.
ಸಬೇನು ಖಂಬುಕರಿ ಬೋಲೈಲಿದಹುಯ ಯಾಕೋಬ್, ಪೇತ್ರ, ಯೋಹಾನ ಇವ್ಣೆ ದೇವ್ನೆ ಮನ ದಿರಾಖ್ಯೋತೆ ವಾರ್‌ಖ್ಹಾನ ಮಾಲುಮ್ ಕರಿಲಿನ್ ಗಳ್‍ಜೋ಼ಡ್‍ಥಿ ರ‍್ಹವಾನು ವತಾಳನಖ್ಹಾಜೆ ಮನಾಬಿ ಬಾರ್ನಬನಾಬಿ ಹಾತ್ ಮಳಾಯೊ. ಅಜು಼ ತುಮೆ ಯೆಹೂದ್ಯರ್‌ಕಾಹೆತೆ ಅದ್ಮಿಕನ ಜಾ಼ವೊ, ಹಮೆ ಯೆಹೂದ್ಯರ್‌ಕನ ಜೈ಼ಯೇಸ್‌ಕರಿ ಮಾನಿಲಿದ.
ದೇವ್‍ನಾಬಿ ಪ್ರಭುಹುಯಿರೋತೆ ಯೇಸು ಕ್ರಿಸ್ತನಾಬಿ ದಾಸ ಹುಯಿರೋತೆ ಯಾಕೋಬ ಅಲಕ್ ದೇಖ್ಹ್‌ಮ ಛಿಡ್‍ಕೈರ‍್ಹುತೆ ಭಾರ ಖೂಮ್‍ವಾಳನ ಲಿಖಾನು ಶಾತ್‍ಕತೊ, ತುಮೂನ ಅಛ್ಛು಼ ಹುವಾದೆ.