41 ಇನೆ ಬೋಲ್ಯೊತೆ ಖ್ಹಮ್‌ಜಿನ್ ಬ್ಯಾಪ್ತಿಸ್ಮ ಲೀಲಿದು. ಯೋ ದನ್ ಕಮ್‍ಶಿಕಮ್ ತೀನ್ ಹಜಾ಼ರ್ ಅದ್ಮಿಖ್ಹಾರು ವಿಶ್ವಾಸಿನ ಟೋಳ್ಮ ಮಳೀಗು.
ಮೇ ತುಮೂನ ಖ್ಹಾಚ ಬೋಲುಸ್, ಮನ ನಂಬವಾಳೊ ಮೇ ಕರ‍್ಯೊತೆ ಕಾಮ್ನಖ್ಹಾರು ಯೋಬಿ ಕರ್ಶೆ, ಎತ್ರೇಸ್ ಕಾಹೆತೆ ಇನೇಥಿ ಮಹಾನ್ ಕಾಮ್ನ ಖ್ಹಾರು ಕರ್ಶೆ, ಶನಕತೊ ಮೇ ಬಾಕನ ವಳ್ಯೊಜ಼ವುಸ್.
ಸೀಮೋನ್ ಪೇತ್ರನೆ ಡೋಣ್ಣಾ ಮಹಿ ಜೈ಼ನ್, ಜಾ಼ಳಾನ ಕನಾರಿಕನ ಖೇಚಿ ಲಾಯೊ. ಯೋ ಏಕ್‌ಖ್ಹೊ ತೀನ್‌ಉಪ್ಪರ್ ಅಡೈವಿಖ್ಹ್ ಮೋಟಾ ಮಾಛ್ಲಾ಼ಥಿ ಭರೈರ‍್ಹೂಥು, ಎತ್ರುಬಲ್ಲ ಮಾಛ಼್‌ಲು ರ‍್ಹಯುತೋಬಿ ಜಾ಼ಳು ಫಾಟ್ಯುಕೊಯ್ನಿ.
ಥೋಡದನ್ ಬಾದ್‌ಮ, ವಿಶ್ವಾಸಿಮ ಖ್ಹುಮಾರ್ ಏಕ್‌ಖ್ಹೊ ವೀಖ್ಹ್ ಜ಼ಣು ಸಭೆಮ ಮಳೀನ್ ಅಯಿರ‍್ಹವಾಮ, ಪೇತ್ರನೆ ಬೀಚ್ಮ ಉಠಿ ಭೀರಿನ್:
ಪೌಲನಿ ಆ ವಾತೆನ ಖ್ಹಮ್‍ಜ್ಯುತೆ ಅಲ್ಹಾವ್ ಅದ್ಮಿಖ್ಹಾರು ಘಣು ಖುಷಿಕರೀನ್ ಪ್ರಭುನಿ ವಾತೇನಖ್ಹಾಜೆ ಸ್ತುತಿ ಕರ‍್ಯು. ಹಮೇಶಾನಿ ಜಿ಼ಂದ್‌ಗಿ ಲೀಲ್ಯಾವನ ಚೂ಼ಣೈರ‍್ಹುತೆ ಖ್ಹಾರೂಸ್ ವಿಶ್ವಾಸ್ ಕರ‍್ಯು.
ಅನ ಖ್ಹಮ್‍ಜ್ಯುತೆ ಇವ್ಣುನ, ದಿಲ್ಮ ಖ್ಹುಯಿ ಟೋಚಾ಼ವನಿಘೊಣಿ ಹುಯು. ಇವ್ಣೆ ಪೇತ್ರನ ಅಜು಼ ಉಭ್‌ರ‍್ಯಾತೆ ಅಪೊಸ್ತಲರ‍್ನ, “ಭೈಯೇವೊ ಹಮ್ಕೆ ಹಮೆ ಶಾತ್‍ಕರ್ನು?” ಕರಿ ಬೋಲ್ಯು.
ಇವ್ಣೆ ದೇವ್ನ ಖ್ಹರವ್‌ಕರ್ತೂಥು. ಅಜು಼ ಅದ್ಮಿಖ್ಹಾರಾನು ದಯಾನ ಲಿಲ್ಯಾವವಾಳ ಹುಯಿರ‍್ಹಾಥ. ಹರೇಕ್ ದನ್‍ಬಿ ಘಣು ಘಣು ಅದ್ಮಿಖ್ಹಾರು ರಕ್ಷಣೆ ಲೇವ್‍ಕರ್ತೂಥು. ಪ್ರಭುನೆ ಇವ್ಣುನ ಅಖ್ಖಾನ ವಿಶ್ವಾಸಿನಿ ಸಭೆಮ ಮಳವ಼್ ಕರ್ತೊಥೊ.
ಯೋ ಜ಼ಹಾಜ಼್‍ಮ ಹಮೆ ಬೇಖ್ಹೊ ಛೋ಼ಉಪ್ಪರ್ ಖ್ಹಡ್‌ತೀನಿಖ್ಹ್ ಜ಼ಣು ಥಾ.
ಯೊ ಪ್ರವಾದಿನಿ ವಾತೆನ ಖ್ಹಮ್‍ಜ಼ಕೊಂತೆ ಹರೇಕ್ ಜ಼ಣೊಬಿ ದೇವ್ನ ಅದ್ಮಿಥಿ ಅಲಕ್‌ಹುಯಿನ್ ನಾಶ್‌ಹುಯಿಜಾ಼ಶೆ.
ಕತೋಬಿ ದೇವ್ನಿ ವಚನ್ ಖ್ಹಮ್‍ಜಾ಼ವಾಳಾಮ ಕೆತ್ರೂಕಿಜ಼ಣು ವಿಶ್ವಾಸ್ ಕರ‍್ಯು; ಪರ್ಖ್ಹಾನಿ ಗಣ್ತೀಸ್ ಖ್ಹುಮಾರ್ ಪಾಚ಼್ ಹಜಾ಼ರ್ಥಿ ಜಾ಼ಖ್ಹತ್ ಹುಯು.
ಇನಪಾರ್ ಯೋಸೇಫ ಇನೊ ಬಾ ಹುಯಿರೋತೆ ಯಾಕೋಬ್‌ನಾಬಿ ಅಜು಼ ಪಾಚ಼್‌ಉಪ್ಪರ್ ಖ್ಹಡ್‌ತೀನಿಖ್ಹ್ ಜ಼ಣು ಮಾಯಮಾತ್ರ ಖ್ಹಾರಾನ ಈಜಿಪ್ಟ್ ದೇಖ್ಹ್‌ಮ ಬುಲೈಲಿದೊ.
ಹರೇಕ್‍ಜ಼ಣುಬಿ ಇನ ಉಪ್ಪರ್‌ಲ್ಯ ಅಧಿಕಾರಿಯೇನ ಅಧೀನ್ ಹುಯಿರ‍್ಹೇಣು; ಶನಕತೊ ದೇವ್‍ಥಿ ಪಣ್ಕಿ ಏಕ್‍ಜ಼ಣಾನಬಿ ಅದಿಕಾರ್ ರ‍್ಹೇಯಿಕೊಯ್ನಿ; ಛಾ಼ತೆ ಅದಿಕಾರ್ ದೇವ್‍ಥೀಸ್ ಆಯಿರ‍್ಹುಸ್.
ಪ್ರಭುನೆ ಅಜು಼ ಹಮೆ ಚಾ಼ಲಿಲಿದಾತೆ ಇಮ್ಮಸ್, ತುಮೇಬಿ ಚಾ಼ಲ್ಯಾ; ಎತ್ರೆಸ್ ಕಾಹೆತೆ ತುಮೆ ಘಣು ಲತಾಡ ಖ್ಹಮಾಳ್ಯಾತೋಬಿ, ಹಮೆ ಬೋಲ್ಯಾತೆ ಉಪದೇಶ್‍ನ ಪವಿತ್ರಾತ್ಮಥಿ ಪೈದಾಹುವಾಸ್ತೆ ಖ್ಹುಶಿಥಿ ಮಾನಿನ್ ಹಮಾರಿ ಸುವಾರ್ತೆನ ಖ್ಹಮ್‍ಜಿಲಿದ.
ಕತೊ ಅಗ್‍ಲ್ಯ ಹಗಾಮ್ಮ ನೋಹ ಜ಼ಹಾಜ಼್ ಭಾಂದಾನಿ ವಖ್ಹತ್‌ಮ ದೇವ್ ದೀರ್ಘಶಾಂತಿಥಿ ಟಿವೈರ‍್ಹವಾನಿ ವಖ್ಹತ್‌ಮ ಇವ್ಣೆ ಇನ ಅವಿಧೇಯ ಹುಯಿರ‍್ಹುಥು. ಯೋ ಜ಼ಹಾಜ಼್‍ಮ ಥೂತೆ ಆಟ್ ಅದ್ಮಿ ಖಲಿ ಪಾಣಿಮಾಥು ಬಚ್ಯು.
ಬೇನೊ ದೇವ್ನದೂತನೆ ಇನ ಕಟೋರಮ ಥೂತೆ ಇನ ದರ‍್ಯಾವ್‌ಪರ್ ರಂಚ್ಯೊ. ತದೆ ದರ‍್ಯಾವ್ನು ಪಾಣಿ ಮರ‍್ಯಹುಯಾನ ಲ್ಹೋಯಿನಿತರ ಹುಯಿಗು. ಅಜು಼ ದರ‍್ಯಾವ್‌ಮಾನು ಹರೇಕ್ ಜಿವ್ತು ಜೀವಿಬಿ ಮರಿಗು.