14 ಇನಖ್ಹಾಜೆ ವಿಶ್ವಾಸಿಖ್ಹಾರು ತದ್‌ನು ತದೇಸ್ ಪೌಲನ ದರ‍್ಯಾವ್ನ ಕನಾರಲಗು ಮೋಕ್ಲಿದಿದು. ಕತೋಬಿ ಸೀಲ ಅಜು಼ ತಿಮೊಥೆ ಇವ್ಣೆ ಬೆರೋಯಮಾಸ್ ರ‍್ಹೀಗ.
ಏಕ್ ಗಾಮ್ಮ ತುಮೂನ ಖ್ಹತಾಯೂತೊ, ಬಿಜ್ಜೇಕ್ ಗಾಮ್‌ನ ಮಿಲೈ ಜಾ಼ವೊ, ಅದ್ಮಿನೊ ಛಿಯ್ಯೊ ಆವಾನಮಹಿ ತುಮೆ ಇಸ್ರಾಯೇಲ್ ಅದ್ಮಿನು ಖ್ಹಾರಸ್ ಗಾಮ್ಮ ಫರೀನ್, ತುಮಾರು ಕಾಮ್ ಖತಮ್ ಕೊಕರಿರಾಕ್‌ಶುನಿ ಕರಿ ಮೇ ತುಮೂನ ಖ್ಹಾಚಾಮಬಿ ಬೋಲುಸ್.
ಥೋಡದನ್ ಬಾದ್‌ಮ, ವಿಶ್ವಾಸಿಮ ಖ್ಹುಮಾರ್ ಏಕ್‌ಖ್ಹೊ ವೀಖ್ಹ್ ಜ಼ಣು ಸಭೆಮ ಮಳೀನ್ ಅಯಿರ‍್ಹವಾಮ, ಪೇತ್ರನೆ ಬೀಚ್ಮ ಉಠಿ ಭೀರಿನ್:
ತದೆ ಅಪೊಸ್ತಲರ್‌ಬಿ ಸಬೆನ ಗಲ್‌ಢಖ್ಹಾರಾಬಿ ಬಿಜು಼ ಸಬೇನು ಖ್ಹಾರೂಸ್, ಪೌಲ ಬಾರ್ನಬನಿ ಜೋ಼ಡೆ ಇವ್ಣಮಾಥುಸ್ ಥೋಡುಅದ್ಮಿನ ಚೂ಼ಣಿನ್ ಅಂತಿಯೋಕ್ಯ ಖ್ಹಯೇರ‍್ನ ಮೋಕಲ್ನುಕರಿ ತೀರ್ಮಾನ್ ಕರ‍್ಯು. ಇನಖ್ಹಾಜೆ ಬಾರ್ಸಬ ಕರಿ ಬೋಲೈರ‍್ಹೋತೆ ಯೂದನಾಬಿ, ಸೀಲನಾಬಿ ಚೂ಼ಣಿನ್,ಯೋ ಖ್ಹಾರಾನ ಮುಖ್ಯಖ್ಹಾರು ಕರ‍್ಯು.
ಪೌಲನೆ ದೆರ್ಬೆ ಅಜು಼ ಲುಸ್ತ್ರಕರಿ ಖ್ಹಯೇರ್‌ಮ ಗಯೊ.ಹಿಜ್ಜಾ಼ ತಿಮೊಥೆಕರಿ ಏಕ್‍ಜ಼ಣೊ ಕ್ರಿಸ್ತನೊ ವಿಶ್ವಾಸಿ ಥೊ. ತಿಮೊಥೆನಿ ಆಯ ಯೆಹೂದ್ಯವಾಳಿ ಹುಯಿರ‍್ಹೀಥಿ ಅಜು಼ ಬಾ ಗ್ರೀಕ್‍ವಾಳೊ ಹುಯಿರ‍್ಹೋಥೊ.
ಯೋಸ್ ರಾತ್ಮ ವಿಶ್ವಾಸಿಖ್ಹಾರು ಪೌಲ ಸೀಲನ ಬೆರೋಯ ಕರಿ ಬೋಲಾನು ಬಿಜೇಕ್ ಖ್ಹಯೇರ‍್ನ ಮೋಕ್‍ಲ್ಯು. ಬೆರೋಯಮ ಪೌಲ ಸೀಲನ ಯೆಹೂದ್ಯರ್‌ನ ಸಭೆಮ ಗಯ.
ಪೌಲನ ಮ್ಹೇಲಿದ್ಯವಾನ ಗಯುಥೂತೆ ಖ್ಹಾರು ಇನ ಜೋ಼ಡ್ಮ ಅಥೇನ್ಸಲಗು ಗಯು. ಸೀಲನಾಬಿ ತಿಮೊಥೆಯನಾಬಿ ಮಳಿಹುಯಿಗುತೊ ತದೇಸ್ ಒಗ್ಗಿಸ್ ಇನಕನ ಆವ್ಣುಕರಿ ಪೌಲನಿ ಹುಕುಮ್‍ಥಿ ಪಾಛ಼ ಆಯ.
ಇವ್ಣಾಮ ಥೋಡಜ಼ಣು ದೇವ್ನು ಭಕ್ತರ್ ಹುಯಿರುತೆ ಗ್ರೀಕ್‌ನು ಮೋಟು ಝೂ಼ಂಡ್ ಅಜು಼ ಮುಖ್ಯ ತಯೇಡಾಮ ಕೈಯೆಕ್‍ಜ಼ಣಿ ಪೌಲ ಅಜು಼ ಸೀಲಾನಿ ಜೋ಼ಡೆ ಮಳಿಗಯು.
ಕತೋಬಿ ಇವ್ಣೆ ಹಿಜ್ಜಾ಼ ದೆಖಾಯುಕೊಂತೆ ಇನಖ್ಹಾಜೆ ಇವ್ಣೆ ಯಾಸೋನನಾಬಿ ಥೋಡ ವಿಶ್ವಾಸಿಖ್ಹಾರಾನ ನಂಗರ‍್ನ ಅಧಿಕಾರಿನ ಖ್ಹಾಮ್ಣೆ ಖೇಚಿಲೈನ್; ಆ ಅದ್ಮಿಖ್ಹಾರು ಜಗತ್ನಿಅಖ್ಖಿಸ್ ಬಾಜು಼ ಗಲಾಟ್ ಉಠಾಡಿನ್ ಹಮ್ಕೆ ಹಜ್ಜಾ಼ಬಿ ಐರ‍್ಹಾಸ್.
ಇಮ್ಮಸ್ ಮೆಕೆದೋನ್ಯಮ ಥಾತೆ ಸೀಲ ಅಜು಼ ತಿಮೊಥೆ ಇವ್ಣೆ ಪೌಲಕನ ಆಯ. ಇನಪಾರ್ ಅದ್ಮಿಖ್ಹಾರಾನ ಇವ್ಣಿವಾತೆನ ಬೋಲಿ ಖ್ಹಮ್‌ಜಾ಼ಡಮ ಪೌಲನೆ ಇನಿ ವಖ್ಹತ್‍ಖ್ಹಾರು ಕಾಡಿನಾಖ್ಯೊ. ಯೇಸುಸ್ ಮೆಸ್ಸಿಯಕರಿ ಬೋಲಾನು ಇನೆ ಯೆಹೂದ್ಯರ್‌ನ ದೇಖಾಡಿದಿದೊ.
ಕತೋಬಿ ಇನೆ ತಿಮೊಥೆ ಅಜು಼ ಎರಸ್ತ ಕರಿ ಬೇಜ಼ಣು ಪೌಲನ ಮದತ್ ಕರಾವಾಳನ ಪೌಲನೆ ಇವ್ಣುನ ಪಹಿಲೇಸ್ ಮೆಕೆದೋನಿಯನ ಮೋಕ್ಲಿದಿದೊ.ಅಜು಼ ಯೊ ಬಿಜೂ಼ಬಿ ಥೋಡದನ್ ಏಷ್ಯಾಮಾಸ್ ರ‍್ಹೀಗಯೊ.
ಹಿಜ್ಜಾ಼ ತೀನ್ ಮಹಿನ ಕಾಡಾನ ಬಾದ್ಮ ಸಿರಿಯ ದೇಖ್ಹ್‌ನ ದರ‍್ಯಾವ್‍ನ ಮಾರ್ಗೆ ಜಾ಼ವ್ಣುಕರಿ ರ‍್ಹವಾನಿ ವಖ್ಹತ್‌ಮ, ಥೋಡ ಯೆಹೂದ್ಯವಾಳನೆ ಪೌಲನಿ ವಿರೋದ್ ಗಪ್ಲಥ್ಥಿ ಖರಾಬ್ ಕಾಮ್ ಕರ‍್ಯುತೆ ಮಾಲುಮ್‍ಹುಯಿನ್ ಯೋ ಪಾಛೊ಼ ಫರೀನ್ ಮೆಕೆದೋನಿಯಾಥೊ ಸಿರಿಯನ ಜಾ಼ವ್ಣುಕರಿ ಖ್ಹಯಾಲ್ ಕರಿಲಿದೊ.
ಏಕ್‍ರಾತ್ ಪೌಲನ ಥೋಡ ಶಿಷ್ಯರ‍್ನೆ ಇನ ಖ್ಹಯೇರ‍್ನ ಭಾರ್ ಮೋಕ್ಲಾನಟೇಕೆ ಇನ ಏಕ್ ಟೋಕ್ರಾಮ ಬೆಖ್ಹಾಡಿನ್ ಖ್ಹಯೇರ‍್ನ ಭೀತ್‌ನ ಉಪ್ಪರ್‌ಥು ಹೇಟ್ ಉತಾರಿದಿದು.
ಅನ ಮಾಲುಮ್ ಕರ‍್ಯುತೆ ವಿಶ್ವಾಸಿಖ್ಹಾರು ಇನ ಕೈಸರೈ ಖ್ಹಯೇರ‍್ನ ಬುಲೈಲಿಜೈ಼ನ್ ಹಿಜ್ಜಾ಼ಥು ತಾರ್ಸಸ್ ಖ್ಹಯೇರ‍್ನ ಮೋಕ್ಲಿದಿದು.
ಮೇ ಮೆಕೆದೋನ್ಯನ ಜಾ಼ವಾನಿ ವಖ್ಹತ್‌ಮ, ತೂ ಎಫೆಸಮಸ್ ರ‍್ಹೆಕರಿ ಗಿಂಗೈಲಿದೊ, ಹಿಜ಼್ಜಾ ಥೋಡು ಜ಼ಣು ಝೂ಼ಟಿ ಭೋತಿ ಬೋಲಿದೆವ್‌ಕರ್ತುಥೂತೆ ಇವ್ಣುನ ಹುಕುಮ್ ದೀನ್ ಭೀರಾಕ್‌ಣು ಕರೀಬಿ,
ತೂ ಕ್ರೇಟ್‌ಮ ಬಿಜೂ಼ಬಿ ಬರಾಬರ್ ಹುಯುಕೊಂತೆ ಕಾಮ್ನ ಖ್ಹಾರು ಬರಾಬರ್ ಕರಾನಖ್ಹಾಜೆಬಿ, ಅಜು಼ ಹರೇಕ್ ಖ್ಹಯೇರ್‌ಮ ಸಬೇನು ಶಾಣಾವ್ನ ನೇಮಕ್ ಕರ್ನುಕರಿ ಮೇ ತುನ ಹಿಜ಼್ಜಾಸ್ ಹುಕುಮ್ ದೀನ್ ಮ್ಹೆಂದಿನ್ ಆಯೊ.