14 ಅಕ್ಕ, ನಂಗಕ್ ಎಂತ ಎಣ್ಣುವಕ್ ಕಯ್ಯು? ದೇವಡ ಪಕ್ಕ ಅನೀತಿ ಉಂಡ್‍ೕಂದ್ ಎಣ್ಣ್‌ವದಾ? ಅನ್ನನೆ ಇಲ್ಲವೇ ಇಲ್ಲೆ.
ನೀನ್ ನೇರಾಯಿತು ದುಷ್ಟಂಗಡ ಕೂಡೆ ನೀತಿವಂತಯಿಂಗಳ ನಾಶ ಮಾಡುಲೆ. ನೀನ್ ಎನ್ನನೆ ದುಷ್ಟಂಗಳ ಪಿಂಞ ನೀತಿವಂತಯಿಂಗಳ ಒರೇ ಲೆಕ್ಕತ್ ನೋಟ್‌ವಕಯ್ಯು. ನೀನ್ ನೇರಾಯಿತು ಅನ್ನನೆ ಮಾಡುಲೆ! ಬೂಮಿರ ನ್ಯಾಯಾದಿಪತಿ ನ್ಯಾಯವಾನದ್‌ನೇ ಮಾಡುವಲ್ಲಾಂದ್ ಎಣ್ಣ್‌ಚಿ.
ಅಂವೊ ಅಯಿಂಗಳ ಕೊಂದ್‍ರ್‍ವಂಜಿ ಬೋರೆ ವಾರಕಾರಂಗಕ್ ತೋಟತ್‍ನ ಕೊಡ್‍ಪಾಂದ್ ಯೇಸು ಎಣ್ಣ್‌ಚಿ. ಜನ ಈ ತಕ್ಕ್‌ನ ಕ್‍ೕಪದು: ಆಚೇಂಗಿ, ಅನ್ನನೆ ಆಕತೆ ಇರಡ್‍ೕಂದ್ ಎಣ್ಣ್‌ಚಿ.
ದೇವ ದಾರ್‌ಕು ಪಕ್ಷಪಾತ ಮಾಡುಲೆ.
ಆಚೇಂಗಿ, ನಿಂಗಡ ಕಠಿಣ ಹೃದಯತ್‍ರಗುಂಡ್ ಪಿಂಞ ವಾಸಿ ಆಕತ ಹೃದಯತ್‍ರಗುಂಡ್, ನೀತಿಯುಳ್ಳ ತೀರ್ಪ್ ತಪ್ಪ ದೇವಡ ಬಲ್ಯ ಚೆಡಿರ ದಿವಸತ್‍ಲ್, ನಿಂಗ ನಿಂಗಕಾಯಿತ್ ದೇವಡ ಬಲ್ಯ ಚೆಡಿನ ಕೂಟಿ ಬೆಚ್ಚಂಡುಳ್ಳಿರಲ್ಲ?
ಅನ್ನನಾಚೇಂಗಿ, ಯೆಹೂದ್ಯಂಗಳಾಯಿತ್ ಇಪ್ಪದ್‍ಲ್ ಬಲ್ಯರಿಕೆ ಎಂತ? ಸುನ್ನತಿ ಮಾಡ್‌ವಗುಂಡ್ ಅಯಿಂಗಕ್ ಎಂತ ಪ್ರಯೋಜನ?
ಆನಗುಂಡ್ ನಂಗ ಎಂತ ಎಣ್ಣುವಕ್ ಕಯ್ಯು? ನೀತಿನ ತ್‍ೕಡತ ಯೆಹೂದ್ಯಂಗಲ್ಲತ ಜನಕ್ ನೀತಿ ಕ್‍ಟ್ಟ್‌ಚಿ, ಅದ್ ನಂಬಿಕೇರ ಮೂಲಕ, ಕ್‍ಟ್ಟುವ ನೀತಿಯೇ.
ಬಲಿಪೀಠತ್‍ಲ್ ಇಂಜ ಬೋರೆ ಒಬ್ಬ: ಅಕ್ಕು, ಸರ್ವ ಶಕ್ತಿವಂತಂವೊನಾಯಿತುಳ್ಳ ದೇವಾದಿ ದೇವನೇ, ನೀಡ ನ್ಯಾಯತೀರ್ಪ್ ಸತ್ಯವು ನೀತಿವಂತದೂಂದ್ ಎಣ್ಣ್‌ನದ್ ನಾಕ್ ಕ್‍ೕಟತ್.