ಆನಗುಂಡ್, ಪಾಪತ್‍ರ ಮೇಲೆ ಚಾವ್‍ಕ್ ಜಯ ಕ್‍ಟ್ಟ್‌ನನೆಕೆ, ದೇವಡ ಕೃಪೆಯು ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಮೂಲಕ ನಿತ್ಯ ಜೀವತ್‍ನ ತಂದಿತ್, ನೀತಿರಗುಂಡ್ ಜಯ ಕ್‍ಟ್ಟ್‌ವನೆಕೆ ಮಾಡ್‍ಚಿ.
ಪುದಿಯ ಒಪ್ಪಂದತ್‍ರ ಸೇವಕಂಗಳಾಯಿತ್ ಇಪ್ಪಕ್, ಅಂವೊನೇ ನಂಗಳ ಯೋಗ್ಯವಂತಯಿಂಗಳಾಯಿತ್ ಮಾಡಿತುಂಡ್; ಈ ಒಪ್ಪಂದ ಒಳ್‍ತ್‍ರ ಪ್ರಕಾರ ಅಲ್ಲ ಆಚೇಂಗಿ ಪವಿತ್ರಾತ್ಮತ್‍ರ ಪ್ರಕಾರ ಆನದ್. ಎನ್ನಂಗೆಣ್ಣ್‌ಚೇಂಗಿ, ಒಳ್‍ತ್ ನಂಗಳ ಕೊಲ್ಲುವ; ದೇವಡ ಆತ್ಮವೋ ನಂಗಕ್ ಜೀವ ತಪ್ಪ.