15 ಎನ್ನನೆ ಎಣ್ಣ್‌ಚೇಂಗಿ, ನಾನ್ ಮಾಡ್‍ವದ್ ನಾಕೇ ಗೊತ್ತಾಯಂಡಿಲ್ಲೆ; ಎನ್ನಂಗೆಣ್ಣ್‌ಚೇಂಗಿ, ನಾನ್ ಮಾಡಂಡೂಂದ್ ಉಳ್ಳಾನ ನಾನ್ ಮಾಡಿಯಂಡಿಲ್ಲೆ, ಆಚೇಂಗಿ, ನಾನ್ ಎಂತ ದ್ವೇಶ ಮಾಡ್‌ವ ಅದ್‍ನ ಮಾಡಿಯಂಡುಳ್ಳ.
ನೀತಿವಂತಂವೊ ಪೊಟ್ಟ್ ತಕ್ಕ್‌ನ ದ್ವೇಷ ಮಾಡುವ. ಆಚೇಂಗಿ ದುಷ್ಟ ಜನ ಞಾಣಕ್‍ೕಡ್ ಪಿಂಞ ಅವಮಾನತ್‌ನ ಕೊಂಡಬಪ್ಪ.
ಯೆಹೋವಂಗ್ ಪೋಡಿಚಿಡುವಯಿಂಗ ಪಾಪತ್‌ನ ದ್ವೇಷ ಮಾಡುವ. ನಾನ್ ಹಮ್ಮ್‌ನ, ಗರ್ವತ್‌ನ, ಕ್‍ೕಡಾನ ಬಟ್ಟೆನ, ಕಪಟ ತಕ್ಕ್‌ನ ದ್ವೇಷ ಮಾಡುವಿ.
ನಿಂಗಡ ಪೂರ್ವಕಾಲತ್‌ರಯಿಂಗ ಮಾಡ್‍ನ ಪಾಪಕ್ ನಿಂಗಳು ಕೂಡಿತುಳ್ಳಿರಾಂದ್ ನಿಂಗಳೇ ಸಾಕ್ಷಿ ಆಯಿತುಳ್ಳಿರ, ಎನ್ನನೆ ಎಣ್ಣ್‌ಚೇಂಗಿ ಅಯಿಂಗ ಕೊಂದಯಿಂಗಕ್ ನಿಂಗ ಬಲ್ಯ ಗೋರಿ ಕೆಟ್ಟಿತುಳ್ಳಿರ.
ಇಂಞು ಮಿಂಞಕ್ ನಾನ್ ನಿಂಗಳ ನಾಡ ಪಣಿಕಾರಂಗಾಂದ್ ಕಾಕುಲೆ. ಎಜಮಾನ ಮಾಡ್‍ವದ್ ಪಣಿಕಾರಂಗಕ್ ಗೊತ್ತಿಪ್ಪುಲೆ. ನಿಂಗಳ ನಾಡ ಸ್ನೇಹಿತಂಗಾಂದ್ ನಾನ್ ಎಣ್ಣಿಯೆ. ಎನ್ನಂಗೆಣ್ಣ್‌ಚೇಂಗಿ, ನಾಡ ಅಪ್ಪಂಡಿಂಜ ನಾನ್ ಕ್‍ೕಟಾನೆಲ್ಲಾ ನಿಂಗಕ್ ನಾನ್ ಎಣ್ಣಿಯೆ.
ನಿಂಗಡ ಪ್ರೀತಿ ಕಪಟ ಇಲ್ಲತದಾಯಿತ್ ಇರಡ್, ಕೆಟ್ಟದ್‍ನ ದ್ವೇಶ ಮಾಡಿತ್, ನಲ್ಲದ್‍ನ ಪುಡ್‍ಚೊಳಿ.
ಅದ್‍ಲ್ ತಪ್ಪು ಒಂದು ಇಲ್ಲೇಂದ್ ನೀನ್ ನಂಬ್‍ಚೇಂಗಿ, ಅದ್‍ನ ನೀಕು ದೇವಕು ಮದ್ಯತ್‍ಲ್ ಬೆಚ್ಚೊಳಿ. ನೀಕ್ ನಲ್ಲದ್‍ೕಂದ್ ನೀನ್ ತೀರ್ಮಾನ ಮಾಡ್‍ನ ವಿಷಯತ್‍ಲ್, ನಿನ್ನ ತಪ್ಪ್ ಮಾಡತಂವೊನಾಯಿತ್ ಕಾಪಾಡಿಯಂಡತೇಂಗಿ ನೀನ್ ಆಶೀರ್ವಾದ ಪಡ್ಂದಂವೊ.
ಇನ್ನನೆ ನಾಕ್ ಕುಶಿಯಿಲ್ಲತದ್‍ನ ನಾನ್ ಮಾಡಿಯಂಡಿಪ್ಪಕ, ನ್ಯಾಯಪ್ರಮಾಣ ನಲ್ಲದ್‍ೕಂದ್ ಒತ್ತೊವಿ.
ಮನುಷ್ಯಂಡ ಪಾಪತ್‍ರ ಗುಣ ಪವಿತ್ರಾತ್ಮಕ್ ವಿರೋದವಾಯಿತು, ದೇವಡ ಆತ್ಮ ಮನುಷ್ಯಂಡ ಪಾಪತ್‍ರ ಗುಣಕ್ ವಿರೋದವಾಯಿತು ಪೋರಾಡಿಯಂಡುಂಡ್. ನಿಂಗ ಮಾಡಂಡೂಂದ್ ಉಳ್ಳದ್‍ನ ಮಾಡ್‌ವಕ್ ಕಯ್ಯತನೆಕೆ ಈ ದಂಡು ಶತ್ರುವಳಾಯಿತುಂಡ್.
ಆಚೇಂಗಿಯು ದೇವಡ ವಾಕ್ಯತ್‍ರ ಅಡಿಪಾಯ ಗಟ್ಟಿಯಾಯಿತ್ ನಿಂದಿತುಂಡ್. ಅದ್‍ಲ್: ಒಡೆಯಂಗ್ ಅಂವೊಂಡ ಜನ ದಾರ್‍ೕಂದ್ ಗೊತ್ತುಂಡ್‍ೕಂದ್ ಪಿಂಞ ದೇವಡ ಪೆದತ್‍ನ ಎಣ್ಣುವ ಎಲ್ಲಾ ಜನಳು ಕೆಟ್ಟ ಕೆಲಸತ್‍ನ ಬುಟ್ಟಿತ್ ದೂರ ಆಂಡೂಂದ್ ದೇವಡ ವಾಕ್ಯತ್‍ಲ್ ಎಣ್ಣಿತುಂಡ್.
ನೀನ್ ನೀತಿನ ಪ್ರೀತಿ ಮಾಡಿತ್, ದುಷ್ಟತನತ್‍ನ ದ್ವೇಶ ಮಾಡಿತುಳ್ಳಿಯ; ಆನಗುಂಡ್, ಓ ದೇವ, ನೀಡ ಕೂಟ್‌ಕಾರಂಗಕಿಂಜ ದುಂಬ ಜಾಸ್ತಿಯಾಯಿತ್ ನೀಡ ದೇವ ನಿನ್ನ ಕುಶೀರ ತೈಲತ್‍ರಗುಂಡ್ ಅಬಿಷೇಕ ಮಾಡ್‍ಚಿ.
ನಂಗ ಎಲ್ಲಾರು ನಾನಾ ತರತ್‍ಲ್ ತಪ್ಪ್ ಮಾಡಿಯಂಡುಂಡ್; ಆಚೇಂಗಿ ನಿಂಗ ನಿಂಗಡ ನಾವ್‌ಕ್ ಕಡಿವಾಣ ಇಟ್ಟತೇಂಗಿ ನಿಂಗಡ ಬದ್‍ಕ್‍ನ ಕಾಪಾಡ್‍ವಿರ.
ಚೆನ್ನ ಜನತ್‍ನ ತಿತ್ತ್‌ರ ನ್ಯಾಯ ತೀರ್ಪ್‌ಯಿಂಜ ಬಲ್‍ಚಿತ್ ಕಾಪಾಡಿ. ಇಂಞು ಚೆನ್ನ ಜನಕ್ ಕರುಣೆ ಕಾಟಿ. ಆಚೇಂಗಿ, ಅನ್ನನೆ ಮಾಡ್‌ವಕ, ಅಯಿಂಗ ಮಾಡ್‌ವ ಕ್‍ೕಡಾನ ಪಾಪತ್‍ಲ್ ನಿಂಗಳು ಬೂವತನೆಕೆ ಇಪ್ಪಕ್ ದುಂಬ ಬಯತ್‍ಲ್ ಮಾಡಂಡು.