ಎನ್ನಂಗೆಣ್ಣ್‌ಚೇಂಗಿ, ದೇವಡ ಮೇಲೆ ದಂಗೆ ಮಾಡ್‌ವ ಚೆನ್ನ ಜನ ನಿಂಗಕ್ ಗೊತ್ತಿಲ್ಲತೆ ನಿಂಗಡ ಸಬೇಲ್ ನುಗ್ಗಿತ್, ದೇವಡ ಕೃಪೆ ನಂಗಳ ಕಾಮಾಬಿಲಾಷೆ ಪಾಪ ಮಾಡ್‌ವಕ್ ಅನುಮತಿ ಕೊಡ್‍ತಿತುಂಡ್‍ೕಂದ್ ಎಣ್ಣಿಯಂಡ್, ಯೇಸು ಕ್ರಿಸ್ತ ಒಬ್ಬನೇ ನಂಗಡ ಮೇಲೆ ಎಲ್ಲಾ ಅದಿಕಾರ ಉಳ್ಳ ಒಡೆಯಾಂದ್ ಉಳ್ಳಾನ ಒತ್ತಂಡಿಲ್ಲೆ. ಅಯಿಂಗಡ ತೀರ್ಪ್‌ನ ಪಂಡೇ ದೇವ ಒಳ್‍ದಿ ಬೆಚ್ಚಿತುಂಡ್.