8 ಆಚೇಂಗಿ, ನಂಗ ಪಾಪಿಯಳಾಯಿತ್ ಇಪ್ಪಕಲೆ ಕ್ರಿಸ್ತ ನಂಗಕಾಯಿತ್ ಚತ್ತಗುಂಡ್, ಅದ್, ದೇವ ನಂಗಡ ಮೇಲೆ ಬೆಚ್ಚಿತ್ಂಜ ಪ್ರೀತಿನ ಕಾಟುವ.
ಒಬ್ಬ ತಾಂಡ ಸ್ನೇಹಿತಂಗಾಯಿತ್ ಪ್ರಾಣತ್‍ನ ಕೊಡ್‍ಪ ಪ್ರೀತಿಗಿಂಜ ಬಲ್ಯ ಪ್ರೀತಿ ಬೋರೆ ಒಂದು ಇಲ್ಲೆ.
ದೇವ ಈ ಲೋಕತ್‍ರ ಜನಳ ಎಚ್ಚಕೋ ಪ್ರೀತಿ ಮಾಡಿತ್, ಅಂವೊಂಡ ಒರೇ ಮೋಂವೊನ ಕೊಡ್‍ತತ್; ದಾರೆಲ್ಲ ಅಂವೊನ ನಂಬುವ ಅಯಿಂಗೆಲ್ಲಾ ಪಾಳಾಕತೆ ನಿತ್ಯ ಜೀವತ್‍ನ ಪಡೆಯುವ.
ನಂಗಡ ಅನೀತಿ ದೇವಡ ನೀತಿನ ಕಾಟ್‍ಚೇಂಗಿ, ನಂಗ ಎಂತ ಎಣ್ಣುವಕ್ ಕಯ್ಯು? ಶಿಕ್ಷೆ ತಪ್ಪ ದೇವ ಅನೀತಿವಂತಂವೊನ? (ನಾನ್ ಇದ್‍ನ, ಮನುಷ್ಯ ರೀತಿಲ್ ತಕ್ಕ್ ಪರ್ಂದಂಡುಳ್ಳ).
ನಂಗ ನೀತಿವಂತಯಿಂಗಳಾಯಿತ್ ಆಂಡೂಂದ್, ನಂಗಡ ಪಾಪಕಾಯಿತ್ ಅಂವೊನ ಚಾವ್‍ಕ್ ಒಪ್ಪ್‌ಚಿಟ್ಟಿತ್, ಅಂವೊನ ಚಾವ್‍ಯಿಂಜ ಎಪ್ಪ್‌ಚಿಟ್ಟತ್.
ಅದಲ್ಲತೆ, ಅಪರಾದ ಜಾಸ್ತಿ ಆಂಡೂಂದ್ ನ್ಯಾಯಪ್ರಮಾಣತ್‍ನ ಕೊಡ್‍ತತ್; ಆಚೇಂಗಿ, ಎಲ್ಲಿ ಪಾಪ ಜಾಸ್ತಿ ಆಚೋ, ಅಲ್ಲಿ ಕೃಪೆಯು ಇಂಞು ಜಾಸ್ತಿಯಾಚಿ.
ನಂಗ ಶಕ್ತಿ ಇಲ್ಲತಯಿಂಗಳಾಯಿತಿಪ್ಪಕಲೇ, ನೇಮಿಚಿಟ್ಟ ಕಾಲತ್‍ಲ್, ಕ್ರಿಸ್ತ ಅಕ್ರಮಕಾರಂಗಕಾಯಿತ್ ಚತ್ತತ್.
ನೀತಿವಂತಂವೊನಾನ ಒರ್ ಮನುಷ್ಯಂಗಾಯಿತ್ ಒಬ್ಬ ಚಾವದೇ ಕಷ್ಟ ಕಾರ್ಯ, ಒರ್ ನಲ್ಲ ಮನುಷ್ಯಂಗಾಯಿತ್ ಒಮ್ಮೊಮ ದಾರಾಚು ಚಾವಕ್ ಸಹ ದೈರ್ಯ ಎಡ್‍ತವ.
ದೇವ ತಾಂಡ ಸ್ವಂತ ಮೋಂವೋಂದ್ ಸಹ ನೋಟತೆ, ನಂಗ ಎಲ್ಲಾರ್‍ಕಾಯಿತ್ ಅಂವೊನ ಒಪ್ಪ್‌ಚಿಟ್ಟಕ, ಅಂವೊಂಡ ಕೂಡೆ ಬೋರೆ ಎಲ್ಲಾನ ಸಹ ಕೃಪೆಯಾಯಿತ್ ನಂಗಕ್ ತರತೆ ಇಪ್ಪದ್ ಎನ್ನನೆ?
ನನ್ನ ಕೊಡಿಕ್ ಕೊಂಡ್ ಪೋಪದಾಚೇಂಗಿಯು, ನನ್ನ ಅಡಿಕ್ ತಳ್ಳ್‌ವದಾಚೇಂಗಿಯು, ಬೋರೆ ಏದ್ ಸೃಷ್ಟಿಯಾಚೇಂಗಿಯು, ನಂಗಡ ಒಡೆಯನಾನ ಕ್ರಿಸ್ತ ಯೇಸುರ ಮೇಲೆ ಬೆಚ್ಚಿತುಳ್ಳ ದೇವಡ ಪ್ರೀತಿಯಿಂಜ ನಂಗಳ ಬೋರೆ ಮಾಡ್‌ವಕ್ ಕಯ್ಯುಲೇಂದ್ ನಿಶ್ಚಯವಾಯಿತ್ ನಂಬಿಯಂಡುಂಡ್.
ನಾನ್ ಕ್ರಿಸ್ತಂಡ ಕೂಡೆ ಶಿಲುಬೇಲ್ ಚತ್ತ್ ಪೋಯೆ. ಆಚೇಂಗಿ, ಬದ್‍ಕಿಯಂಡುಂಡ್; ಇಂಞು ಮಿಂಞಕ್ ನಾನ್ ಅಲ್ಲ, ಕ್ರಿಸ್ತನೇ ನಾಡ ಒಳ್‍ಲ್ ಬದ್‍ಕ್‍ವ; ನಾನ್ ಇಕ್ಕ ತಡೀಲ್ ಬದ್‍ಕಿಯಂಡುಳ್ಳದ್ ಎನ್ನನೆ ಎಣ್ಣ್‌ಚೇಂಗಿ, ನಾಡ ಮೇಲೆ ದುಂಬ ಪ್ರೀತಿ ಬೆಚ್ಚಿತ್, ತಾಂಡ ಜೀವತ್‍ನ ಒಪ್ಪ್‌ಚಿಟ್ಟ ದೇವಡ ಮೋಂವೊಂಡ ಮೇಲೆ ಉಳ್ಳ ನಂಬಿಕೇಲ್ ಬದ್‍ಕಿಯಂಡುಂಡ್.
ಕ್ರಿಸ್ತ ನಂಗಳ ಪ್ರೀತಿ ಮಾಡಿತ್, ನಂಗಕಾಯಿತ್, ದೇವಕ್ ಎನ್ನನೆ ಅಂವೊನನೇ ಒರ್ ಸುಗಂದ ವಾಸನೆರ ಕಾಣಿಕೆಯಾಯಿತು, ಬಲಿಯಾಯಿತು ಒಪ್ಪ್‌ಚಿಟ್ಟತೋ ಅನ್ನನೆ ನಿಂಗಳು ಸಹ ಪ್ರೀತಿಲ್ ನಡ್‌ಕಂಡು.
ನಾನ್ ಪಾಪಿಯಂಗಡಲ್ಲಿ ಬಲ್ಯ ಪಾಪಿಯಾಯಿತ್ ಇಂಜತೇಂಗಿಯು, ಯೇಸು ಕ್ರಿಸ್ತ ಅಂವೊಂಡ ದುಂಬ್‍ನ ತಾಳ್ಮೆನ ಕಾಂಬ್‍ಚಿಡುವಕಾಯಿತ್, ನಾಡ ಮೇಲೆ ಕರುಣೆ ಕಾಟ್‍ಚಿ. ಅನ್ನನೆ ಅಂವೊ ಎನ್ನಂಗ್ ಮಾಡ್‍ಚಿ ಎಣ್ಣ್‌ಚೇಂಗಿ, ನಿತ್ಯ ಜೀವ ಕ್‍ಟ್ಟ್‌ವಕ್, ಯೇಸು ಕ್ರಿಸ್ತಂಡ ಮೇಲೆ ಇಂಞು ಮಿಂಞಕ್ ಅಂವೊಂಡ ನಂಬಿಕೆ ಬೆಪ್ಪ ಜನಕ್ ನಾನ್ ಒರ್ ಉದಾರಣೆಯಾಯಿತ್ ಇಪ್ಪೀಂದ್ ಮಾಡ್‍ಚಿ.
ಎಲ್ಲಾ ಮಹಾ ಯಾಜಕನು ಕಾಣಿಕೆ ಪಿಂಞ ಬಲಿನ ಅರ್ಪಿಚಿಡುವಕಾಯಿತ್ ನೇಮಿಚಿಟ್ಟಿತುಂಡ್; ಆನಗುಂಡ್, ಅರ್ಪಣೆ ಮಾಡ್‌ವಕಾಯಿತ್ ಮಾಹಾ ಯಾಜಕನಾನ ಯೇಸುಕ್ ಸಹ ಎಂತೋ ಒಂದ್ ಬೋಂಡಿಯಿಂಜತ್.
ಎನ್ನಂಗೆಣ್ಣ್‌ಚೇಂಗಿ, ಕ್ರಿಸ್ತ ಸಹ ನಂಗಳ ದೇವಡ ಪಕ್ಕ ಕೊಂಡ್ ಬಪ್ಪಕಾಯಿತ್, ಅನೀತಿ ಉಳ್ಳಯಿಂಗಕ್ ಬದ್‍ಲಾಯಿತ್ ನೀತಿಯುಳ್ಳಂವೊನಾಯಿತ್ ಒರೇ ಕುರಿ ಪಾಪತ್‍ರಗುಂಡ್ ಕಷ್ಟಪಟ್ಟತ್; ಅಂವೊ ತಡೀಲ್ ಚತ್ತತ್, ಆತ್ಮತ್‍ಲ್ ಜೀವವಾಯಿತ್ ಬಾತ್.
ಕ್ರಿಸ್ತ ನಂಗಕಾಯಿತ್ ತಾಂಡ ಜೀವತ್‍ನ ತಂದಗುಂಡ್, ಪ್ರೀತಿ ಎಣ್ಣುವದ್ ಎಂತದ್‍ೕಂದ್ ನಂಗಕೆಲ್ಲ ಗೊತ್ತಾಚಿ. ಆನಗುಂಡ್ ನಂಗಳು ಸಹ ನಂಗಡ ಅಣ್ಣತಮ್ಮಣಂಗಕಾಯಿತ್ ಜೀವತ್‍ನ ಕೊಡ್‍ಕಂಡು!