8 ನಲ್ಲದ್ ಕ್‍ಟ್ಟುವಕಾಯಿತ್ ಕೆಟ್ಟದ್ ಮಾಡಂಡೂಂದ್ ಎಣ್ಣುವನೆಕೆ ಆಪ ಅಲ್ಲ? ನಂಗ ಅನ್ನನೆ ಬೋದನೆ ಮಾಡ್‌ವಯಿಂಗಾಂದ್ ಚೆನ್ನ ಜನ ನಂಗಳ ದೂಷಣೆ ಮಾಡಿಯಂಡ್ ಉಂಡ್. ಅಯಿಂಗಕ್ ಕಂಡಿತವಾಯಿತ್ ದೇವಡ ಶಿಕ್ಷೆ ಕ್‍ಟ್ಟಂಡು.
ಜನ ನಿಂಗಳ ನಾಡಗುಂಡ್ ಅವಮಾನ ಮಾಡಿತ್, ಹಿಂಸೆ ಮಾಡಿತ್ ಪಿಂಞ ನಿಂಗಡ ಮೇಲೆ ಕೆಟ್ಟ ತಕ್ಕ್ ಪರ್ಂದತೇಂಗಿ, ನಿಂಗ ಆಶೀರ್ವಾದ ಪಡ್ಂದಯಿಂಗ;
ಅದಲ್ಲತೆ, ಅಪರಾದ ಜಾಸ್ತಿ ಆಂಡೂಂದ್ ನ್ಯಾಯಪ್ರಮಾಣತ್‍ನ ಕೊಡ್‍ತತ್; ಆಚೇಂಗಿ, ಎಲ್ಲಿ ಪಾಪ ಜಾಸ್ತಿ ಆಚೋ, ಅಲ್ಲಿ ಕೃಪೆಯು ಇಂಞು ಜಾಸ್ತಿಯಾಚಿ.
ಆನಗುಂಡ್ ನಂಗ ಎಂತ ಎಣ್ಣಡ್? ದೇವಡ ಕೃಪೆ ದುಂಬ ಕ್‍ಟ್ಟಂಡೂಂದ್, ನಂಗ ಪಾಪತ್‍ಲೇ ಬದ್‍ಕಿಯಂಡಿರೊಂಡುವ?
ಆನಗುಂಡ್ ಎಂತ? ನಂಗ ನ್ಯಾಯಪ್ರಮಾಣತ್‍ರ ಅಡಿಕ್ ಬರತೆ, ಕೃಪೇರ ಅಡಿಕ್ ಬಂದಗುಂಡ್ ಪಾಪ ಮಾಡಂಡುವ? ಮಾಡ್‌ವಕ್ಕಾಗ.
ಆನಗುಂಡ್ ನಂಗ ಎಂತ ಎಣ್ಣಡ್? ನ್ಯಾಯಪ್ರಮಾಣ ಪಾಪವಾ? ಅನ್ನನೆ ಅಲ್ಲ, ಪಾಪ ಎಂತ್‍ೕಂದ್ ನ್ಯಾಯಪ್ರಮಾಣತ್‍ರಗುಂಡ್ ನಾಕ್ ಗೊತ್ತಾಚಲ್ಲ? ಇಲ್ಲತಪೋಚೇಂಗಿ ಎನ್ನನೆ ಗೊತ್ತಾಪಕಿಂಜತ್? ಬೋರೆಯಿಂಗಡ ವಸ್ತುರ ಮೇಲೆ ಆಸೆ ಪಡ್‌ವಕ್ಕಾಗಾಂದ್ ನ್ಯಾಯಪ್ರಮಾಣ ನಾಕ್ ಎಣ್ಣತೆ ಪೋಚೇಂಗಿ, ಬೋರೆಯಿಂಗಡ ವಸ್ತುರ ಮೇಲೆ ಆಸೆ ಪಡ್‍ವದ್ ಪಾಪಾಂದ್ ನಾಕ್ ಗೊತ್ತಿಲ್ಲತೆ ಪೋಪ ಅಲ್ಲ?
ಆನಗುಂಡ್, ಅಂವೊಂಡ ಸೇವಕಂಗಳು ಸಹ, ನೀತಿರ ಸೇವಕಂಗಡ ವೇಷತ್‍ನ ಇಟ್ಟತೇಂಗಿ ಅದ್ ಆಶ್ಚರ್ಯ ಅಲ್ಲ; ಅಯಿಂಗಡ ಅಂತ್ಯ ಅಯಿಂಗಡ ಕ್ರಿಯೇಕ್ ತಕ್ಕಂತದಾಯಿತ್‌ಪ್ಪ.
ಜನ ನಂಗಳ ಗನ ಪಡ್‍ತ್‍ಚೇಂಗಿಯು, ಗನ ಪಡ್‍ತತೆ ಪೋಚೇಂಗಿಯು, ಕೆಟ್ಟ ಪೆದ ಕ್‍ಟ್ಟ್‌ಚೇಂಗಿಯು, ನಲ್ಲ ಪೆದ ಕ್‍ಟ್ಟ್‌ಚೇಂಗಿಯು ದೇವಕ್ ಸೇವೆ ಮಾಡಿಯಂಡುಂಡ್. ಕಳ್ಳಂಗಾಂದ್ ಎಣ್ಣ್‌ಚೇಂಗಿಯು ಸತ್ಯವಂತಯಿಂಗಳಾಯಿತ್ ನಡ್ಂದಂಡುಂಡ್.
ಎನ್ನಂಗೆಣ್ಣ್‌ಚೇಂಗಿ, ದೇವಡ ಮೇಲೆ ದಂಗೆ ಮಾಡ್‌ವ ಚೆನ್ನ ಜನ ನಿಂಗಕ್ ಗೊತ್ತಿಲ್ಲತೆ ನಿಂಗಡ ಸಬೇಲ್ ನುಗ್ಗಿತ್, ದೇವಡ ಕೃಪೆ ನಂಗಳ ಕಾಮಾಬಿಲಾಷೆ ಪಾಪ ಮಾಡ್‌ವಕ್ ಅನುಮತಿ ಕೊಡ್‍ತಿತುಂಡ್‍ೕಂದ್ ಎಣ್ಣಿಯಂಡ್, ಯೇಸು ಕ್ರಿಸ್ತ ಒಬ್ಬನೇ ನಂಗಡ ಮೇಲೆ ಎಲ್ಲಾ ಅದಿಕಾರ ಉಳ್ಳ ಒಡೆಯಾಂದ್ ಉಳ್ಳಾನ ಒತ್ತಂಡಿಲ್ಲೆ. ಅಯಿಂಗಡ ತೀರ್ಪ್‌ನ ಪಂಡೇ ದೇವ ಒಳ್‍ದಿ ಬೆಚ್ಚಿತುಂಡ್.