16 ದುಷ್ಟಂಗ ಆಳ್‌ವಕ ಪಾಪವು ಜಾಸ್ತಿ ಆಪ. ಆಚೇಂಗಿ ನೀತಿವಂತಯಿಂಗ ಅಯಿಂಗ ಬುದ್ದ್‌ಪೋಪದ್‌ನ ಕಾಂಬ.
ನೀತಿವಂತಂವೊನಾನ ದೇವ ದುಷ್ಟಂಗಡ ಮನೆನ ಎಚ್ಚರ ಎಡ್‌ತಿತ್ ನೋಟಿತ್, ಅಯಿಂಗಳ ನಾಶ ಮಾಡಿರುವ.
ನೀತಿವಂತಯಿಂಗ ಜಾಸ್ತಿ ಆಪಕ ಜನ ಕುಶೀಲ್ ಇಪ್ಪ. ದುಷ್ಟನಾನಂವೊ ಆಳ್‌ವಕ ಜನ ಸಂಕಟ ಪಡುವ.
ಒಡೆಯನೇ, ನೀಕ್ ಬೊತ್ತತೆ, ನೀಡ ಪೆದಕ್ ಮಹಿಮೆ ತರತೆ ಇಪ್ಪಕ್ ದಾರ್‌ಕ್ ಕಯ್ಯು? ನೀನ್ ಒಬ್ಬನೇ ಪವಿತ್ರವಾನ ದೇವ, ನೀಡ ನೀತಿಯಾಯಿತುಳ್ಳ ತೀರ್ಪ್‌ರಗುಂಡ್ ಎಲ್ಲಾ ಜಾತಿಯಳು ಬಂದಿತ್, ನೀಡ ಮಿಂಞ ಆರಾದನೆ ಮಾಡ್‌ವಾಂದ್ ಎಣ್ಣ್‌ಚಿ.
ಓ ಪರಲೋಕವೇ, ಪವಿತ್ರವಾನ ಅಪೊಸ್ತಲಂಗಳೇ, ಪ್ರವಾದಿಯಳೇ, ಇವ ನಿಂಗಕ್ ಮಾಡ್‍ನಂಗಾಯಿತ್ ದೇವ ನ್ಯಾಯತೀರ್ಪ್ ಮಾಡ್‍ನಗುಂಡ್, ಇವಕಾಯಿತ್ ನಿಂಗ ಕುಶಿ ಪಡಿರಿ.