9 ನಾಡ ಹೃದಯತ್‌ನ ಶುದ್ದ ಮಾಡ್‌ನ, ನಾಡ ಪಾಪಯೆಲ್ಲಾ ಪೋಪನೆಕೆ ಶುದ್ದ ಮಾಡ್‌ನ್‍ೕಂದ್ ದಾರ್‌ಕ್ ಎಣ್ಣುವಕಯ್ಯು?
ಅನ್ನನಾಚೇಂಗಿ ಎಂತ? ನಂಗ ಅಯಿಂಗಕಿಂಜ ವಿಷೇಶವಾನಯಿಂಗಳ? ಅನ್ನನೆ ಒಂದು ಇಲ್ಲೆ! ಯೆಹೂದ್ಯಂಗಳಾಚೇಂಗಿಯು ಸರಿ, ಯೆಹೂದ್ಯಂಗಲ್ಲತಯಿಂಗಳಾಚೇಂಗಿಯು ಸರಿ, ಎಲ್ಲಾರು ಪಾಪತ್‍ರ ಶಕ್ತಿರ ಅಡಿಕ್ ಒಳಪಟ್ಟಿತುಂಡ್‍ೕಂದ್ ನಾನ್ ಮಿಂಞಲೇ ದೃಡ ಪಡ್‍ತ್‍ನ.
ನಾಡ ಮನಸಾಕ್ಷಿ ಶುದ್ದವಾಯಿತ್ ಉಂಡ್, ಆಚೇಂಗಿ ನಾನ್ ಸರಿಯಾನಂವೋಂದ್ ಎಣ್ಣ್‌ವಕ್ ಅದ್ ಆದಾರ ಆಪುಲೆ. ಅದ್‍ನ ಒಡೆಯನೇ ತೀರ್ಪ್ ಮಾಡಂಡು.
ನಂಗ ಎಲ್ಲಾರು ನಾನಾ ತರತ್‍ಲ್ ತಪ್ಪ್ ಮಾಡಿಯಂಡುಂಡ್; ಆಚೇಂಗಿ ನಿಂಗ ನಿಂಗಡ ನಾವ್‌ಕ್ ಕಡಿವಾಣ ಇಟ್ಟತೇಂಗಿ ನಿಂಗಡ ಬದ್‍ಕ್‍ನ ಕಾಪಾಡ್‍ವಿರ.