18 ಚೀಟಿ ಇಡುವಗುಂಡ್, ವಿರೋದ ಪೋಯಿತ್, ವಿರೋದಿಚ್ಚಿಡುವಯಿಂಗಡ ಮದ್ಯತ್ ನ್ಯಾಯತ್‍ೕಪ.
ಚೀಟಿನ ಮಡ್‌ಲ್ ಇಡ್‌ವಕಯ್ಯು, ಆಚೇಂಗಿ ಎಲ್ಲಾ ಕಾರ್ಯತ್‌ರ ತೀರ್ಮಾನವು ಯೆಹೋವಯಿಂಡಿಂಜಲೇ ಬಪ್ಪ.
ಮಿಂಞ ವಾದ ಮಾಡುವಂವೊ ನೀತಿವಂತಂವೊಂಡನೆಕೆ ಕಾಂಬ. ಆಚೇಂಗಿ ಪ್ರತಿವಾದ ಮಾಡ್‌ವಂವೊ ಬಂದಿತ್ ಅಂವೊನ ಪರೀಕ್ಷೆ ಮಾಡುವ.
ಬಲವುಳ್ಳ ಪಟ್ಟಣತ್‌ನ ಗೆಲ್ಲುವಕಿಂಜಿ ಅನ್ಯಾಯತ್‌ನ ಅನುಬವಿಚಿಟ್ಟ ಅಣ್ಣತಮ್ಮಣನ ಗೆಲ್ಲ್‌ವದ್ ಕಷ್ಟ. ಅಯಿಂಗಡ ವಿರೋದ ಕೋಟೆರ ತಾಳರನೆಕೆ ಇಪ್ಪ.