16 ನೀತಿವಂತಂವೊಂಡ ನಯಿಪ್ ಜೀವತ್‌ನೂ, ದುಷ್ಟಂಡ ಆದಾಯ ಪಾಪತ್‌ನೂ ಉಂಟ್ ಮಾಡ್‌ವ.
ನೀತಿವಂತಂವೊಂಡ ಫಲ ಜೀವ ತಪ್ಪ ಮರ. ಜನಳ ಗೆಲ್ಲುವಂಚೊ ಜ್ಞಾನ ಉಲ್ಳಂವೊ.
ನೀತಿನ ಪಿಂಞ ಪ್ರೀತಿನ ತ್‍ೕಡ್‌ವಂವೊ, ನಲ್ಲ ಬದ್‌ಕ್‌ನ ನೀತಿನ ಪಿಂಞ ಗನತ್‌ನ ಪಡೆಯುವ.
ಎನ್ನನೆ ಎಣ್ಣ್‌ಚೇಂಗಿ, ಹೃದಯತ್ಂಜಲೇ ಕೆಟ್ಟ ಗೇನ, ಕೊಲೆ, ವ್ಯಬಿಚಾರ, ಲೈಂಗಿಕ ಪಾಪ, ಕಕ್ಕಂಡೂ, ಪೊಟ್ಟ್ ಪರಿಯಂಡು, ಪೊಟ್ಟ್ ಸಾಕ್ಷಿ ಪರಿಯಂಡು, ಬೋರೆಯಿಂಗಳ ನಾಶ ಮಾಡ್‌ವಕ್ ಕೆಟ್ಟ ತಕ್ಕ್ ಪರಿಯಂಡೂಂದ್ ಉಳ್ಳ ಗೇನ ಎಲ್ಲಾ ಬಪ್ಪ.
ಪಾಳಾಯಿ ಪೋಪ ಆಹಾರಕಾಯಿತ್ ಅಲ್ಲ ಆಚೇಂಗಿ ನಿಂಗಳ ನಿತ್ಯ ಜೀವಕತ್ತನೆ ಕೊಂಡ್ ಪೋಪ ಆಹಾರಕಾಯಿತ್ ಕ್ರಿಯೆ ಮಾಡಿ; ಅದ್‍ನ ಮನುಷ್ಯಕುಮಾರ ನಿಂಗಕ್ ತಪ್ಪ, ಎನ್ನಂಗೆಣ್ಣ್‌ಚೇಂಗಿ, ಅಂವೊ ಅನ್ನನೆ ಮಾಡ್‌ವಕ್ ಅಪ್ಪನಾನ ದೇವ ಅಂವೊನ ಅದಿಕಾರಿಯಾಯಿತ್ ನೀಮಿಚಿಟ್ಟಿತುಂಡ್.
ಪಾಪತ್‍ರ ಸಂಬಳ ಚಾವ್; ದೇವಡ ಇನಾಮ್ ನಂಗಡ ಒಡೆಯನಾನ ಯೇಸು ಕ್ರಿಸ್ತನಗುಂಡ್ ಕ್‍ಟ್ಟ್‌ವ ನಿತ್ಯ ಜೀವ.
ಆನಗುಂಡ್, ನಾಡ ಪ್ರೀತಿರ ಜನಳೇ, ನಿಂಗ ನಿಂಗಡ ನಂಬಿಕೇಲ್ ದೃಡವಾಯಿತ್ ಇರಂಡು, ಏದ್ ಒರ್ ವಿಷಯವು ನಿಂಗಡ ನಂಬಿಕೇನೆ ಅನುಮಾನ ಪಡ್‍ತ್‍ವಕ್ಕಾಗ. ಒಡೆಯ ನಿಂಗಕ್ ಒಪ್ಪ್‌ಚಿಟ್ಟ ಕೆಲಸತ್‍ಲ್ ಮಿಂಞಕ್ ಪೋಪಯಿಂಗಳಾಯಿತ್ ಮಾಡಿಯಂಡಿರಿ. ನಿಂಗ ಮಾಡ್‌ವ ಒಡೆಯಂಡ ಕೆಲಸಕ್ ಫಲ ಇಲ್ಲತೆ ಪೋಪುಲೇಂದ್ ನಿಂಗಕ್ ಗೊತ್ತುಂಡುಲ್ಲ?
ಆಚೇಂಗಿ, ದುಷ್ಟಂಗ ಪಿಂಞ ವಂಚಕಂಗ, ಮೋಸ ಮಾಡಿಯಂಡ್, ಅಯಿಂಗಳು ಮೋಸ ಪೋಯಂಡ್, ಇಕ್ಕ ಉಳ್ಳ ಸ್ತತಿಯಿಂಜ ಇಂಞು ಪಾಳಾಯಿ ಪೋಪ.
ಎನ್ನಂಗೆಣ್ಣ್‌ಚೇಂಗಿ, ನಿಂಗಡ ಸೇವೆ, ದೇವಡ ಮಕ್ಕಕ್ ನಿಂಗ ಮಾಡ್‍ನ ಪಿಂಞ ಇಕ್ಕ ಮಾಡಿಯಂಡುಳ್ಳ ಪ್ರೀತಿರ ಸೇವೇರ ಮೂಲಕ ಕಾಂಬ್‌ಚಿಡುವ ದೇವಡ ಮೇಲೆ ಉಳ್ಳ ಪ್ರೀತಿನ ದೇವ ಮರ್ಂದ್ ಪೋಪುಲೆ. ದೇವ ನೀತಿ ಉಳ್ಳಂವೊವನಾಯಿತುಂಡ್.