27 ಬಲ್ಯ ಕ್‍ೕಡ್ ನಿಂಗಕ್ ಬಿರುಗಾಳಿರನೆಕೆ ಬಪ್ಪಕ, ಅಪಾಯ ಸುಳಿಗಾಳಿರನೆಕೆ ನಿಂಗಳ ಬಡಿಪಕ, ಕಷ್ಟ ಪಿಂಞ ದುಃಖ ನಿಂಗಡ ಮೇಲೆ ಬಲ್ಯ ಬಾರವಾಯಿತಿಪ್ಪಕ, ನಾನ್ ಪರಿಹಾಸ ಮಾಡುವಿ.
ಕೆಟ್ಟ ಕೆಲಸ ಮಾಡ್‌ವ ಓರೋರ್ ಮನುಷ್ಯಂಡ ಆತ್ಮಕು ನೊಂಬಲ ಪಿಂಞ ಕಷ್ಟ ಬಪ್ಪ, ಅದ್ ಮಿಂಞ ಯೆಹೂದ್ಯಂಗಕು ಬಯ್ಯ ಯೆಹೂದ್ಯ ಅಲ್ಲತಯಿಂಗಕು ಉಂಟಾಪ.
ಜನ ಸಮಾದಾನ ಉಂಡ್‍ೕಂದು, ಒರ್ ತೊಂದರೆಯು ಇಲ್ಲೇಂದು ಎಣ್ಣುವಕ, ಒರ್ ಪೊಣ್ಣಾಳ್‌ಕ್ ಪೆರುವ ನೊಂಬಲ ಎನ್ನನೆ ಒಮ್ಮಕೆ ಬಪ್ಪ, ಅನ್ನನೆ ಅಯಿಂಗಡ ಮೇಲೆ ನಾಶ ಬಪ್ಪ; ಅಕ್ಕ ದಾರೂ ತಪ್ಪ್‌ಚಿಡ್‌ವಕ್ ಕಯ್ಯುಲೆ.