4-5 ಕ್ರಿಸ್ತ ಯೇಸುರ ಮೇಲೆ ಉಳ್ಳ ನಂಬಿಕೆ ಪಿಂಞ ದೇವಡ ಮಕ್ಕಡ ಮೇಲೆ ಉಳ್ಳ ನೀಡ ಪ್ರೀತಿನ ನಾನ್ ಕ್‍ೕಟಿತ್, ನಾನ್ ಪ್ರಾರ್ಥನೆ ಮಾಡ್‌ವಕ, ಎಕ್ಕಲೂ ನೀಕಾಯಿತ್ ದೇವಕ್ ವಂದನೆ ಎಣ್ಣಿಯಂಡುಳ್ಳ.
ಆದ್ಯವಾಯಿತ್, ನಿಂಗ ದೇವಡ ಮೇಲೆ ಬೆಚ್ಚಿತುಳ್ಳ ನಂಬಿಕೆ, ಲೋಕತ್‍ರ ಎಲ್ಲಾ ಜಾಗತ್‍ಲ್ ಗೊತ್ತಾನಗುಂಡ್, ನಿಂಗ ಎಲ್ಲಾರ್‍ಕಾಯಿತ್ ನಾನ್ ಯೇಸು ಕ್ರಿಸ್ತಂಡ ಮೂಲಕ ದೇವಕ್ ವಂದನೆ ಎಣ್ಣ್‌ವಿ.
ನಿಂಗಕಾಯಿತ್ ಎಡೆಬುಡತೆ ದೇವಕ್ ವಂದನೆ ಮಾಡಿಯಂಡುಳ್ಳ. ನಾಡ ಪ್ರಾರ್ಥನೆಲ್ ನಿಂಗಳ ಗೇನ ಮಾಡಿತ್,
ನಾನ್ ನಿಂಗಳ ಎಕ್ಕೆಲ್ಲಾ ಗೇನ ಮಾಡ್‌ವಿ ಅಕ್ಕೆಲ್ಲಾ ನಿಂಗಕಾಯಿತ್ ನಾಡ ದೇವನ ವಂದನೆ ಮಾಡಿಯಂಡುಳ್ಳ.
ನಂಗ ಎಕ್ಕೆಲ್ಲಾ ನಿಂಗಕಾಯಿತ್ ಪ್ರಾರ್ಥನೆ ಮಾಡ್‌ವ, ಅಕ್ಕೆಲ್ಲಾ ಒಡೆಯನಾನ ಯೇಸು ಕ್ರಿಸ್ತಂಡ ಅಪ್ಪನಾನ ದೇವಕ್ ವಂದನೆ ಮಾಡಿಯಂಡುಂಡ್.
ನಂಗ ಪ್ರಾರ್ಥನೆ ಮಾಡ್‌ವಕ, ನಿಂಗ ಎಲ್ಲಾರ್‍ಕಾಯಿತ್ ದೇವಕ್ ವಂದನೆ ಮಾಡಿತ್, ನಿಂಗಡ ವಿಷಯತ್‍ನ ದೇವಡ ಪಕ್ಕ ಎಕ್ಕಾಲು ಎಣ್ಣಿಯಂಡ್ ಉಂಡ್.
ನಂಗಡ ಅಣ್ಣತಮ್ಮಣಂಗಳೇ, ನಿಂಗಕಾಯಿತ್ ನಂಗ ಎಕ್ಕಾಲು ದೇವಕ್ ವಂದನೆ ಎಣ್ಣುವಕ್ ಜವಾಬ್ದಾರಂಗಳಾಯಿತ್ ಉಂಡ್; ನಿಂಗ ದೇವಡ ಮೇಲೆ ಬೆಚ್ಚಿತುಳ್ಳ ನಂಬಿಕೆ ಚಾಯಿತೆ ಬೊಳ್ಂದಂಡ್, ನಿಂಗ ಒಬ್ಬೊಬ್ಬಂಡ ಮೇಲೆ ಬೆಚ್ಚಿತುಳ್ಳ ಪ್ರೀತಿ ದುಂಬ ಜಾಸ್ತಿ ಆಯಂಡ್ ಉಳ್ಳಾಂಗ್, ನಂಗ ಅನ್ನನೆ ಎಣ್ಣ್‌ವದ್ ಸರಿಯಾಯಿತ್ ಉಂಡ್.
ನಾನ್ ಬೈಟ್ ಪೋಲ್ ಪ್ರಾರ್ಥನೆ ಮಾಡ್‌ವಕ ನಿನ್ನ ಎಕ್ಕಾಲು ಗೇನ ಮಾಡ್‌ವಿ. ಅದಲ್ಲತೆ ನಾಡ ಮುತ್ತಜ್ಜಂಗ ದೇವಡ ಸೇವೇನೆ ಮಾಡ್‍ನನೆಕೆ, ನಲ್ಲ ಮನಸಾಕ್ಷಿಲ್, ನಾನು ಸೇವೆ ಮಾಡಿಯಂಡ್ ನೀಕಾಯಿತ್ ದೇವಕ್ ವಂದನೆ ಮಾಡ್‌ವಿ.