2 ಅಕ್ಕ ಯೇಸು ಅಯಿಂಗಳ ನೋಟಿತ್, ಇದ್‍ನೆಲ್ಲ ನೋಟ್‌ವಿರಲ್ಲ, ಈ ಜಾಗತ್‍ಲ್ ಒರ್ ಕಲ್ಲ್‌ರ ಮೇಲೆ ಇಂಞ್ಞೊರ್ ಕಲ್ಲ್ ಇಲ್ಲತನೆಕೆ ಎಲ್ಲಾನ ಪೊಳಿಚಿಡ್‍ವಾಂದ್ ನೇರಾಯಿತು ನಿಂಗಕ್ ಎಣ್ಣುವೀಂದ್ ಎಣ್ಣ್‌ಚಿ.
ನಿನ್ನ ಪೂರ್ತಿ ನಾಶ ಮಾಡ್‌ವ, ನೀಡ ಗೋಡೆರ ಒಳ್‍ಲ್ ನಿನ್ನ, ನೀಡ ಮಕ್ಕಳ ನಾಶ ಮಾಡಿತ್, ಈ ಗೋಡೆರ ಒರ್ ಕಲ್ಲ್‌ರ ಮೇಲೆ ಒರ್ ಕಲ್ಲ್ ಇಲ್ಲತನೆಕೆ ಮಾಡ್‌ವಾಂದ್ ಎಣ್ಣ್‌ಚಿ.
ಎಲ್ಲಾ ಇನ್ನನೆ ನಾಶ ಆಯಿ ಪೋಪಗುಂಡ್, ನಿಂಗ ಎನ್ನನೆ ಉಳ್ಳಯಿಂಗಳಾಯಿತ್ ಇಕ್ಕಂಡು? ನಿಂಗ ಪವಿತ್ರವಾಯಿತ್, ಬಕ್ತಿ ಉಳ್ಳಯಿಂಗಳಾಯಿತ್ ಬದ್‍ಕಂಡು.
ಆ ಪಟ್ಟಣತ್‍ಲ್ ನಾನ್ ದೇವಾಲಯತ್‍ನ ಕಂಡಿತ್‌ಲ್ಲೆ, ಎನ್ನಂಗೆಣ್ಣ್‌ಚೇಂಗಿ, ಸರ್ವ ಶಕ್ತಿವಂತಂವೊನಾಯಿತುಳ್ಳ ದೇವ ಪಿಂಞ ಕೊರಿಕುಟ್ಟಿಯಾಯಿತುಳ್ಳಂವೊನೇ ಅದ್ಂಗ್ ದೇವಾಲಯವಾಯಿತ್ಂಜತ್.