30 ನಂಗ ಪೆರಿಯಯಿಂಗಡ ಕಾಲತ್‍ಲ್ ಇಂಜಿತುಂಡೇಂಗಿ ಅಯಿಂಗಡ ಕೂಡೆ ಪ್ರವಾದಿಯಂಗಳ ಕೊಂದ ಪಾಪತ್‍ಲ್ ನಂಗ ಪಾಲ್‌ದಾರರಾಯಿತ್ ಇಪ್ಪಕಿಂಜಿಲೇಂದ್ ಎಣ್ಣುವಿರ.
ಕಪಟಿಯಾನ ನ್ಯಾಯಪ್ರಮಾಣತ್‍ರ ಉಪಾದ್ಯಂಗಳೇ, ಫರಿಸಾಯಂಗಳೇ ನಿಂಗಕ್ ಅಯ್ಯೋ! ನಿಂಗ ಪ್ರವಾದಿಯಂಗಡ ಗೋರಿನ ಕೆಟ್ಟಿತ್ ನೀತಿವಂತಯಿಂಗಡ ಗೋರಿಕ್ ಅಲಂಕಾರ ಮಾಡಿತ್,
ಅನ್ನನಾಚೇಂಗಿ, ಪ್ರವಾದಿಯಂಗಳ ಕೊಂದಯಿಂಗಡ ಮಕ್ಕಳಾಯಿತುಳ್ಳಿರಾಂದ್ ನಿಂಗಕ್ ನಿಂಗಳೇ ಸಾಕ್ಷಿ ಆಯಿತುಳ್ಳಿರ.
ಇಸ್ರಾಯೇಲ್ ಜನಳ ಗೇನ ಮಾಡಿ, ಬಲಿ ಕೊಡ್‍ಪ ಯರ್ಚಿನ ಅಯಿಂಗ ತಿಂಬಗುಂಡ್, ಅಯಿಂಗಳು ಆ ಬಲಿಪೀಠತ್‍ರ ಕೂಡೆ ಪಾಲದಾರಂಗಾಳಾಯಿತ್ಂಜತಲ್ಲ?
ನಿಂಗ ಸಹ ನಂಗಡ ಕೂಡೆ ಕಷ್ಟ ಅನುಬವಿಚಿಡುವಗುಂಡ್, ನಂಗಡ ಕೂಡೆ ನಿಂಗಕ್ ಸುಕ ಕ್‍ಟ್ಟಿಯಂಡುಂಡ್‍ೕಂದ್ ನಂಗಕ್ ಗೊತ್ತಾಯಿತ್, ನಿಂಗಡ ವಿಷಯತ್‍ಲ್ ನಂಗಕ್ ದೃಡವಾನ ನಿರೀಕ್ಷೆ ಉಂಡ್.