17 ದುಂಬ ಪ್ರವಾದಿಯಳು, ನೀತಿವಂತಯಿಂಗಳು ನಿಂಗ ನೋಟ್‍ವಾನ ನೋಟ್‍ವಕೂ, ನಿಂಗ ಕ್‍ೕಟಂಡುಳ್ಳಾನ ಕ್‍ೕಪಕು ದುಂಬ ಆಸೆ ಪಟ್ಟತ್, ಆಚೇಂಗಿ ಅಯಿಂಗ ಇದ್‍ನೆಲ್ಲಾ ಕಾಂಗತೆ, ಕ್‍ೕಕತೆ ಪೋಚೀಂದ್ ನಾನ್ ನೇರಾಯಿತು ನಿಂಗಕ್ ಎಣ್ಣುವಿ.
ಪಿಂಞ ತಾಂಡ ಶಿಷ್ಯಂಗಡ ಪಕ್ಕ ತಿರಿತ್: ನಿಂಗ ಕಾಂಬದ್‍ನ ನೋಟುವ ಕಣ್ಣ್ ಆಶೀರ್ವಾದ ಪಡ್ಂದದ್.
ದುಂಬ ಪ್ರವಾದಿಯಳು ಪಿಂಞ ರಾಜಂಗಳು, ನಿಂಗ ಇಕ್ಕ ನೋಟ್‍ವಾನ ನೋಟ್‍ವಕು, ನಿಂಗ ಕ್‍ೕಟಂಡುಳ್ಳಾನ ಕ್‍ೕಪಕು ಆಸೆ ಪಟ್ಟತ್, ಆಚೇಂಗಿ ಅಯಿಂಗೆಲ್ಲ ಕಾಂಗತೆ, ಕ್‍ೕಕತೆ ಪೋಚೀಂದ್ ನಿಂಗಕ್ ಎಣ್ಣುವೀಂದ್ ಎಣ್ಣ್‌ಚಿ.
ನಿಂಗಡ ಮುತ್ತಜ್ಜನಾನ ಅಬ್ರಹಾಮ ನಾನ್ ಬಪ್ಪ ದಿವಸತ್‍ನ ಕಾಂಬಕ್ ಕುಶೀಲ್ ಇಂಜತ್, ಅದ್‍ನ ಕಂಡಿತ್ ಅಂವೊಂಗ್ ಕುಶಿ ಆಚೀಂದ್ ಎಣ್ಣ್‌ಚಿ.
ಈಂಗೆಲ್ಲಾ ದೇವ ವಾಗ್ದಾನ ಮಾಡ್‍ನದ್‍ನ ಪಡಯತೆ, ದೂರತ್‍ಲ್ ಅದ್‍ನ ನೋಟಿತ್, ನಂಬಿಕೇಲ್ ಮನಸ್ಸ್‌ಲ್ ಎಡ್‍ತಂಡ್, ಈ ಲೋಕತ್‍ಲ್ ಅಯಿಂಗಳ ಅನ್ಯ ಜನ ಪಿಂಞ ಜಾಗ ಇಲ್ಲತಯಿಂಗಾಂದ್ ಅರಿಕೆ ಮಾಡಿಯಂಡ್ ನಂಬಿಕೇಲ್ ಚತ್ತ್ ಪೋಚಿ.