46 ಪಿಂಞ ದಾರ್ ಬಲ್ಯಂವೊ ಎಣ್ಣಿಯಂಡ್ ಅಯಿಂಗಯಿಂಗಳೇ ತರ್ಕ ಮಾಡ್‌ವಕ್ ಸುರು ಮಾಡ್‍ಚಿ.
ಅಣ್ಣತಮ್ಮಣಂಗ ಒಬ್ಬೊಬ್ಬಂಡ ಕೂಡೆ ಚಾಯಿ ಪ್ರೀತಿಲ್ ಇರಿ; ಗನ ಪಡ್‌ತ್‍ವದ್‍ಲ್ ಎಲ್ಲಾರ್ಕಿಂಜ ಮಿಂಞ ನಿಂಗಳೇ ಮಾಡ್‌ವಯಿಂಗಳಾಯಿತಿರಿ.
ನಿಂಗಡಲ್ಲಿ ಒಬ್ಬೊಬ್ಬನು, ತಾಂಡ ಸ್ತಾನಕಿಂಜ ಬಲ್ಯದಾಯಿತ್ ಗೇನ ಮಾಡತಿ, ಅಂವೊಂಗ್ ಎಚ್ಚಕ್ ನಂಬಿಕೇನ ದೇವ ಪಾಲ್ ಮಾಡಿತ್ ತಂದಿತೋ, ಅದ್ಂಗ್ ತಕ್ಕಂತೆ ಗೇನ ಮಾಡಿಯಂಡ್ ಚಾಯಿ ಮನಸ್ಸ್‌ಲ್ ಇರೀಂದ್ ದೇವ ನಾಕ್ ತಂದಿತುಳ್ಳ ಕೃಪೇರಗುಂಡ್ ನಿಂಗ ಒಬ್ಬೊಬ್ಬಂಗು ಎಣ್ಣ್‌ವಿ.
ಎಲ್ಲಾನ ಏದ್ ಕುತ್ತವು ಪರಿಯತೆ, ಬೋಂಡತ ಚರ್ಚೆ ಮಾಡತೆ ಮಾಡಿಯಂಡಿರಿ.
ನಿಂಗ ಮಾತ್ರ ಬಲ್ಯಯಿಂಗಾಂದ್ ಗೇನ ಮಾಡತಿ, ನಿಂಗಳ ತಗ್ಗ್‌ಚಿಟ್ಟಂಡ್ ಬೋರೆಯಿಂಗ ನಿಂಗಕಿಂಜ ಬಲ್ಯಯಿಂಗಾಂದ್ ಗೇನ ಮಾಡಿ.
ನಾನ್ ಸಬೇಕ್ ಕಾಗದತ್‍ನ ಒಳ್‍ದಿಯೆ. ಆಚೇಂಗಿ ಸಬೇಲ್ ಮುಕ್ಯಸ್ತನಾಯಿತ್‌ಪ್ಪಕ್ ಕುಶಿಯಾಯಿತುಳ್ಳ ದಿಯೊತ್ರೇಫ ನಂಗ ಎಣ್ಣ್‌ನಾನ ಕ್‍ೕಪಕ್ ಮನಸ್ಸಿಲತಂವೊನಾಯಿತುಂಡ್.