37 ನಿಂಗ ದಾರ್‌ನು ತೀರ್ಪ್ ಮಾಡತಿ, ಅಕ್ಕ ದೇವ ನಿಂಗಳ ಸಹ ತೀರ್ಪ್ ಮಾಡುಲೆ; ನಿಂಗ ದಾರ್‌ನು ಕಂಡನೆ ಮಾಡತಿ, ಅಕ್ಕ ದೇವ ನಿಂಗಳ ಸಹ ಕಂಡನೆ ಮಾಡುಲೆ; ಮನ್ನಿಚಿಡಿ, ಅಕ್ಕ ದೇವ ನಿಂಗಳ ಮನ್ನಿಚಿಡುವ.
ಅಂವೊ ಅಂವೊಂಡ ತಕ್ಕ್‌ನ ಕ್‍ೕಕತೆ, ಅಂವೊಂಡ ದುಡ್ಡ್ ಕೊಡ್‌ಪಕತ್ತನೆ ಜೈಲ್‌ಕ್ ಇಟ್ಟತ್.
ಕನಿಕರ ಕಾಟ್‍ವಯಿಂಗ ಆಶೀರ್ವಾದ ಪಡ್ಂದಯಿಂಗ; ಅಯಿಂಗಕ್ ಕನಿಕರ ಕ್‍ಟ್ಟುವ.
ನಿಂಗ ನಿಂದಂಡ್ ಪ್ರಾರ್ಥನೆ ಮಾಡ್‌ವಕ ನಿಂಗಕ್ ದಾರಾಚೇಂಗಿಯು ಪಾಪ ಮಾಡಿತುಂಡೇಂಗಿ ಅಯಿಂಗಳ ಮನ್ನಿಚಿಡಿ, ಅಕ್ಕ ಪರಲೋಕತ್‍ಲ್ ಉಳ್ಳ ನಿಂಗಡ ದೇವನಾನ ಅಪ್ಪ ನಿಂಗ ಮಾಡ್‍ನ ಪಾಪತ್‍ನ ಸಹ ಮನ್ನಿಚಿಡುವ.
ಆನಗುಂಡ್ ಅಂವೊನ ಕೊರಡ್‍ಲ್ ಪೊಯ್ಯುವಂಜಿ, ನಾನ್ ಅಂವೊನ ಬುಟ್ಟ್‌ರ್‍ವೀಂದ್ ಎಣ್ಣ್‌ಚಿ.
ಆನಗುಂಡ್, ನಿಂಗಡ ಅಪ್ಪ ಎನ್ನನೆ ಕನಿಕರ ಉಳ್ಳವಂವೊನಾಯಿತುಂಡೋ ಅನ್ನನೆ ನಿಂಗಳು ಕನಿಕರ ಉಳ್ಳಯಿಂಗಳಾಯಿತಿರಿ.
ನಂಗಡ ಅಜ್ಜಂಗಳಾನ ಅಬ್ರಹಾಮ, ಇಸಾಕ ಪಿಂಞ ಯಾಕೋಬಂಡ ದೇವ, ತಾಂಡ ಸೇವಕನಾನ ಯೇಸುನ ಮಹಿಮೆಪಡ್‍ತಿತುಂಡ್. ನಿಂಗ ಅಂವೊನ ಶಿಲುಬೇಲ್ ಇಡ್‌ವಕ್ ಒಪ್ಪ್‌ಚಿಟ್ಟಿರ; ಪಿಲಾತ ಅಂವೊನ ಬುಡ್‍ತಂಡೂಂದ್ ಎಣ್ಣ್‌ಚೇಂಗಿಯು, ನಿಂಗ, ಅಂವೊನ ಅನ್ನನೆ ಮಾಡ್‍ವದ್ ಬೋಂಡಾಂದ್ ಎಣ್ಣಿರ.
ಒಬ್ಬಂಡ ಮೇಲೆ ಒಬ್ಬ ದಯೆ ಕಾಟಿತ್, ಕರುಣೆ ಉಳ್ಳಯಿಂಗಳಾಯಿತ್, ಕ್ರಿಸ್ತಂಡ ಮೂಲಕ ದೇವ ನಿಂಗಕ್ ಮನ್ನಿಚಿಟ್ಟನೆಕೆ, ನಿಂಗಳು ಒಬ್ಬಂಗ್ ಒಬ್ಬ ಮನ್ನಿಚಿಡಿ.
ನಿಂಗ ಒಬ್ಬೊಬ್ಬನ ಸಹಿಸಿಯಂಡ್, ಒಬ್ಬಂಡ ಮೇಲೆ ಒಬ್ಬಂಗ್ ಉಳ್ಳ ಪುಕಾರ್‍ನ, ಕ್ರಿಸ್ತ ನಿಂಗಡ ಪಾಪತ್‍ನ ಮನ್ನಿಚಿಟ್ಟನೆಕೆ ನಿಂಗ ಒಬ್ಬೊಬ್ಬನ ಮನ್ನಿಚಿಡಂಡು.
ಈ ಲೋಕತ್‍ಲ್ ಜನಕ್ ಕರುಣೆ ಕಾಟತಯಿಂಗಕ್, ದೇವ ತೀರ್ಪ್ ತಪ್ಪ ದಿವಸತ್‍ಲ್, ಅಂವೊ ಕರುಣೆ ಕಾಟುಲೆ; ಆಚೇಂಗಿ, ನಿಂಗ ಕರುಣೆಯುಳ್ಳಯಿಂಗಳಾಯಿತ್ ಇಂಜತೇಂಗಿ, ದೇವ ನಿಂಗಳ ತೀರ್ಪ್ ಮಾಡ್‌ವ ದಿವಸತ್‍ಲ್ ನಿಂಗಕ್ ಕರುಣೆಯುಳ್ಳಂವೊನಾಯಿತಿಪ್ಪಾಂದ್ ನಿಂಗಕ್ ಗೊತ್ತಿರಂಡು.
ನಾಡ ಅಣ್ಣತಮ್ಮಣಂಗಳೇ, ನಿಂಗಕ್ ನ್ಯಾಯತೀರ್ಪ್ ಕ್‍ಟ್ಟತನೆಕೆ ಅಪ್ಪರ ಇಪ್ಪರ ಗೊಣಗಿಯಂಡ್ ಇಕ್ಕತಿ; ನೋಟಿ, ನ್ಯಾಯದಿಪತಿಯಾನ ಯೇಸು ಪಡಿರ ಪಕ್ಕ ನಿಂದಂಡ್ ಉಂಡ್.