28 ನಿಂಗಕ್ ಶಾಪ ಇಡ್‌ವಯಿಂಗಳ ಆಶೀರ್ವಾದ ಮಾಡಿ. ನಿಂಗಡ ಕೂಡೆ ದುಷ್ಟತನತ್‍ಲ್ ನಡ್‍ಪಯಿಂಗಕ್ ಪ್ರಾರ್ಥನೆ ಮಾಡಿ.
ಆಚೇಂಗಿ ನಾನ್ ಇಕ್ಕ ಎಣ್ಣ್‌ವಿ, ನಿಂಗಡ ಶತ್ರುವಳ ಪ್ರೀತಿ ಮಾಡಿ, ನಿಂಗಳ ಹಿಂಸೆ ಮಾಡ್‌ವಯಿಂಗಕ್ ಪ್ರಾರ್ಥನೆ ಮಾಡಿ.
ಅಕ್ಕ ಯೇಸು: ಅಪ್ಪ, ಈಂಗಳ ಮನ್ನಿಚಿಡ್, ಈಂಗ ಎಂತ ಮಾಡಿಯಂಡುಂಡ್‍ೕಂದ್ ಅಯಿಂಗಕ್ ಗೊತ್ತ್‌ಲ್ಲೇಂದ್ ಎಣ್ಣ್‌ಚಿ. ಸಿಪಾಯಿಯಂಗ ಯೇಸುರ ಬಟ್ಟೇನ ಬಾಗ ಮಾಡಿತ್, ಚೀಟಿ ಇಟ್ಟಿತ್, ಬಟ್ಟೇನ ಎಡ್‍ತಂಡತ್.
ಆಚೇಂಗಿ, ನಾಡ ತಕ್ಕ್ ಕ್‍ೕಪ ನಿಂಗಕ್ ಎಣ್ಣ್‌ವಿ: ನಿಂಗಡ ಶತ್ರುವಳ ಪ್ರೀತಿ ಮಾಡಿ, ನಿಂಗಳ ದ್ವೇಶ ಮಾಡ್‌ವಯಿಂಗಕ್ ನಲ್ಲದ್ ಮಾಡಿ.
ಆಚೇಂಗಿ ನಿಂಗ ನಿಂಗಡ ಶತ್ರುವಳ ಪ್ರೀತಿ ಮಾಡಿ, ನಲ್ಲದ್ ಮಾಡಿ, ಪುನಃ ನಂಗಕ್ ಕ್‍ಟ್ಟ್‌ವಾಂದ್ ಬಯಂದತೆ, ಅಯಿಂಗಕ್ ಸಾಲ ಕೊಡಿ, ಅಕ್ಕ ನಿಂಗಡ ಫಲ ಬಲ್ಯದಾಯಿತಿಪ್ಪ ಪಿಂಞ ನಿಂಗ ದೇವಾದಿ ದೇವಡ ಮಕ್ಕಳಾಯಿತ್‌ಪ್ಪಿರ. ಎನ್ನಂಗೆಣ್ಣ್‌ಚೇಂಗಿ ಅಂವೊ ಕೆಟ್ಟ ಜನಕ್ ಪಿಂಞ ದುಷ್ಟಯಿಂಗಕ್ ನಲ್ಲದ್ ಮಾಡಿಯಂಡುಂಡ್.
ಯೆಹೂದ್ಯರಲ್ಲತ ಬೋರೆ ಜನಳು, ಯೆಹೂದ್ಯಂಗಳು ತಂಗಡ ಅದಿಕಾರಿಯಂಗಡ ಕೂಡೆ ಕೂಡಿತ್ ಅಪೊಸ್ತಲಂಗಳ ಅವಮಾನಪಡುತಿತ್, ಕೊಲ್ಲಂಡೂಂದ್ ಕಲ್ಲ್ ಕನಿಪಕ್ ತೀರ್ಮಾನ ಮಾಡ್‍ಚಿ.
ಪಿಂಞ ಮೊಣಕಾಲ್ ಇಟ್ಟಿತ್, ಒಡೆಯನೇ, ಈ ಪಾಪತ್‍ರ ಅಪರಾದತ್‍ನ ಅಯಿಂಗಡ ಮೇಲೆ ಇಡತೇಂದ್ ಎಣ್ಣಿತ್ ಬಲ್ಯ ಸ್ವರತ್‍ಲ್ ಕೂತ್ ಕೊಡ್‌ತಿತ್ ಜೀವ ಬುಟ್ಟತ್.
ನಿಂಗಕ್ ಹಿಂಸೆ ಮಾಡ್‌ವಯಿಂಗಳ ಆಶೀರ್ವಾದ ಮಾಡಿ. ಅಯಿಂಗಕ್ ಶಾಪ ಕೊಡ್‌ಕತಿ. ದೇವ ಅಯಿಂಗಳ ಆಶೀರ್ವಾದ ಮಾಡಂಡೂಂದ್ ಪ್ರಾರ್ಥನೆ ಮಾಡಿ.
ನಂಗ ನಂಗಡ ಕೈಯಿಂಜ ಕಷ್ಟಪಟ್ಟಿತ್ ಕೆಲಸ ಮಾಡ್‌ವ. ನಂಗಳ ದಾರ್ ಅವಮಾನ ಮಾಡ್‍ಚೇಂಗಿಯು ನಂಗ ಅಯಿಂಗಳ ಆಶೀರ್ವಾದ ಮಾಡ್‌ವ. ನಂಗಳ ಹಿಂಸೆ ಮಾಡ್‌ವಯಿಂಗಡ ಮೇಲೆ ನಂಗ ತಾಳ್ಮೆನ ಕಾಟುವ.
ತುದಿ ಪಿಂಞ ಶಾಪ, ದಂಡು ಒರೇ ನಾವ್ಂಜ ಬಪ್ಪ. ನಾಡ ಅಣ್ಣತಮ್ಮಣಂಗಳೇ, ಇನ್ನನೆ ಇಪ್ಪಕ್ಕಾಗ.
ಕ್‍ೕಡ್ ಮಾಡ್‌ವಯಿಂಗಕ್ ಕ್‍ೕಡ್ ಮಾಡತಿ, ಅವಮಾನ ಮಾಡ್‌ವಯಿಂಗಳ ಅವಮಾನ ಮಾಡತಿ, ಆಚೇಂಗಿ, ನಿಂಗ ಆಶೀರ್ವಾದ ಪಡೆಯುವಕ್ ದೇವ ನಿಂಗಳ ಕಾಕಿತುಂಡ್‍ೕಂದ್ ಗೇನ ಮಾಡಿತ್ ಅಯಿಂಗಳ ಆಶೀರ್ವಾದ ಮಾಡಿ.