1 ಪಿಂಞ ಅಲ್ಲಿ ಇಂಜಯಿಂಗೆಲ್ಲ, ಯೇಸುನ ಪಿಲಾತ ಎಣ್ಣುವ ಅದಿಪತಿರ ಪಕ್ಕ ಕಾಕಿಯಂಡ್ ಪೋಚಿ.
ಪೊಲಾಕ ಆಪಕ ಯೆಹೂದ್ಯಂಗಡ ಪೆರಿಯಯಿಂಗಳು, ನ್ಯಾಯಪ್ರಮಾಣತ್‍ರ ಉಪಾದ್ಯಂಗಳು, ಮುಕ್ಯ ಯಾಜಕಂಗಳು ಒಕ್ಕಚೆ ಕೂಡಿತ್ ಯೇಸುನ ಅಯಿಂಗಡ ಆಲೋಚನೆ ಸಬೇಕ್ ಕಾಕಿಯಂಡ್ ಪೋಯಿತ್ ನಿಪ್ಪ್‌ಚಿಟ್ಟಿತ್:
ಅಯಿಂಗ: ನಂಗಕ್ ಇಂಞು ಬೋರೆ ಸಾಕ್ಷಿ ಏದ್ ಬೋಂಡು? ಇಂವೊಂಡ ಬಾಯಿಂಜೆಲೇ ನಂಗೆಲ್ಲ ಕ್‍ೕಟತಲ್ಲಾಂದ್ ಅಯಿಂಗ ಎಣ್ಣ್‌ಚಿ.
ನೇರಾಯಿತು, ಹೆರೋದ, ಪೊಂತ್ಯ ಪಿಲಾತ, ಯೆಹೂದ್ಯಂಗ ಅಲ್ಲತ ಜನ ಪಿಂಞ ಇಸ್ರಾಯೇಲ್‍ರ ಜನ ಎಲ್ಲಾರು ಈ ಪಟ್ಟಣತ್‍ಲ್ ಕೂಡಿತ್, ನೀನ್ ಅಬಿಷೇಕ ಮಾಡ್‍ನ ನೀಡ ಪವಿತ್ರವಾನ ಸೇವಕನಾನ ಯೇಸುಕ್ ವಿರೋದವಾಯಿತ್ ಕೆಟ್ಟ ಆಲೋಚನೆ ಮಾಡಿತ್ ಬಾತ್.