17 ನಾಡಗುಂಡ್ ಎಲ್ಲಾ ಜನಳು ನಿಂಗಳ ವಿರೋದ ಮಾಡ್‌ವ.
ನಾಡಗುಂಡ್ ಎಲ್ಲಾ ಜನಳು ನಿಂಗಳ ದ್ವೇಶಿಚುಡುವ, ಆಚೇಂಗಿ ಕಡೇಕತ್ತನೆ ದೃಡವಾಯಿತ್ ನಂಬಿಕೇಲ್ ನಿಪ್ಪಂವೊಂಗ್ ರಕ್ಷಣೆ ಕ್‍ಟ್ಟ್‌ವ.
ಅಕ್ಕ ನಿಂಗಳ ಹಿಂಸೆ ಮಾಡ್‌ವಕಾಯಿತ್ ಒಪ್ಪ್‌ಚಿಟ್ಟಿತ್, ನಿಂಗಳ ಕೊಲ್ಲ್‌ಚಿಡುವ. ನಾಡ ಪೆದತ್‍ನಗುಂಡ್ ಎಲ್ಲಾ ದೇಶತ್‍ರ ಜನ ನಿಂಗಳ ದ್ವೇಶ ಮಾಡ್‌ವ.
ಜನ ನಿಂಗಳ ನಾಡಗುಂಡ್ ಅವಮಾನ ಮಾಡಿತ್, ಹಿಂಸೆ ಮಾಡಿತ್ ಪಿಂಞ ನಿಂಗಡ ಮೇಲೆ ಕೆಟ್ಟ ತಕ್ಕ್ ಪರ್ಂದತೇಂಗಿ, ನಿಂಗ ಆಶೀರ್ವಾದ ಪಡ್ಂದಯಿಂಗ;
ನಿಂಗ ನಾಡ ಶಿಷ್ಯಂಗಳಾನಗುಂಡ್ ಎಲ್ಲಾರು ನಿಂಗಳ ತ್‍ಕ್ಕಾರ ಮಾಡ್‌ವ, ಆಚೇಂಗಿ ಕಡೇಕತ್ತನೆ ಸ್ತಿರವಾಯಿತ್ ನಿಪ್ಪಂವೊಂಗ್ ರಕ್ಷಣೆ ಕ್‍ಟ್ಟುವ.
ನೀಡ ಅಪ್ಪವ್ವಂಗ, ಅಣ್ಣತಮ್ಮಣಂಗ, ನಿಂಗಡ ಬೆಂದ್‌ಕ, ನಿಂಗಡ ಸ್ನೇಹಿತಂಗಳೇ ನಿಂಗಳ ನಿಂಗಕ್ ವಿರೋದವಾಯಿತ್ ಉಳ್ಳಯಿಂಗಡ ಪಕ್ಕ ಒಪ್ಪ್‌ಚಿಡುವ. ನಿಂಗಡಲ್ಲಿ ಚೆನ್ನ ಜನಳ ಸಹ ಕೊಲ್ಲ್‌ಚಿಡುವ.
ಆಚೇಂಗಿಯು, ನಿಂಗಡ ಮಂಡೆಲುಳ್ಳ ಒರ್ ತಲ್‌ಮಿಯು ನಾಶ ಆಪುಲೆ.
ಮನುಷ್ಯಕುಮಾರಂಗಾಯಿತ್ ಜನ ನಿಂಗಳ ಪಗೆ ಮಾಡಿತ್, ನಿಂಗಳ ತ್‍ಕ್ಕಾರ ಮಾಡಿತ್, ಅವಮಾನ ಮಾಡಿತ್, ನಿಂಗಕ್ ಕೆಟ್ಟ ಪೆದ ತಂತ್, ಬೋಂಡಾಂದ್ ಪೊರಮೆ ಇಟ್ಟತೇಂಗಿ ನಿಂಗ ಆಶೀರ್ವಾದ ಪಡ್ಂದಯಿಂಗಳಾಯಿತ್‌ಪ್ಪಿರ.
ನಿಂಗ ಈ ಲೋಕತ್‍ರ ಜನತ್‍ರನೆಕೆ ಇಂಜತೇಂಗಿ, ಈ ಲೋಕ ನಿಂಗಳ ಅಯಿಂಗಡ ಜನಾಂದ್ ಪ್ರೀತಿ ಮಾಡ್‌ವಕಿಂಜತ್; ಆಚೇಂಗಿ ನಿಂಗ ಈ ಲೋಕತ್‍ರ ಜನತ್‍ರನೆಕೆ ಇಲ್ಲತಗುಂಡ್ ಪಿಂಞ ನಾನ್ ನಿಂಗಳ ಈ ಲೋಕತ್ಂಜ ಗೊತ್ತ್ ಮಾಡಿತುಳ್ಳಗುಂಡ್ ಈ ಲೋಕ ನಿಂಗಳ ವಿರೋದಿಚಿಡುವ.
ಆಚೇಂಗಿ ನನ್ನ ದಾರ್ ಅಯಿಚತೋ ಅಂವೊನ ಗೊತ್ತಿಲ್ಲತಗುಂಡ್, ನಾಡಗುಂಡ್ ನಿಂಗಕ್ ಇನ್ನನೆ ಮಾಡ್‌ವ.
ನಾನ್ ನೀಡ ವಾಕ್ಯತ್‍ನ ಅಯಿಂಗಕ್ ಕೊಡ್‌ತಿಯೆ; ನಾನ್ ಈ ಲೋಕಕ್ ಕೂಡ್‍ನಂವೊ ಅಲ್ಲತನೆಕೆ, ಈಂಗಳು ಈ ಲೋಕಕ್ ಕೂಡ್‍ನಯಿಂಗ ಅಲ್ಲ. ಅದ್ಂಗಾಯಿತ್ ಈ ಲೋಕ ಈಂಗಳ ದ್ವೇಶ ಮಾಡಿಯಂಡ್ ಉಂಡ್.
ಈ ಲೋಕತ್‍ರ ಜನ ನಿಂಗಳ ವಿರೋದಿಚಿಡುಲೆ, ಅಯಿಂಗ ಮಾಡ್‌ವ ಕಾರ್ಯವೆಲ್ಲಾ ಕೆಟ್ಟದ್‍ೕಂದ್ ನಾನ್ ಸಾಕ್ಷಿ ಎಣ್ಣಿಯಂಡುಳ್ಳಗುಂಡ್, ನನ್ನ ವಿರೋದಿಚಿಡುವ.
ಅಂವೊ ನಾಡ ಪೆದತ್‍ರಗುಂಡ್ ಎಚ್ಚಕ್ ಹಿಂಸೆ ಅನುಬವಿಚಿಡಂಡೂಂದ್ ನಾನ್ ಅಂವೊಂಗ್ ಕಾಟಿ ಕೊಡ್‌ಪೀಂದ್ ಎಣ್ಣ್‌ಚಿ.
ಆನಗುಂಡ್, ಕ್ರಿಸ್ತಂಗಾಯಿತ್ ನಾಕ್ ಬಪ್ಪ ಬಲಹೀನವಾನ ವಿಷಯತ್‍ಲ್, ಜನ ಎಣ್ಣುವ ದೂಷಣೇಲ್, ಹಿಂಸೇಲ್, ಕಷ್ಟತ್‍ಲ್, ದುಃಖತ್‍ಲ್ ನಾನ್ ಕುಶಿಪಟ್ಟಂಡುಳ್ಳ. ಅನ್ನನೆ, ನಾನ್ ಬಲಹೀನವಾಯಿತ್ ಇಪ್ಪಕಲೆ ಬಲ ಉಳ್ಳಂವೊನಾಯಿತುಳ್ಳ.
ಎನ್ನನೆ ಎಣ್ಣ್‌ಚೇಂಗಿ, ಚತ್ತ್ ಪೋಪಕುಳ್ಳ ನಂಗಡ ತಡೀಲ್, ಯೇಸುರ ಜೀವ ಗೊತ್ತಾಪಕಾಯಿತ್ ಬದ್‍ಕಿಯಂಡುಳ್ಳ ನಂಗ ಎಕ್ಕಾಲು ಯೇಸುರಗುಂಡ್ ಚಾವಕ್ ಒಪ್ಪ್‌ಚಿಟ್ಟಯಿಂಗಡನೆಕೆ ಉಂಡ್.
ನಂಗ ನಂಗಡ ವಿಷಯತ್‍ನ ಬೋದನೆ ಮಾಡಿಯಂಡಿಲ್ಲೆ. ಯೇಸು ಕ್ರಿಸ್ತ ಒಡೆಯಾಂದೂ, ಆಚೇಂಗಿ ನಂಗಳ ಯೇಸುರಗುಂಡ್ ನಿಂಗಡ ಸೇವಕಂಗಾಂದೂ ಪ್ರಚಾರ ಮಾಡಿಯಂಡುಂಡ್.
ನಿಂಗಕ್, ಯೇಸು ಕ್ರಿಸ್ತಂಡ ಮೇಲೆ ನಂಬಿಕೆ ಬೆಪ್ಪ ಬಾಗ್ಯ ಮಾತ್ರ ಅಲ್ಲ, ಅಂವೊಂಗಾಯಿತ್ ನೊಂಬಲ ಎಡ್‍ತವಕೂ ಬಾಗ್ಯ ಕ್‍ಟ್ಟ್‌ಚಿ.
ಕ್ರಿಸ್ತಂಡ ಪೆದಕಾಯಿತ್ ಜನ ನಿಂಗಳ ಏಜುವದಾಚೇಂಗಿ, ನಿಂಗ ಆಶೀರ್ವಾದ ಪಡ್ಂದಯಿಂಗ, ಮಹಿಮೇರ ಆತ್ಮವಾನ ದೇವಡ ಆತ್ಮ ನಿಂಗಡ ಮೇಲೆ ವಾಸ ಮಾಡ್‌ವ.
ಪಿಂಞ ನೀಡ ಸಹಿಸುವ ಗುಣತ್‍ನ, ಪೊರುಮೆನ ಪಿಂಞ ನಾಡ ಪೆದಕಾಯಿತ್ ಚೋತ್ ಪೋಕತೆ ಪ್ರಯತ್ನ ಪಡ್‍ವದ್ ಸಹ ನಾಕ್ ಗೊತ್ತುಂಡ್.