2 ಇದ್‍ನೆಲ್ಲ ನೀನ್ ಏದ್ ಅದಿಕಾರತ್‍ಲ್ ಮಾಡಿಯಂಡುಳ್ಳಿಯಾ? ದಾರ್ ನೀಕ್ ಈ ಅದಿಕಾರತ್‍ನ ಕೊಡ್‌ತತ್‍ೕಂದ್ ಕ್‍ೕಟತ್?
ಒರ್ ದಿವಸ ಯೇಸು ದೇವಾಲಯತ್‍ಲ್ ಜನಕ್ ಬೋದನೆ ಕೊಡ್‌ತಂಡ್, ನಲ್ಲ ಸುದ್ದಿನ ಪ್ರಚಾರ ಮಾಡಿಯಂಡಿಪ್ಪಕ, ಮುಕ್ಯ ಯಾಜಕಂಗಳು, ನ್ಯಾಯಪ್ರಮಾಣತ್‍ರ ಉಪಾದ್ಯಂಗಳು ಪಿಂಞ ಪೆರಿಯಯಿಂಗಳು ಕೂಡಿಯಂಡ್ ಯೇಸುರ ಪಕ್ಕ ಬಂದಿತ್:
ಅದ್ಂಗ್ ಯೇಸು: ನಾನ್ ನಿಂಗಕ್ ಒರ್ ಪ್ರಶ್ನೆ ಇಡ್‌ವಿ.
ಅಕ್ಕ ಯೆಹೂದ್ಯ ಅದಿಕಾರಿಯಂಗ ಯೇಸುಕ್: ನೀನ್ ಏದ್ ಗುರ್‍ತ್‍ನ ಕಾಟಿತ್, ಇನ್ನನೆ ಮಾಡ್‌ವಕುಳ್ಳ ಅದಿಕಾರ ನೀಕ್ ಉಂಡ್‍ೕಂದ್ ನಂಗಕ್ ಕಾಟ್‌ವಿಯಾಂದ್ ಕ್‍ೕಟತ್.
ಆಚೇಂಗಿ ತಪ್ಪ್ ಮಾಡ್‍ನಂವೊ ಮೋಶೇನ ಆಬರಿಕ್ ತಳ್ಳಿತ್: ನಿನ್ನ ನಂಗಕ್ ಅದಿಕಾರಿಯಾಯಿತು, ನ್ಯಾಯಾದಿಪತಿಯಾಯಿತು ಮಾಡ್‍ನಂವೊ ದಾರ್?
ಹಟಮಾರಿ ಜನಳೇ, ನಿಂಗಡ ಹೃದಯ ಎಚ್ಚಕ್ ಕಲ್ಲಾಯಿತಿಕ್ಕು! ದೇವಡ ತಕ್ಕ್‌ಕ್ ನಿಂಗ ಎಚ್ಚಕ್ ಕಿವ್‌ಡಂಗಳಾಯಿತ್ ಉಳ್ಳಿರ! ನಿಂಗಳು ನಿಂಗಡ ಅಜ್ಜಂಗಡನೆಕೆ ಪವಿತ್ರಾತ್ಮಂಗ್ ವಿರೋದವಾಯಿತ್ ಜಗಳ ಮಾಡಿಯಂಡುಳ್ಳಿರ.