47 ನಿಂಗಕ್ ಅಯ್ಯೋ! ನಿಂಗಡ ಪೂರ್ವಕಾಲತ್‌ರಯಿಂಗ ಕೊಂದ ಪ್ರವಾದಿಯಂಗಕ್ ನಿಂಗ ಬಲ್ಯ ಗೋರಿ ಕೆಟ್ಟುವಿರ.
ಕಪಟಿಯಾನ ನ್ಯಾಯಪ್ರಮಾಣತ್‍ರ ಉಪಾದ್ಯಂಗಳೇ, ಫರಿಸಾಯಂಗಳೇ ನಿಂಗಕ್ ಅಯ್ಯೋ! ನಿಂಗ ಚುಣ್ಣ ಪೊಜ್ಜ ಗೋರಿರನೆಕೆ ಉಳ್ಳಿರ. ಎನ್ನನೆ ಎಣ್ಣ್‌ಚೇಂಗಿ, ಅದ್ ಪೊರಮೆ ಚಾಯಿ ಕಾಂಬ ಒಳ್‍ಲ್ ನೋಟ್‌ನಕ ಚತ್ತ ಮನುಷ್ಯಂಗಡ ಮೂಳೆ ಪಿಂಞ ಅಶುದ್ದ ಚಾವ್ ತಡಿ ಇಪ್ಪ.
ನಿಂಗಡ ಪೂರ್ವಕಾಲತ್‌ರಯಿಂಗ ಮಾಡ್‍ನ ಪಾಪಕ್ ನಿಂಗಳು ಕೂಡಿತುಳ್ಳಿರಾಂದ್ ನಿಂಗಳೇ ಸಾಕ್ಷಿ ಆಯಿತುಳ್ಳಿರ, ಎನ್ನನೆ ಎಣ್ಣ್‌ಚೇಂಗಿ ಅಯಿಂಗ ಕೊಂದಯಿಂಗಕ್ ನಿಂಗ ಬಲ್ಯ ಗೋರಿ ಕೆಟ್ಟಿತುಳ್ಳಿರ.
ಹಟಮಾರಿ ಜನಳೇ, ನಿಂಗಡ ಹೃದಯ ಎಚ್ಚಕ್ ಕಲ್ಲಾಯಿತಿಕ್ಕು! ದೇವಡ ತಕ್ಕ್‌ಕ್ ನಿಂಗ ಎಚ್ಚಕ್ ಕಿವ್‌ಡಂಗಳಾಯಿತ್ ಉಳ್ಳಿರ! ನಿಂಗಳು ನಿಂಗಡ ಅಜ್ಜಂಗಡನೆಕೆ ಪವಿತ್ರಾತ್ಮಂಗ್ ವಿರೋದವಾಯಿತ್ ಜಗಳ ಮಾಡಿಯಂಡುಳ್ಳಿರ.
ಅಲ್ಲಿಯತ್‍ರ ಯೆಹೂದ್ಯಂಗ, ಒಡೆಯನಾನ ಯೇಸುನ ಪಿಂಞ ಪ್ರವಾದಿಯಳ ಕೊಂದಯಿಂಗ. ಇಕ್ಕ ನಂಗಕ್ ಹಿಂಸೆ ಕೊಡ್‌ತಂಡ್, ದೇವಕ್ ಕುಶಿಯಿಲ್ಲತಯಿಂಗಳಾಯಿತ್ ಉಂಡ್. ಜನಳ ಅಯಿಂಗ ದ್ವೇಶ ಮಾಡಿಯಂಡುಂಡ್.