17 ನಿಂಗ ಒಬ್ಬೊಬ್ಬನ ಪ್ರೀತಿ ಮಾಡಂಡು, ಇದ್ ನಾನ್ ನಿಂಗಕ್ ಪಡಿಪ್‍ಚಿಡುವ ಆಜ್ಞೆ.
ಇಕ್ಕ ನಾನ್ ನಿಂಗಕ್ ಒರ್ ಪುದಿಯ ಹುಕುಮ್ ತಪ್ಪಿ. ಅದ್ ಎಂತ ಎಣ್ಣ್‌ಚೇಂಗಿ, ನಿಂಗ ಒಬ್ಬೊಬ್ಬಂಡ ಮೇಲೆ ಪ್ರೀತಿಲ್ ಇರಂಡು; ನಾನ್ ನಿಂಗಳ ಪ್ರೀತಿ ಮಾಡ್‍ನನೆಕೆ, ನಿಂಗಳು ಒಬ್ಬೊಬ್ಬಂಡ ಮೇಲೆ ಪ್ರೀತಿ ಮಾಡಂಡು.
ನಾನ್ ನಿಂಗಳ ಪ್ರೀತಿ ಮಾಡ್‌ವನೆಕೆ ನಿಂಗಳು ಒಬ್ಬೊಬ್ಬನ ಪ್ರೀತಿ ಮಾಡಂಡು, ಇದ್ ನಾಡ ಆಜ್ಞೆ.
ಎಲ್ಲಾರ್‌ಕು ಚಾಯಿ ಮರ್ಯಾದೆ ಕೊಡಿ, ಯೇಸುನ ನಂಬ್‍ನಯಿಂಗಳ ಪ್ರೀತಿ ಮಾಡಿ, ದೇವಕ್ ಬೊತ್ತ್‌ಚಿಡಿ, ರಾಜನ ಗನಪಡ್‌ತಂಡು.
ಇಕ್ಕಲು ಅವ್ವ, ನಂಗ ಒಬ್ಬೊಬ್ಬನ ಪ್ರೀತಿ ಮಾಡಂಡೂಂದ್, ನಿಂಗಕ್ ಪುದಿಯ ಆಜ್ಞೆಯಾಯಿತ್ ಒಳ್‍ದತೆ, ಆದಿಯಿಂಜಲೆ ನಂಗಕ್ ಇಂಜ ಆಜ್ಞೆನ ಒಳ್‍ದಿತ್ ನಿಂಗಳ ಬೋಡುವಿ.