29 ಇದೆಲ್ಲಾ ನಡ್‍ಪಕ, ನಿಂಗ ನನ್ನ ನಂಬಂಡೂಂದೇ, ಇದೆಲ್ಲಾ ನಡ್‍ಪಕ್ ಮಿಂಞ ಇದ್‍ನ ನಿಂಗಕ್ ಎಣ್ಣಿಯೆ.
ಅದ್ ಅನ್ನನೆ ನಡ್‌ಪಕಾಪಕ, ನಾಡ ಮೇಲೆ ಉಳ್ಳ ನಂಬಿಕೇಲ್ ನಿಂಗ ನಿಂದಿತ್, ನಾನೇ ಅಂವೋಂದ್ ನಿಂಗಕ್ ಗೊತ್ತಾಪನೆಕೆ, ಇಕ್ಕಲೆ ನಿಂಗಕ್ ಎಣ್ಣ್‌ವಿ.
ಇಂಞು ಮಿಂಞಕ್ ನಾನ್ ನಿಂಗಡ ಕೂಡೆ ದುಂಬ ತಕ್ಕ್ ಪರಿಯುವಕ್ ಕಯ್ಯುಲೆ. ಎನ್ನಂಗೆಣ್ಣ್‌ಚೇಂಗಿ, ಈ ಲೋಕತ್‍ರ ಅದಿಪತಿ ಬಂದಂಡುಂಡ್. ನಾಡ ಮೇಲೆ ಅಂವೊಂಗ್ ಏದ್ ಶಕ್ತಿಯು ಇಲ್ಲೆ.