15 ನಿಂಗಕ್ ನಾಡ ಮೇಲೆ ಪ್ರೀತಿ ಉಂಡೇಂಗಿ ನಾಡ ಆಜ್ಞೆಂಗಕ್ ಬಗ್ಗಿತ್ ನಡ್‍ಪಿರ.
ಒಬ್ಬ ತಾಂಡ ಅಪ್ಪನ ಆಚೇಂಗಿಯು, ಅವ್ವಳ ಆಚೇಂಗಿಯು ನಾಕಿಂಜ ದುಂಬ ಪ್ರೀತಿ ಮಾಡ್‍ಚೇಂಗಿ ಅಂವೊ ನಾಡ ಶಿಷ್ಯನಾಯಿತ್‌ಪ್ಪಕ್ ಯೋಗ್ಯನಲ್ಲ. ಪಿಂಞ ತಾಂಡ ಮೋಂವೊನಾಚೇಂಗಿಯು, ಮೋವಳಾಚೇಂಗಿಯು ನಾಕಿಂಜ ದುಂಬ ಪ್ರೀತಿ ಮಾಡ್‍ಚೇಂಗಿ ಅಂವೊ ನಾಡ ಶಿಷ್ಯನಾಯಿತ್‌ಪ್ಪಕ್ ಯೋಗ್ಯನಲ್ಲ.
ದೇವ ನಿಂಗಡ ನೇರಾನ ಅಪ್ಪನಾಯಿತುಂಡೇಂಗಿ, ನಿಂಗ ನಾಡ ಮೇಲೆ ಪ್ರೀತಿಲ್ ಇಪ್ಪಿರ. ಎನ್ನಂಗೆಣ್ಣ್‌ಚೇಂಗಿ ನಾನ್ ದೇವಡಯಿಂಜ ಬಂದಿತುಳ್ಳ. ನಾನ್ ನಾಡ ಇಷ್ಟ ಪ್ರಕಾರ ಬಂದಿತ್‌ಲ್ಲೆ, ಅಂವೊನೇ ನನ್ನ ಅಯಿಚತ್.
ಒಬ್ಬ, ಒಡೆಯನ ಪ್ರೀತಿ ಮಾಡತೆ ಪೋಚೇಂಗಿ ಅಂವೊಂಡ ಮೇಲೆ ಶಾಪ ಬರಡ್. ಓ ನಂಗಡ ಒಡೆಯನೇ ಬಾ.
ನಂಗಡ ನಂಬಿಕೆ ಯೇಸು ಕ್ರಿಸ್ತಂಡ ಮೇಲೆ ಇಂಜತೇಂಗಿ, ಸುನ್ನತಿ ಮಾಡಿತ್ಂಜತೇಂಗಿಯು, ಮಾಡತ ಇಂಜತೇಂಗಿಯು, ಅದ್ ಒಂದು ಲೆಕ್ಕ ಆಪುಲೆ. ಅದ್ಂಡ ಬದ್‍ಲಾಯಿತ್ ನಂಬಿಕೇಲ್, ಪ್ರೀತಿರಗುಂಡ್ ನಂಗ ಮಾಡ್‌ವ ಕಾರ್ಯವೇ ಮುಕ್ಯವಾನದ್.
ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ಮೇಲೆ ಕಾಲಕಾಲಕು ಪಾಳಾಕತ ಪ್ರೀತಿ ಮಾಡ್‌ವ ಎಲ್ಲಾಡ ಕೂಡೆ ಕೃಪೆ ಇಕ್ಕಡ್. ಆಮೆನ್.
ನಿಂಗ ಅಂವೊನ ಕಂಡಿತಿಲ್ಲೆ, ಆಚೇಂಗಿಯು ನಿಂಗ ಅಂವೊನ ಪ್ರೀತಿ ಮಾಡ್‌ವಿರ; ಇಕ್ಕ ನಿಂಗ ಅಂವೊನ ಕಾಂಗತ ಪೋನಕ ಸಹ, ನಿಂಗ ಅಂವೊನ ನಂಬುವಿರ. ನಿಂಗ ಎಣ್ಣುವಕಯ್ಯತನೆಕೆ, ಮಹಿಮೆಲ್ ದುಂಬ್‍ನ ಅಚ್ಚಕ್ ಕುಶೀಲ್ ಇಪ್ಪಿರ.
ನಂಗ ಅಂವೊಂಡ ಆಜ್ಞೆಕ್ ಬಗ್ಗಿತ್ ನಡ್‍ಪದೇ ಪ್ರೀತಿ. ನಿಂಗ ಆದಿಯಿಂಜಲೆ ಕ್‍ೕಟನೆಕೆ, ಮಾಡ್‍ವಕುಳ್ಳ ಆಜ್ಞೆ ಎಂತ ಎಣ್ಣ್‌ಚೇಂಗಿ ನಿಂಗ ಎಲ್ಲಾರು ಪ್ರೀತಿಲ್ ಬದ್‍ಕಂಡೂಂದ್ ಉಳ್ಳದೇ.