10 ತುದಿ ಪಿಂಞ ಶಾಪ, ದಂಡು ಒರೇ ನಾವ್ಂಜ ಬಪ್ಪ. ನಾಡ ಅಣ್ಣತಮ್ಮಣಂಗಳೇ, ಇನ್ನನೆ ಇಪ್ಪಕ್ಕಾಗ.
ಅಲ್ಲಿಂಜ ಅಬೀಮೆಲೆಕ ಅಬ್ರಹಾಮನ ಕಾಕಿಚಿಟ್ಟಿತ್: ನೀನ್ ನಂಗಕ್ ಎಂತ ಕಾರ್ಯ ಮಾಡಿಯಾ? ನಾನ್ ನೀಕ್ ಎಂತ ತಪ್ಪ್ ಮಾಡಿಯೇಂದ್ ನೀನ್, ನಾಕ್ ಪಿಂಞ ನಾಡ ರಾಜ್ಯತ್‌ರ ಮೇಲೆ ಇಚ್ಚಕ್ ಬಲ್ಯ ಪಾಪ ಬಪ್ಪ್‌ಚಿಡ್‌ವಕ್ ಇಂಜಿಯೆ? ಮಾಡ್‌ವಕ್ಕಾಗಾಂದ್ ಉಳ್ಳ ಕಾರ್ಯತ್‌ನ ನೀನ್ ನಾಕ್ ಮಾಡಿತುಳ್ಳಿಯಾಂದ್ ಎಣ್ಣ್‌ಚಿ.
ನಿಂಗಕ್ ಹಿಂಸೆ ಮಾಡ್‌ವಯಿಂಗಳ ಆಶೀರ್ವಾದ ಮಾಡಿ. ಅಯಿಂಗಕ್ ಶಾಪ ಕೊಡ್‌ಕತಿ. ದೇವ ಅಯಿಂಗಳ ಆಶೀರ್ವಾದ ಮಾಡಂಡೂಂದ್ ಪ್ರಾರ್ಥನೆ ಮಾಡಿ.
ನಿಂಗಡ ಪಕ್ಕ ಒಟ್ಟೆಕಿಚ್ಚ್ ಉಂಡ್, ಬೋರೆಯಿಂಗಡ ಕೂಡೆ ಜಗಳ ಮಾಡ್‌ವಿರ. ಇದೆಲ್ಲಾನ ನಿಂಗಡ ಪಾಪತ್‍ರ ಗುಣತ್‍ನಗುಂಡ್ ಈ ಲೋಕತ್‍ರ ಜನತ್‍ರನೆಕೆ ಮಾಡಿಯಂಡುಳ್ಳಿರಾಂದ್ ನಿಂಗಕ್ ಗೊತ್ತ್‌ಲ್ಲೆಯಾ?
ಅದೂ ಅಲ್ಲತೆ ಅಯಿಂಗ ಸೋಮಾರಿಯಾಯಿತ್, ಮನೆಮನೆಕ್ ಸುತ್ತಿಯಂಡಿಪ್ಪ. ಸೋಮಾರಿಯಾಯಿತ್ ಮಾತ್ರ ಅಲ್ಲತೆ, ಬೋರೆಯಿಂಗಡ ಕೆಲಸತ್‍ಲ್ ಬಂತ್, ಎಣ್ಣುವಕ್ಕಾಗಾಂತ ವಿಷಯತ್‍ನ ಪರ್‌ದಂಡ್, ಹರಟೆ ಪೊಯ್ಯುವ.
ನಾಡ ಅಣ್ಣತಮ್ಮಣಂಗಳೇ, ನಿಂಗ ಮೋಸ ಪೋಕತಿ.
ನಾಡ ಅಣ್ಣತಮ್ಮಣಂಗಳೇ! ಎಲ್ಲಾರು ಕ್‍ೕಪಕ್ ಚುರ್‌ಕಾಯಿತು, ತಕ್ಕ್ ಪರಿಯುವಕ್ ನಿದಾನವಾಯಿತು, ಚೆಡಿ ಮಾಡ್‌ವಕ್ ತಾಳ್ಮೆಯಾಯಿತು ಇಕ್ಕಂಡು.
ನಾಡ ಅಣ್ಣತಮ್ಮಣಂಗಳೇ, ದೇವ ನಿಂಗಕ್ ಕಠಿಣ ತೀರ್ಪ್ ತಪ್ಪಾಂದ್ ಗೊತ್ತಾನಗುಂಡ್ ನಿಂಗ ಎಲ್ಲಾರು ಬೋದನೆಕಾರಂಗಳಾಯಿತ್ ಆಕತಿರಿ.
ಒರೇ ಜಲತ್‌ಂಜ ನಲ್ಲ ನೀರ್ ಪಿಂಞ ಉಪ್ಪ್ ನೀರ್ ಬಪ್ಪಕ್ ಕಯ್ಯುವ?
ಅದೇ ನಾವ್‌ಲ್ ನಂಗಡ ಅಪ್ಪನಾನ ದೇವನ ತುದಿಚಿತ್ ಕೊಂಡಾಡುವ; ದೇವಡ ರೂಪತ್‌ಲ್ ಸೃಷ್ಟಿ ಮಾಡ್‍ನ ಮನುಷ್ಯಂಗಳ ಅದೇ ನಾವ್ಂಜ ಶಾಪ ಇಡ್‌ವ.
ಕ್‍ೕಡ್ ಮಾಡ್‌ವಯಿಂಗಕ್ ಕ್‍ೕಡ್ ಮಾಡತಿ, ಅವಮಾನ ಮಾಡ್‌ವಯಿಂಗಳ ಅವಮಾನ ಮಾಡತಿ, ಆಚೇಂಗಿ, ನಿಂಗ ಆಶೀರ್ವಾದ ಪಡೆಯುವಕ್ ದೇವ ನಿಂಗಳ ಕಾಕಿತುಂಡ್‍ೕಂದ್ ಗೇನ ಮಾಡಿತ್ ಅಯಿಂಗಳ ಆಶೀರ್ವಾದ ಮಾಡಿ.