14 ಗಟ್ಟಿಯಾನ ಆಹಾರ ಬಲ್ಯಂಗಕ್ ಮಾತ್ರ ಆಪ, ಎನ್ನನೆ ಎಣ್ಣ್‌ಚೇಂಗಿ ಅಯಿಂಗ ಅದ್‍ನ ಎಕ್ಕಾಲು ಉಪಯೋಗಿಚಿಡುವಗುಂಡ್, ನಲ್ಲದ್ ಕೆಟ್ಟದ್ ಎಂತದ್‍ೕಂದ್ ಅಯಿಂಗಕ್ ಗೊತ್ತಾಪನೆಕೆ ಅಯಿಂಗ ಪಡಿಚಿತುಂಡ್.
ನಿಂಗ ಅದನ ತಿಂಬ ದಿವಸತ್‌ಲ್ ನಿಂಗಡ ಕಣ್ಣ್ ತೊರ್ಪಾಂದು, ನಿಂಗಕ್ ನಲ್ಲದ್ ಕೆಟ್ಟದ್ ಎಂತದ್‍ೕಂದ್ ಗೊತ್ತಾಯಿತ್ ನಿಂಗ ದೇವಡನೆಕೆ ಆಪಿರಾಂದು ದೇವಕ್ ಗೊತ್ತುಂಡ್‌ಂದ್ ಎಣ್ಣ್‌ಚಿ.
ಆನಗುಂಡ್ ನಿಂಗಳ ಪ್ರೀತಿ ಮಾಡತಯಿಂಗಳ ಸಹ ನಿಂಗ ಪ್ರೀತಿ ಮಾಡಿತ್, ಪರಲೋಕತ್‍ಲ್ ಉಳ್ಳ ನಿಂಗಡ ಅಪ್ಪ ಪೂರ್ತಿಯಾಯಿತುಳ್ಳನೆಕೆ ನಿಂಗಳು ಪೂರ್ತಿಯಾಯಿತಿರಿ.
ನಂಬಿಕೇಲ್ ಸ್ತಿರಯಿಲ್ಲತಯಿಂಗಳ ಕೂಟಿಯೊಳಿ; ಆಚೇಂಗಿಯು ಅಯಿಂಗಡ ಅನುಮಾನತ್‍ನ ಕುತ್ತ ಪರಿಯತಿರಿ.
ಅನ್ನನೆ ಇಂಜತೇಂಗಿಯು, ಆತ್ಮತ್‍ರ ಬದ್‍ಕ್‍ಲ್ ಬೊಳ್ಂದಿತುಳ್ಳಯಿಂಗಡ ಪಕ್ಕ ಜ್ಞಾನತ್‍ರ ವಿಷಯತ್‍ನ ನಂಗ ಪರಿವ. ಈ ಲೋಕತ್‍ರ ಜ್ಞಾನತ್‍ನ ಅಲ್ಲ, ಪಾಳಾಯಿ ಪೋಪ ಈ ಲೋಕತ್‍ರ ರಾಜಂಗಡ ಜ್ಞಾನವು ಅಲ್ಲ,
ಅಂವೊ ನಿಂಗಳ ಕಾಕ್‍ನಗುಂಡ್ ನಿಂಗಕುಳ್ಳ ನಿರೀಕ್ಷೆ ಎಂತದ್‍ೕಂದು, ದೇವಡ ಮಕ್ಕಡ ಪಕ್ಕ ನಂಗಕುಳ್ಳ ಬಾದ್ಯತೆರ ಮಹಿಮೇರ ಐಶ್ವರ್ಯ ಎಂತದ್‍ೕಂದ್ ಗೊತ್ತಾಪಕು,
ಅಕ್ಕ, ನಂಗ ಎಲ್ಲಾರು ದೇವಡ ಮೋಂವೊಂಡ ಮೇಲೆ ಇಟ್ಟಿತುಳ್ಳ ನಂಬಿಕೇಲ್ ಪಿಂಞ ಬುದ್ದಿಲ್ ಒಂದಾಯಿತ್, ಕ್ರಿಸ್ತಂಡ ಪೂರ್ತಿ ಅಳ್‌ತೆಕ್ ಬೊಳ್ಂದಿತ್ ಪೂರ್ತಿ ಮನುಷ್ಯಂಗಳಾಯಿತ್ ಬೊಳಿವಕಯ್ಯು.
ಆನಗುಂಡ್, ನಂಗಡಲ್ಲಿ ದೇವಡ ಮೇಲೆ ಚಾಯಿ ನಂಬಿಕೆ ಬೆಚ್ಚಿತುಳ್ಳ ಸ್ತಿರವಾನಯಿಂಗೆಲ್ಲಾ ಇನ್ನನೆ ಗೇನಮಾಡಿಯಂಡಿರಂಡು; ಅನ್ನನೆ ನಿಂಗ ಇದ್‍ನ ಒಪ್ಪ್‌ಲೇಂದ್ ಎಣ್ಣ್‌ಚೇಂಗಿ, ಅದ್‍ನ ಸಹ ದೇವ ನಿಂಗಕ್ ಕಾಟಿತಪ್ಪ.
ಆಚೇಂಗಿ, ಎಲ್ಲಾನ ಪರೀಕ್ಷೆ ಮಾಡಿತ್ ದೇವಡಿಂಜ ಬಪ್ಪದ್ ಎಂತಾಂದ್ ನೋಟಿತ್ ನಲ್ಲದ್‍ನ ಎಡ್‌ತೊಳಿ.
ಪ್ರಯೋಜನವಿಲ್ಲತ ವಿಷಯತ್ ತರ್ಕ ಮಾಡಿಯಂಡ್, ಸತ್ಯ ಇಲ್ಲತ ಅಜ್ಜಿಯಡ ಕಥೇನ ಕ್‍ೕಟಂಡ್ ಸಮಯ ಕಳೆಯಂಡ. ಅದ್ಂಡ ಬದ್‍ಲ್ ದೇವಬಕ್ತಿಲ್ ಇಪ್ಪಕ್ ಪ್ರಯತ್ನಪಡ್.
ಆನಗುಂಡ್, ಕ್ರಿಸ್ತಂಡ ವಿಷಯತ್ ನಿಂಗ ಕ್‍ೕಟಿತುಳ್ಳ ಅಡಿಪಾಯತ್‍ರ ಬೋದನಲೇ ನಂಗ ನಿಂದಂಡಿಪ್ಪಕ್ಕಾಗ. ಅದ್ಂಡ ಬದ್‍ಲ್, ನಂಗಳ ಚಾವ್‍ಕ್ ಬಲ್‍ಚಂಡ್ ಪೋಪ ಪಾಪತ್‍ರ ಕೆಲಸತ್‍ನ ಕಳೆಯುವ ಪಶ್ಚಾತಾಪ, ದೇವಡ ಮೇಲೆ ಇಡ್‌ವ ನಂಬಿಕೆ,
ನಂಗ ಎಲ್ಲಾರು ನಾನಾ ತರತ್‍ಲ್ ತಪ್ಪ್ ಮಾಡಿಯಂಡುಂಡ್; ಆಚೇಂಗಿ ನಿಂಗ ನಿಂಗಡ ನಾವ್‌ಕ್ ಕಡಿವಾಣ ಇಟ್ಟತೇಂಗಿ ನಿಂಗಡ ಬದ್‍ಕ್‍ನ ಕಾಪಾಡ್‍ವಿರ.