1 ಒಬ್ಬನ ಒಬ್ಬ, ಯೇಸುನ ನಂಬ್‍ನಯಿಂಗಡ ಪ್ರೀತಿಲ್ ಪ್ರೀತಿಚಿಡಿ.
ನಿಂಗ ಒಬ್ಬೊಬ್ಬನ ಪ್ರೀತಿ ಮಾಡಂಡು, ಇದ್ ನಾನ್ ನಿಂಗಕ್ ಪಡಿಪ್‍ಚಿಡುವ ಆಜ್ಞೆ.
ಐಂಬದ್ ನಾಳ್‌ರ ಪಂಚಾಶತ್ತಮ ಎಣ್ಣುವ ನಮ್ಮೆರ ದಿವಸ ಬಪ್ಪಕ, ಅಯಿಂಗೆಲ್ಲಾ ಒರ್ ಜಾಗಕ್ ಬಂತ್ ಒಟ್ಟ್ ಕೂಡ್‍ಚಿ.
ಯೇಸುನ ನಂಬ್‍ನಯಿಂಗ ಎಲ್ಲಾರು ಒರೇ ಮನಸ್ಸ್‌ಲ್ ಒರೇ ಹೃದಯತ್‍ಲ್ ಬದ್‍ಕಿಯಂಡಿಂಜತ್. ಒಬ್ಬ ಸಹ ತಾಂಡ ವಸ್ತುನ ಅಂವೊಂಗ್ ಮಾತ್ರಾಂದ್ ಎಣ್ಣಿಯಂಡಿಂಜಿಲೆ; ಅಲ್ಲಿ ಉಳ್ಳ ಎಲ್ಲಾನ ಎಲ್ಲಾರ್‌ಕು ಕೂಡನದಾಯಿತ್ಂಜತ್.
ನಾಡ ಅಣ್ಣತಮ್ಮಣಂಗಳೇ, ನಿಂಗ ಇಕ್ಕ ಸ್ವಾತಂತ್ರವಾಯಿತ್ ಬದ್‍ಕ್‍ವಕ್ ದೇವ ನಿಂಗಳ ಕಾಕ್‍ಚಿ, ನಿಂಗಕ್ ಕ್‍ಟ್ಟ್‌ನ ಈ ಸ್ವಾತಂತ್ರತ್‍ನ ನಿಂಗಡ ಇಚ್ಛೆರನೆಕೆ ಪಾಪತ್‍ರ ಗುಣತ್‍ಲ್ ನಡ್‍ಪಕ್ ಉಪಯೋಗಿಚಿಡತಿ. ಆಂಡ ಬದ್‍ಲ್ ನಿಂಗ ಪ್ರೀತಿಲ್ ಒಬ್ಬಂಗ್ ಒಬ್ಬ ಸೇವೆ ಮಾಡಿ.
ಪವಿತ್ರಾತ್ಮತ್‍ರ ಫಲ ಎಂತ ಎಣ್ಣ್‌ಚೇಂಗಿ, ಪ್ರೀತಿ, ಸಂತೋಷ, ಸಮಾದಾನ, ಸಹಿಸುವ ಶಕ್ತಿ, ಕರುಣೆ, ನಲ್ಲರಿಕೆ, ನಂಬಿಕೆ,
ನಂಗಡ ನಂಬಿಕೆ ಯೇಸು ಕ್ರಿಸ್ತಂಡ ಮೇಲೆ ಇಂಜತೇಂಗಿ, ಸುನ್ನತಿ ಮಾಡಿತ್ಂಜತೇಂಗಿಯು, ಮಾಡತ ಇಂಜತೇಂಗಿಯು, ಅದ್ ಒಂದು ಲೆಕ್ಕ ಆಪುಲೆ. ಅದ್ಂಡ ಬದ್‍ಲಾಯಿತ್ ನಂಬಿಕೇಲ್, ಪ್ರೀತಿರಗುಂಡ್ ನಂಗ ಮಾಡ್‌ವ ಕಾರ್ಯವೇ ಮುಕ್ಯವಾನದ್.
ಪವಿತ್ರಾತ್ಮತ್‍ರ ಐಕ್ಯತ್‌ನ ಕಾಪಾಡ್‌ವಕ್ ಸಮಾದಾನತ್‍ಲ್ ಒಂದಾಯಿತ್ ಇಂಜಂಡ್ ಎಚ್ಚರತ್‍ಲ್ ಇರಿ.
ಕ್ರಿಸ್ತ ನಂಗಳ ಪ್ರೀತಿ ಮಾಡಿತ್, ನಂಗಕಾಯಿತ್, ದೇವಕ್ ಎನ್ನನೆ ಅಂವೊನನೇ ಒರ್ ಸುಗಂದ ವಾಸನೆರ ಕಾಣಿಕೆಯಾಯಿತು, ಬಲಿಯಾಯಿತು ಒಪ್ಪ್‌ಚಿಟ್ಟತೋ ಅನ್ನನೆ ನಿಂಗಳು ಸಹ ಪ್ರೀತಿಲ್ ನಡ್‌ಕಂಡು.
ನಂಗಡ ಅಣ್ಣತಮ್ಮಣಂಗಳೇ, ನಿಂಗಕಾಯಿತ್ ನಂಗ ಎಕ್ಕಾಲು ದೇವಕ್ ವಂದನೆ ಎಣ್ಣುವಕ್ ಜವಾಬ್ದಾರಂಗಳಾಯಿತ್ ಉಂಡ್; ನಿಂಗ ದೇವಡ ಮೇಲೆ ಬೆಚ್ಚಿತುಳ್ಳ ನಂಬಿಕೆ ಚಾಯಿತೆ ಬೊಳ್ಂದಂಡ್, ನಿಂಗ ಒಬ್ಬೊಬ್ಬಂಡ ಮೇಲೆ ಬೆಚ್ಚಿತುಳ್ಳ ಪ್ರೀತಿ ದುಂಬ ಜಾಸ್ತಿ ಆಯಂಡ್ ಉಳ್ಳಾಂಗ್, ನಂಗ ಅನ್ನನೆ ಎಣ್ಣ್‌ವದ್ ಸರಿಯಾಯಿತ್ ಉಂಡ್.
ನಂಗ ಒಬ್ಬೊಬ್ಬಂಗ್ ಪ್ರೀತಿಲ್ ಪಿಂಞ ನಲ್ಲ ಕೆಲಸ ಮಾಡ್‌ವದ್‍ಲ್ ಎನ್ನನೆ ಸಹಾಯ ಮಾಡ್‌ವಕ್ ಕಯ್ಯೂಂದ್ ಗೇನ ಮಾಡಿಯಂಡ್ ಇರಂಡು.
ಆನಗುಂಡ್, ನಿಂಗ ಕಪಟ ಇಲ್ಲತ ಯೇಸುನ ನಂಬ್‍ನಯಿಂಗಡ ಪ್ರೀತಿಲ್ ಇಪ್ಪಕಾಯಿತ್ ಪಿಂಞ ಒಬ್ಬೊಬ್ಬಂಗಡ ಮೇಲೆ ನೇರಾಯಿತ್ ಹೃದಯತ್ಂಜ ಪ್ರೀತಿ ಮಾಡ್‌ವಕಾಯಿತ್, ಇಕ್ಕ ನಿಂಗ ಸತ್ಯಕ್ ಬಗ್ಗಿತ್ ನಡ್‍ಪನೆಕೆ ಇಕ್ಕ ನಿಂಗಳ ಶುದ್ದ ಮಾಡಿರ. ಶುದ್ದ ಹೃದಯತ್ಂಜ, ನಿಂಗ ನೇರಾಯಿತ್ ಒಬ್ಬೊಬ್ಬನ ಪ್ರೀತಿ ಮಾಡಿ.
ಎಲ್ಲಾರ್‌ಕು ಚಾಯಿ ಮರ್ಯಾದೆ ಕೊಡಿ, ಯೇಸುನ ನಂಬ್‍ನಯಿಂಗಳ ಪ್ರೀತಿ ಮಾಡಿ, ದೇವಕ್ ಬೊತ್ತ್‌ಚಿಡಿ, ರಾಜನ ಗನಪಡ್‌ತಂಡು.
ಕಡೇಕ್ ನಾನ್ ಎಣ್ಣುವದ್ ಎಂತ ಎಣ್ಣ್‌ಚೇಂಗಿ: ನಿಂಗ ಎಲ್ಲಾರು ಒಬ್ಬ ಒಬ್ಬಂಡ ಕೂಡೆ ಐಕ್ಯತ್‍ಲ್ ಬದ್‍ಕಂಡು; ದಯೆ ಉಳ್ಳಯಿಂಗಳಾಯಿತ್, ಯೇಸುನ ನಂಬ್‍ನಯಿಂಗಡ ಪ್ರೀತಿ ಉಳ್ಳಯಿಂಗಳಾಯಿತ್, ಕನಿಕರ ಉಳ್ಳಯಿಂಗಳಾಯಿತ್, ಪೊರುಮೆ ಉಳ್ಳಯಿಂಗಳಾಯಿತ್ ಇಕ್ಕಂಡು.
ಎಲ್ಲಾಕಿಂಜ ಜಾಸ್ತಿಯಾಯಿತ್, ಒಬ್ಬೊಬ್ಬಂಗಡ ಮೇಲೆ ಆಳವಾನ ಪ್ರೀತಿಲ್ ಇರಿ. ಎನ್ನಂಗೆಣ್ಣ್‌ಚೇಂಗಿ, ಪ್ರೀತಿ ದುಂಬ ಪಾಪತ್‍ನ ಮುಚ್ಚಿರ್‌ವ.
ದೇವ ಬಕ್ತಿರ ಕೂಡೆ ಯೇಸುನ ನಂಬ್‍ನಯಿಂಗಡ ಮೇಲೆ ಉಳ್ಳ ಪ್ರೀತಿನ, ಯೇಸುನ ನಂಬ್‍ನಯಿಂಗಡ ಮೇಲೆ ಉಳ್ಳ ಪ್ರೀತಿರ ಕೂಡೆ ಎಲ್ಲಾ ಜನಳ ಪ್ರೀತಿಚಿಡುವ ಪ್ರೀತಿನ ಕೂಟ್‍ವಕ್ ಪೇಚಾಡಿಯಂಡಿರಿ.
ದೇವಡ ಆಜ್ಞೆ ಎಂತ್‍ೕಂದ್ ಎಣ್ಣ್‌ಚೇಂಗಿ: ದೇವಡ ಮೋಂವೊನಾನ ಯೇಸು ಕ್ರಿಸ್ತಂಡ ಪೆದತ್‍ನ ನಂಬಿತ್ ಅಂವೊ ನಂಗಕ್ ಆಜ್ಞೆ ಮಾಡ್‍ನನೆಕೆ ನಂಗ ಒಬ್ಬೊಬ್ಬನ ಪ್ರೀತಿ ಮಾಡ್‌ವದೇ.
ದಾರೇಂಗಿ, ನಾನ್ ದೇವನ ಪ್ರೀತಿ ಮಾಡ್‌ವೀಂದ್ ಎಣ್ಣಿತ್ ತಾಂಡ ಅಣ್ಣತಮ್ಮಣಂಗಳ ದ್ವೇಶ ಮಾಡ್‍ಚೇಂಗಿ ಅಂವೊ ಒರ್ ಪೊಟ್ಟ್‌ಮಾರಿ. ನಂಗ ಎಕ್ಕಾಲು ಕಂಡಂಡ್ ಉಳ್ಳ ಅಣ್ಣತಮ್ಮಣಂಗಳ ಪ್ರೀತಿ ಮಾಡತೆ ಪೋನಕ ನಂಗ ಕಾಂಗತ ದೇವನ ಎನ್ನನೆ ಪ್ರೀತಿ ಮಾಡ್‌ವಕ್ ಕಯ್ಯು.
ಆಚೇಂಗಿಯು, ನೀಡ ಮೇಲೆ ಚೆನ್ನ ವಿಷಯತ್‍ಲ್ ನಾಕ್ ಕುತ್ತ ಪರಿಯುವನೆಕೆ ಉಂಡ್. ಎನ್ನಂಗೆಣ್ಣ್‌ಚೇಂಗಿ, ನಾಡ ಮೇಲೆ ಬೆಚ್ಚಿತ್ಂಜ ಆದ್ಯ ಪ್ರೀತಿನ ನೀನ್ ಬುಟ್ಟಿಯ.