ನಾನೇ ಪರಲೋಕತ್ಂಜ ಬಂದ ಜೀವತ್‍ರ ಒಟ್ಟಿ; ಈ ಒಟ್ಟಿನ ತಿಂಬಯಿಂಗ ಎಕ್ಕಾಲು ಬದ್‍ಕ್‍ವ; ನಾನ್ ತಪ್ಪ ಒಟ್ಟಿ ನಾಡ ತಡಿಯೇ. ಈ ಲೋಕತ್‍ರ ಜನ ನಿತ್ಯ ಜೀವ ಪಡೆಯುವಕಾಯಿತ್ ನಾನ್ ನಾಡ ತಡೀನ ತಪ್ಪೀಂದ್ ಎಣ್ಣ್‌ಚಿ.
ಅನ್ನನೆ ಇಂಜತೇಂಗಿ ಈ ಲೋಕ ಸೃಷ್ಟಿ ಆನ ಕಾಲತ್ಂಜ ಯೇಸು ದುಂಬ ಕುರಿ ಕಷ್ಟ ಅನುಬವಿಚಿಡುವಕಿಂಜತ್. ಆಚೇಂಗಿ, ಒರೇ ಕುರಿ ಪಾಪತ್‍ನ ಕಳೆಯುವಕಾಯಿತ್ ಅಂವೊನಾಯಿತೇ ಅಂವೊನ ಬಲಿ ಕೊಡ್‍ಪಕ್ ಈ ಆಕೀರ್ ಕಾಲತ್‍ಲ್ ಪ್ರತ್ಯಕ್ಷ ಆಚಿ.