3 ನಾನ್ ನಿಂಗಕ್ ಕಾಳ್‌ಕಡ್ಡಿ ಪಿಂಞ ತರಕಾರಿನ ತಿಂಬಕ್ ತಂದನೆಕೆ, ಬೂಮಿರ ಮೇಲೆ ಉಳ್ಳ ಜೀವಜಂತುವಳ ನಿಂಗಕ್ ಆಹಾರವಾಯಿತ್ ತಂದಿಯೇ.
ಬೂಮಿರ ಮೇಲೆ ಉಳ್ಳ ಎಲ್ಲಾ ಪ್ರಾಣಿಯ, ಬಾನತ್‌ಲ್ ಉಳ್ಳ ಎಲ್ಲಾ ಪಕ್ಷಿಯ, ನೆಲತ್‌ಲ್ ಪರಿಯುವ ಎಲ್ಲಾ ಪ್ರಾಣಿಯ ಪಿಂಞ ಸಮುದ್ರತ್‌ಲ್ ಉಳ್ಳ ಎಲ್ಲಾ ಮೀನ್ ನಿಂಗಕ್ ಬೊತ್ತಿತ್ ಬೊರಡ್‌ವ. ಅದನೆಲ್ಲಾ ನಿಂಗಡ ಕೈಕ್ ಕೊಡ್‌ತಿತುಳ್ಳ.
ಏದ್ ಆಹಾರವು ಅದಾಯಿತೇ ಅಶುದ್ದ ಆಯಿತಿಪ್ಪುಲೇಂದ್ ಒಡೆಯನಾನ ಯೇಸುರಲ್ಲಿ ಗೊತ್ತಾಯಿತ್ ದೃಡವಾಯಿತ್ ನಂಬುವಿ; ಏದಾಚು ಒರ್ ಆಹಾರ ವಸ್ತುನ ಅಶುದ್ದಾಂದ್ ಒಬ್ಬ ಗೇನ ಮಾಡ್‍ಚೇಂಗಿ, ಅಂವೊಂಗ್ ಅದ್ ಅಶುದ್ದವಾಯಿತ್‌ಪ್ಪ.
ಎನ್ನಂಗೆಣ್ಣ್‌ಚೇಂಗಿ, ದೇವಡ ರಾಜ್ಯ ತಿಂಬದು ಕುಡಿಪದು ಅಲ್ಲ, ಅದ್ ನೀತಿಯು, ಸಮಾದಾನವು ಪವಿತ್ರಾತ್ಮತ್‍ರಗುಂಡ್ ಕ್‍ಟ್ಟ್‌ವ ಕುಶಿಯು ಆಯಿತುಂಡ್.
ಆಹಾರ ವಿಷಯಕಾಯಿತ್ ದೇವಡ ಕ್ರಿಯೇನ ಪಾಳ್ ಮಾಡತಿ. ಎಲ್ಲಾ ಆಹಾರವು ಶುದ್ದವಾನದ್; ಆಚೇಂಗಿಯು, ಬೋರೆ ಒಬ್ಬ ಬುದ್ದ್‌ಪೋಪಕ್ ಕಾರಣವಾಯಿತ್ ಅಂವೊ ತಿಂದತೇಂಗಿ, ಅದ್ ಅಂವೊಂಗ್ ಕುತ್ತವಾಯಿತ್‌ಪ್ಪ.
ಎಲ್ಲಾನ ತಿಂಬ ಒಬ್ಬ, ಎಲ್ಲಾನ ತಿಂಗತಂವೊನ ಕಮ್ಮಿಯಾಯಿತ್ ನೋಟ್‌ವಕ್ಕಾಗ; ಎಲ್ಲಾನ ತಿಂಗತಂವೊ, ತಿಂಬಂವೊನ ತಪ್ಪ್ ಮಾಡ್‍ನಂವೋಂದ್ ತೀರ್ಪ್ ಮಾಡ್‌ವಕ್ಕಾಗ. ದೇವ ಅಂವೊನ ಸಹ ಸ್ವೀಕಾರ ಮಾಡಿತುಂಡಲ್ಲ.
ಎಂತ ಬೋಂಡ್‍ಚೇಂಗಿಯು ಮಾಡ್‌ವಕ್ ನಂಗಕ್ ಹಕ್ಕ್ ಉಂಡ್, ಆಚೇಂಗಿ ನಂಗ ಮಾಡ್‌ವದೆಲ್ಲ ನಂಗಕ್ ಸಹಾಯ ಆಪುಲೆ. ಎಂತ ಬೋಂಡ್‍ಚೇಂಗಿಯು ಮಾಡ್‌ವಕ್ ನಂಗಕ್ ಹಕ್ಕ್ ಉಂಡ್, ಆಚೇಂಗಿ ನಂಗ ಮಾಡ್‌ವದೆಲ್ಲ, ಬೋರೆಯಿಂಗ ದೇವಡಲ್ಲಿ ಬೊಳಿಯುವಕ್ ಸಹಾಯ ಮಾಡುಲೆ.
ಆನಗುಂಡ್ ನಿಂಗ ತಿಂಬದಾಚೇಂಗಿಯು, ಕುಡಿಪದಾಚೇಂಗಿಯು, ಎಂತ ಮಾಡ್‌ವದಾಚೇಂಗಿಯು, ನಿಂಗ ಮಾಡ್‌ವ ಕಾರ್ಯ ದೇವಡ ಮಹಿಮೆಕಾಯಿತ್ ಮಾಡಂಡು.
ಆನಗುಂಡ್, ನಿಂಗ ತಿಂಬಕುಳ್ಳ ವಿಷಯವಾಡ್, ಕುಡಿಪಕುಳ್ಳ ವಿಷಯವಾಡ್, ನಮ್ಮೆ ಮಾಡ್‌ವ ವಿಷಯವಾಡ್, ಕರ್ತಬಾವುರ ವಿಷಯವಾಡ್, ಸಬ್ಬತ್ ದಿವಸತ್‍ರ ವಿಷಯವಾಡ್, ದಾರೂ ನಿಂಗಳ ತೀರ್ಪ್ ಮಾಡತೆ ಇರಡ್.