28 ಯೆಹೂದ್ಯಂಗಾಂದು ಇಲ್ಲೆ ಯೆಹೂದ್ಯಲ್ಲತಯಿಂಗಾಂದು ಇಲ್ಲೆ, ಅಡಿಯಾಳ್‍ೕಂದು ಇಲ್ಲೆ, ಎಜಮಾನಾಂದು ಇಲ್ಲೆ, ಆಣಾಳ್‍ೕಂದು ಇಲ್ಲೆ, ಪೊಣ್ಣಾಳ್‍ೕಂದು ಇಲ್ಲೆ. ನಿಂಗೆಲ್ಲಾರು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್‍ಲ್ ಒಂದಾಯಿತ್ ಉಂಡ್.
ಈ ಕೊರಿಕೊಟ್ಟ್‌ರ ಕೊರಿಯ ಅಲ್ಲತೆ, ಬೋರೆ ಕೊರಿಯಳು ನಾಕ್ ಉಂಡ್; ಅಯಿಂಗಳ ಸಹ ನಾನ್ ಕೂಟಿಯಂಡ್ ಬರಂಡು; ಆ ಕೊರಿಯ ನಾಡ ತಕ್ಕ್‌ನ ಕ್‍ೕಪ, ಅಕ್ಕ ಈಂಗ ದಂಡಾಳು ಒರೇ ಗುಂಪಾಯಿತ್, ಒರೇ ಕೊರಿಕಾಪಂವೊಂಡ ಅಡಿಕ್ ಬಪ್ಪ.
ಯೆಹೂದ್ಯ ಜನಕಾಯಿತ್ ಮಾತ್ರ ಅಲ್ಲ, ಚದ್‌ರಿ ಪೋನ ದೇವಡ ಮಕ್ಕಳ ಒಟ್ಟ್ ಕೂಟಿತ್ ಒಂದಾಯಿತ್ ಮಾಡ್‌ವಕಾಯಿತ್ ಚಾವಾಂದು ಪ್ರವಾದನೆಯಾಯಿತ್ ಎಣ್ಣ್‌ಚಿ.
ಇಂಞು ನಾನ್ ಈ ಲೋಕತ್‍ಲ್ ಇಪ್ಪುಲೆ, ಆಚೇಂಗಿ, ಈಂಗ ಲೋಕತ್‍ಲ್ ಇಪ್ಪ; ನಾನ್ ನೀಡ ಪಕ್ಕ ಬಂದಂಡುಂಡ್, ಪವಿತ್ರವಾಯಿತುಳ್ಳ ಅಪ್ಪನೇ, ನಾನು ನೀನು ಬೋರೆ ಬೋರೆಯಾಯಿತ್ ಅಲ್ಲತೆ, ಒಂದಾಯಿತ್ ಉಳ್ಳನೆಕೆ ಈಂಗಳು ಒಂದಾಯಿತ್ ಇಪ್ಪನೆಕೆ, ನೀನ್ ನಾಕ್ ತಂದಿತುಳ್ಳ ನೀಡ ಪೆದತ್‍ಲ್ ಅಯಿಂಗಳ ಕಾಪಾಡಂಡು.
ಕ್ರಿಸ್ತಂಡ ನಲ್ಲ ಸುದ್ದಿನ ಪ್ರಚಾರ ಮಾಡ್‌ವಕ್ ನಾಕ್ ಞಾಣ ಆಪುಲೆ. ಎನ್ನಂಗೆಣ್ಣ್‌ಚೇಂಗಿ, ಆದ್ಯವಾಯಿತ್ ಯೆಹೂದ್ಯ ಜನತ್‍ಲ್ ಪಿಂಞ ಯೆಹೂದ್ಯ ಅಲ್ಲತಯಿಂಗಡ ಮದ್ಯತ್‍ಲ್ ದಾರೆಲ್ಲಾ ನಂಬುವ, ಅಯಿಂಗಕೆಲ್ಲ ರಕ್ಷಣೆ ಕ್‍ಟ್ಟುವಕ್ ಅದ್ ದೇವಡ ಶಕ್ತಿಯಾಯಿತುಂಡ್.
ದೇವಡ ನೀತೀಂದ್ ಎಣ್ಣುವದ್, ಯೇಸು ಕ್ರಿಸ್ತಂಡಲ್ಲಿ ಇಡ್‌ವ ನಂಬಿಕೇರ ಮೂಲಕ ನಂಗಕ್ ಕ್‍ಟ್ಟ್‌ವದ್, ಅದ್ ನಂಬಿಕೆ ಇಡ್‌ವಯಿಂಗ ದಾರಾಯಿತ್ಂಜತೇಂಗಿಯು, ಅಯಿಂಗ ಎಲ್ಲಾರ್‌ಕು ಕ್‍ಟ್ಟುವ, ಏದ್ ಪಕ್ಷಪಾತವು ಇಲ್ಲೆ.
ಆನಗುಂಡ್, ದೇವ ಅಂವೊನ ನಂಬತಯಿಂಗಕ್ ತಪ್ಪ ಶಿಕ್ಷೆ, ಕ್ರಿಸ್ತ ಯೇಸುರ ಕೂಡೆ ಐಕ್ಯತ್‍ಲ್ ಉಳ್ಳಯಿಂಗಕ್ ತಪ್ಪುಲೆ.
ದೇವಡ ಬಲ್ಯ ಚೆಡಿಕ್ ಯೋಗ್ಯವಾನ ಪಾತ್ರತ್‍ರಮೇಲೆ, ದುಂಬ ತಾಳ್ಮೆಲ್ ಸಹಿಸಿಯಂಡ್ ಇಂಜತೇಂಗಿ ನೀಕ್ ಎಂತ?
ಎನ್ನಂಗೆಣ್ಣ್‌ಚೇಂಗಿ, ಕ್ರಿಸ್ತನ ನಂಬತ ವಡಿಯನ ಅಂವೊಂಡ ಪೊಣ್ಣ್‌ರಗುಂಡ್ ದೇವ ಅಂವೊನ ಪವಿತ್ರವಾನಂವೊನಾಯಿತ್ ಮಾಡ್‌ವ. ಕ್ರಿಸ್ತನ ನಂಬತ ಪೊಣ್ಣ್‌ನ ಅವಡ ವಡಿಯನಗುಂಡ್ ದೇವ ಅವಳ ಶುದ್ದ ಮಾಡ್‌ವ. ಅನ್ನನೆ ಇಲ್ಲತೆಪೋಚೇಂಗಿ, ಅಯಿಂಗಡ ಮಕ್ಕ ಎನ್ನನೆ ಶುದ್ದವಾಯಿತ್ ಇಪ್ಪ? ಇಕ್ಕ ನೋಟಿ, ಅಯಿಂಗಡ ಮಕ್ಕಳ ದೇವ ಶುದ್ದ ಮಾಡಿತ್‌ಲ್ಲೆಯಾ?
ನೀಕ್ ಸುನ್ನತಿ ಆಯಿತ್ಂಜತೇಂಗಿಯು, ಸುನ್ನತಿ ಆಕತ ಇಂಜತೇಂಗಿಯು ಅದ್ ನಿಂಗಳ ದೇವಡ ಪಕ್ಕ ಬಲ್ಯಂಗಳಾಯಿತ್ ಕಾಟ್‌ಲೆ. ಅದ್ಂಡ ಬದ್‍ಲ್ ದೇವಡ ಆಜ್ಞೆರನೆಕೆ ಮಾಡ್‌ವದೇ ಮುಕ್ಯ.
ಅಬ್ರಹಾಮಂಗ್ ಕ್‍ಟ್ಟ್‌ನ ಆಶೀರ್ವಾದ, ಯೆಹೂದ್ಯರಲ್ಲತಯಿಂಗಕ್ ಯೇಸು ಕ್ರಿಸ್ತಂಡ ಮೂಲಕ ಬಪ್ಪಕಾಯಿತು, ನಂಬಿಕೇರ ಮೂಲಕ ವಾಗ್ದಾನ ಮಾಡ್‍ನ ಪವಿತ್ರಾತ್ಮ ನಂಗಕ್ ಕ್‍ಟ್ಟ್‌ವಕಾಯಿತೂ ಇನ್ನನೆ ಆಚಿ.
ಯೇಸು ಕ್ರಿಸ್ತಂಡ ಮೇಲೆ ನಿಂಗಕ್ ಉಳ್ಳ ನಂಬಿಕೇರಗುಂಡ್ ಇಕ್ಕ ನಿಂಗ ದೇವಡ ಮಕ್ಕಳಾಯಿತ್ ಉಳ್ಳಿರ.
ನಾನ್ ನಿಂಗಡ ಪಕ್ಕ ಬಪ್ಪಕ ನಾಕ್ ಸೌಕ್ಯ ಇಲ್ಲತೆ ಇಂಜತ್. ನಾನ್ ನಿಂಗಕ್ ದುಂಬ ತೊಂದರೆ ತಂದಿಯೆ, ಆಚೇಂಗಿಯು ನಿಂಗೆಲ್ಲಾರು ನಾನ್ ನಿಂಗಡ ಪಕ್ಕ ಬರಂಡಾಂದ್ ಎಣ್ಣತೆ ಪಿಂಞ ತ್‍ಕ್ಕಾರ ಮಾಡತೆ ದುಂಬ ಕುಶೀಲ್ ನನ್ನ ದೇವದೂತಂಡನೆಕೆ, ಯೇಸು ಕ್ರಿಸ್ತಂಡನೆಕೆ ತಕ್ಕಾರ ಮಾಡಿರ.
ಯೇಸು ಕ್ರಿಸ್ತಂಡ ಕೂಡೆ ಐಕ್ಯತ್‍ಲ್ ಉಂಡ್‍ೕಂದ್ ಎಣ್ಣ್‌ವಯಿಂಗೆಲ್ಲಾ, ಅಯಿಂಗಡ ಪಾಪತ್‍ರ ಗುಣತ್‍ನ, ಅದ್ಂಡ ಆಸೆ ಪಿಂಞ ಇಚ್ಛೆನೆಲ್ಲಾ ಶಿಲುಬೇಲ್ ಇಟ್ಟಿತ್‌ಪ್ಪ.
ನಂಗಡ ನಂಬಿಕೆ ಯೇಸು ಕ್ರಿಸ್ತಂಡ ಮೇಲೆ ಇಂಜತೇಂಗಿ, ಸುನ್ನತಿ ಮಾಡಿತ್ಂಜತೇಂಗಿಯು, ಮಾಡತ ಇಂಜತೇಂಗಿಯು, ಅದ್ ಒಂದು ಲೆಕ್ಕ ಆಪುಲೆ. ಅದ್ಂಡ ಬದ್‍ಲಾಯಿತ್ ನಂಬಿಕೇಲ್, ಪ್ರೀತಿರಗುಂಡ್ ನಂಗ ಮಾಡ್‌ವ ಕಾರ್ಯವೇ ಮುಕ್ಯವಾನದ್.
ದೇವಡ ಚಿತ್ತತ್‍ರನೆಕೆ ಯೇಸು ಕ್ರಿಸ್ತಂಡ ಅಪೊಸ್ತಲನಾನ ಪೌಲ, ಎಫೆಸ ಪಟ್ಟಣತ್‍ಲ್, ಯೇಸು ಕ್ರಿಸ್ತಂಡಲ್ಲಿ ನಂಬಿಕೆ ಇಟ್ಟಿತುಳ್ಳ ದೇವಡ ಮಕ್ಕಕ್ ಒಳ್‍ದ್‍ವ ಕಾಗದ ಇದ್.
ಒರೇ ನಿರೀಕ್ಷೆಕಾಯಿತ್ ದೇವ ನಿಂಗಳ ಕಾಕಿತ್ ಕೂಟ್‍ನನೆಕೆ, ಒರೇ ತಡಿಯು, ಒರೇ ಪವಿತ್ರಾತ್ಮವು ಉಂಡ್.
ಯೇಸು ಕ್ರಿಸ್ತಂಡ ಸೇವಕನಾನ ಪೌಲ ಪಿಂಞ ತಿಮೊಥೆಯ, ಫಿಲಿಪ್ಪಿ ಪಟ್ಟಣತ್‍ಲ್ ಕ್ರಿಸ್ತ ಯೇಸುರ ಕೂಡೆ ಉಳ್ಳ ಐಕ್ಯತ್‍ಲ್ ದೇವಡ ಮಕ್ಕಳಾಯಿತುಳ್ಳ ಎಲ್ಲಾ ಜನಕು, ನಿಂಗಡ ಮೇಲೆ ಜವಾಬ್ದಾರಿಯಾಯಿತುಳ್ಳ ಸಬೆರ ಪೆರಿಯಯಿಂಗಕು ಪಿಂಞ ಅಯಿಂಗಕ್ ಸಹಾಯ ಮಾಡ್‌ವ ಪೆರಿಯಯಿಂಗಕು ಒಳ್‍ದ್‍ವ ಕಾಗದ ಇದ್.
ಎನ್ನಂಗೆಣ್ಣ್‌ಚೇಂಗಿ, ಕ್ರಿಸ್ತ ಯೇಸುರಲ್ಲಿ ನಿಂಗಕ್ ಉಳ್ಳ ನಂಬಿಕೆ ಪಿಂಞ ದೇವಡ ಮಕ್ಕಡ ಮೇಲೆ ಉಳ್ಳ ನಿಂಗಡ ಪ್ರೀತಿನ ನಂಗ ಕ್‍ೕಟತ್.
ಇದ್‍ಲ್ ಯೆಹೂದ್ಯಂಗಲ್ಲತಯಿಂಗಾಂದ್, ಯೆಹೂದ್ಯಂಗಾಂದ್, ಸುನ್ನತಿ ಮಾಡ್‌ನಯಿಂಗಾಂದ್, ಸುನ್ನತಿ ಮಾಡತಯಿಂಗಾಂದ್, ಚಾಯಿ ಇಪ್ಪಕ್ ಗೊತ್ತುಳ್ಳಯಿಂಗಾಂದ್, ಚಾಯಿ ಇಪ್ಪಕ್ ಗೊತ್ತ್‌ಲ್ಲತಯಿಂಗಾಂದ್, ಅಡಿಯಾಳ್‍ೕಂದ್, ಅಡಿಯಾಳ್ ಅಲ್ಲತಯಿಂಗಾಂದ್, ಇದ್‍ನೆಲ್ಲಾ ದೇವ ನೋಟಿಯಂಡ್ ಇಲ್ಲೆ; ಕ್ರಿಸ್ತನೇ ಎಲ್ಲಾಡ ಒಳ್‍ಲ್ ಎಲ್ಲಾವಾಯಿತ್ ಉಂಡ್.
ದೇವಡ ಸೇವೇನ ಮಾಡ್‌ವಕಾಯಿತ್ ನಾಕ್ ಶಕ್ತಿ ತಂದ ಒಡೆಯನಾನ ಯೇಸು ಕ್ರಿಸ್ತಂಗ್ ವಂದನೆ ಎಣ್ಣ್‌ವಿ. ಅಂವೊಂಗ್ ಸೇವೆ ಮಾಡ್‌ವಕ್ ನನ್ನ ಯೋಗ್ಯನಾಯಿತ್ ಗೇನ ಮಾಡಿತ್, ಅದ್ಂಗ್ ನನ್ನ ನೇಮಿಚಿಟ್ಟಾಂಗ್ ವಂದನೆ ಮಾಡ್‌ವಿ.
ಯೇಸು ಕ್ರಿಸ್ತಂಡ ಮೇಲೆ ಉಳ್ಳ ನಂಬಿಕೇರಗುಂಡ್, ವಾಗ್ದಾನ ಮಾಡಿತುಳ್ಳ ಯೇಸು ಕ್ರಿಸ್ತಂಡಲ್ಲಿ ಉಳ್ಳ ಜೀವತ್‍ರ ವಿಷಯತ್‍ನ ಬೋರೆಯಿಂಗಕ್ ಎಣ್ಣ್‌ವಕ್, ಯೇಸು ಕ್ರಿಸ್ತಂಡ ಚಿತ್ತತ್‍ರನೆಕೆ ಅಪೊಸ್ತಲನಾಯಿತುಳ್ಳ ಪೌಲನಾನ ನಾನ್,