18 ನಾನ್ ಪೊಳಿಚಿಟ್ಟ ಪಳೆಯ ಕಾನೂನ್‌ನ ನಾನ್ ಪುನಃ ಕೆಟ್ಟ್‌ಚೇಂಗಿ, ನಾನ್ ಪಂಡಿಂಜೇ ತಪ್ಪ್ ಮಾಡ್‍ನಂವೋಂದ್ ಗೊತ್ತಾಪ.
ನೀನ್ ಉಂಬ ಆಹಾರತ್ಂಜ ನೀಡ ಅಣ್ಣತಮ್ಮಣಂಗಕ್ ನೊಂಬಲ ಆಪದಾಚೇಂಗಿ, ನೀನ್ ಪ್ರೀತಿಲ್ ನಡ್ಂದಂಡಿಲ್ಲೆ; ಅಂವೊನ ನೀಡ ಆಹಾರತ್‍ರಗುಂಡ್ ಪಾಳ್ ಮಾಡತೆ. ಕ್ರಿಸ್ತ ಅಂವೊಂಗಾಯಿತ್ ಸಹ ಜೀವ ಕೊಡ್‍ತಿತುಂಡಲ್ಲ?
ನಿಂಗ ನ್ಯಾಯಪ್ರಮಾಣ ಎಣ್ಣುವನೆಕೆ ನಡ್ಂದತೇಂಗಿ, ಸುನ್ನತಿ ಮಾಡ್‍ನದ್ ಪ್ರಯೋಜನವಾಪ. ನಿಂಗ ನ್ಯಾಯಪ್ರಮಾಣತ್‍ನ ಮೀರಿತ್ ನಡ್ಂದತೇಂಗಿ, ನಿಂಗಕ್ ಮಾಡ್‍ನ ಸುನ್ನತಿ, ಮಾಡತನೆಕೆ ಆಯಿಪೋಪ.
ನಂಗಡ ಅನೀತಿ ದೇವಡ ನೀತಿನ ಕಾಟ್‍ಚೇಂಗಿ, ನಂಗ ಎಂತ ಎಣ್ಣುವಕ್ ಕಯ್ಯು? ಶಿಕ್ಷೆ ತಪ್ಪ ದೇವ ಅನೀತಿವಂತಂವೊನ? (ನಾನ್ ಇದ್‍ನ, ಮನುಷ್ಯ ರೀತಿಲ್ ತಕ್ಕ್ ಪರ್ಂದಂಡುಳ್ಳ).
ನಾನ್ ದೇವಡ ಕೃಪೇನ ಮುಂಡತೆ ಪಾಳ್ ಮಾಡಿಯಂಡಿಪಂವೊ ಅಲ್ಲ; ಎನ್ನಂಗೆಣ್ಣ್‌ಚೇಂಗಿ, ಯೆಹೂದ್ಯಂಗಡ ನ್ಯಾಯಪ್ರಮಾಣತ್‍ರ ಪ್ರಕಾರ ನಡ್‍ಪದಿಂಜ ನಂಗ ನೀತಿವಂತಯಿಂಗಳಾಪದಾಚೇಂಗಿ, ಕ್ರಿಸ್ತ ಚತ್ತಾಂಗ್ ಅರ್ಥ ಇಲ್ಲೆ.
ನಾಡ ಅಣ್ಣತಮ್ಮಣಂಗಳೇ, ಸುನ್ನತಿ ಮಾಡಂಡೂಂದ್ ನಾನ್ ಇಂಞು ಬೋದನೆ ಮಾಡಿಯಂಡಿಂಜತೇಂಗಿ ಎನ್ನಂಗಾಯಿತ್ ನಾಕ್ ಇಕ್ಕಲು ತೊಂದರೆ ಬಂದಂಡುಂಡ್? ಅನ್ನನೆ ಆಚೇಂಗಿ, ಕ್ರಿಸ್ತಂಡ ಶಿಲುಬೇರ ವಿಷಯತ್ಂಜ ಬಪ್ಪ ನಿಂದನೆ ಇಲ್ಲತೆ ಪೋಯಿತ್‌ಪ್ಪ್‌ಲೆಯಾ?