10 ಆಕೀರ್‌ಲ್ ನಾನ್ ನಿಂಗಕ್ ಎಣ್ಣ್‌ವದ್ ಎಂತ ಎಣ್ಣ್‌ಚೇಂಗಿ: ಒಡೆಯಂಡಲ್ಲಿ ಪಿಂಞ ಅಂವೊಂಡ ಬಲ್ಯ ಶಕ್ತಿಲ್ ಬಲಪಡಿ.
ನಿಂಗ ಎಕ್ಕಾಲು ಎಚ್ಚರತ್‍ಲ್ ಇರಿ. ದೇವಡ ಮೇಲೆ ಉಳ್ಳ ನಂಬಿಕೇಲ್ ನಿಂಗ ದೃಡವಾಯಿತ್ ಇರಿ, ನಿಂಗ ದೈರ್ಯತ್‍ಲ್ ಪಿಂಞ ಬಲವುಳ್ಳಯಿಂಗಳಾಯಿತ್ ಇರಿ.
ಆಕೀರ್‌ಲ್, ನಾಡ ಅಣ್ಣತಮ್ಮಣಂಗಳೇ, ನಿಂಗ ಕುಶೀಲ್ ಇರಿ, ಪೂರ್ತಿಯಾಯಿತ್ ಇರಿ, ಒಬ್ಬಂಗ್ ಒಬ್ಬ ಪುರ್‌ಡ್ ಕೊಡಿ, ಒರೇ ಮನಸ್ಸ್ ಉಳ್ಳಯಿಂಗಳಾಯಿತಿರಿ, ಸಮಾದಾನತ್‍ಲ್ ಇರಿ, ಅಕ್ಕ ಪ್ರೀತಿರ ಪಿಂಞ ಸಮಾದಾನತ್‍ರ ದೇವ ನಿಂಗಡ ಕೂಡೆ ಇಪ್ಪ.
ಅಂವೊ ಕ್ರಿಸ್ತನ ಚತ್ತಯಿಂಗಡ ಮದ್ಯತ್ಂಜ ಜೀವವಾಯಿತ್ ಎಪ್ಪಿತ್, ಅಂವೊಂಡಲ್ಲಿ ಮಾಡ್‍ನ ಅಂವೊಂಡ ಬಲ್ಯ ಶಕ್ತಿರ ಬಲತ್‍ರನೆಕೆ, ಅಂವೊಂಡ ಮೇಲೆ ನಂಬಿಕೆ ಇಟ್ಟಿತುಳ್ಳ ನಂಗಡಲ್ಲಿ ಮಾಡಿಯಂಡುಳ್ಳ ಅಂವೊಂಡ ಬಲ್ಯ ಗನತ್‍ರ ಮಹತ್ವ ಎಂತದ್‍ೕಂದ್ ಗೊತ್ತಾಪಕು ಅಂವೊ ನಿಂಗಕ್ ಬಲ್ಯ ಬೊಳಿರ ಆತ್ಮೀಯ ಕಣ್ಣ್‌ನ ತರಂಡೂಂದ್ ಪ್ರಾರ್ಥನೆ ಮಾಡಿಯಂಡುಂಡ್.
ನಿಂಗ ಅಂವೊಂಡ ಪವಿತ್ರಾತ್ಮತ್‍ರ ಶಕ್ತಿರ ಮೂಲಕ ನಿಂಗಡ ಒಳ್‍ಲ್ ಉಳ್ಳ ಮನುಷ್ಯಂಡಲ್ಲಿ ಅಂವೊಂಡ ಮಹಿಮೇರ ಐಶ್ವರ್ಯತ್‍ರಗುಂಡ್ ನಿಂಗ ಬಲಪಡಂಡೂಂದು,
ನಾಡ ಅಣ್ಣತಮ್ಮಣಂಗಳೇ, ಆಕೀರ್‌ಕ್ ನಿಂಗಡ ಪಕ್ಕ ನಾನ್ ಎಣ್ಣ್‌ವದ್ ಎಂತ ಎಣ್ಣ್‌ಚೇಂಗಿ, ನಿಂಗ ಕ್ರಿಸ್ತಂಗ್ ಸ್ವಂತವಾನಗುಂಡ್ ಕುಶಿ ಪಡಿರಿ. ಪುನಃ ಪುನಃ ನಾನ್ ಇನ್ನನೆ ಒಳ್‍ದ್‍ವಕ್ ನಾಕ್ ಕಷ್ಟ ಆಪುಲೆ. ಇದ್‍ನ ಒಳ್‍ದ್‍ವದ್ ನಿಂಗಕ್ ನಲ್ಲದ್‍ೕಂದ್ ಗೇನ ಮಾಡಿಯೊಳಿ.
ನಾಕ್ ಶಕ್ತಿ ತಪ್ಪ ಕ್ರಿಸ್ತನಗುಂಡ್ ನಾಕ್ ಎಲ್ಲಾನ ಮಾಡ್‌ವಕಯ್ಯು.
ಆಕೀರ್‌ಕ್, ನಾಡ ಅಣ್ಣತಮ್ಮಣಂಗಳೇ, ಏದೆಲ್ಲಾ ಸತ್ಯವೊ, ಏದೆಲ್ಲಾ ಯೋಗ್ಯವೊ, ಏದೆಲ್ಲಾ ನೀತಿಯುಳ್ಳದೋ, ಏದೆಲ್ಲಾ ಶುದ್ದವಾನದೋ, ಏದೆಲ್ಲಾ ನಲ್ಲದೋ, ಏದೆಲ್ಲಾ ಬಾರಿ ಚಾಯಿ ಉಂಡೋ, ಎದಂಗೆಲ್ಲಾ ನಲ್ಲ ಪೆದ ಉಂಡೋ, ಏದೆಲ್ಲಾ ಹೊಗಳುವನಕೆ ಉಂಡೋ ಅಂತ ವಿಷಯತ್‍ನ ನಿಂಗ ಎಕ್ಕಾಲು ಗೇನ ಮಾಡಿಯಂಡಿರಿ.
ನಿಂಗಕ್ ಬಪ್ಪ ಎಲ್ಲಾನ ಕುಶೀಲ್ ಸಹಿಸುವಕಾಯಿತ್ ನಿಂಗಕ್ ಬೋಂಡಿಯಾನ ಪೊರುಮೆ ಕ್‍ಟ್ಟ್‌ವಕಾಯಿತ್, ಅಂವೊಂಡ ಮಹಿಮೇರೆ ಶಕ್ತಿರನೆಕೆ, ಅಂವೊಂಡ ಎಲ್ಲಾ ಶಕ್ತಿಲ್ ನಿಂಗ ಬಲಪಡಂಡೂಂದು ಸಹ ನಂಗ ಪ್ರಾರ್ಥನೆ ಮಾಡಿಯಂಡುಂಡ್.
ಆನಗುಂಡ್ ನಾಡ ಮೋನೇ, ನೀನ್ ಯೇಸು ಕ್ರಿಸ್ತಂಡ ಕೃಪೇಲ್ ಬಲಪಡ್.
ಆಚೇಂಗಿ ಒಡೆಯ ನಾಡ ಕೂಡೆ ನಿಂದಿತ್ ನನ್ನ ಬಲಪಡ್‍ತಿತ್, ನಾಡ ಮೂಲಕ ನಲ್ಲ ಸುದ್ದಿನ ಪೂರ್ತಿಯಾಯಿತ್ ಪ್ರಚಾರ ಮಾಡ್‌ವಕ್, ಯೆಹೂದ್ಯಂಗಲ್ಲತ ಜನ ಅದ್‍ನ ಕ್‍ೕಪನೆಕೆ ಮಾಡ್‍ಚಿ. ಇದ್ ಅಲ್ಲತೆ ಸಿಂಹತ್‍ರ ಬಾಯಿಯಿಂಜ ನನ್ನ ಬುಡ್‍ಗಡೆ ಮಾಡ್‍ಚಿ.
ಕಡೇಕ್ ನಾನ್ ಎಣ್ಣುವದ್ ಎಂತ ಎಣ್ಣ್‌ಚೇಂಗಿ: ನಿಂಗ ಎಲ್ಲಾರು ಒಬ್ಬ ಒಬ್ಬಂಡ ಕೂಡೆ ಐಕ್ಯತ್‍ಲ್ ಬದ್‍ಕಂಡು; ದಯೆ ಉಳ್ಳಯಿಂಗಳಾಯಿತ್, ಯೇಸುನ ನಂಬ್‍ನಯಿಂಗಡ ಪ್ರೀತಿ ಉಳ್ಳಯಿಂಗಳಾಯಿತ್, ಕನಿಕರ ಉಳ್ಳಯಿಂಗಳಾಯಿತ್, ಪೊರುಮೆ ಉಳ್ಳಯಿಂಗಳಾಯಿತ್ ಇಕ್ಕಂಡು.
ಒಬ್ಬ ಬೋದನೆ ಮಾಡ್‌ವದಾಚೇಂಗಿ, ಅಂವೊ ಚಾಯಿತೆ ದೇವಡ ವಾಕ್ಯತ್‍ರ ಪ್ರಕಾರ ಬೋದನೆ ಮಾಡಂಡು. ಒಬ್ಬ ಸೇವೆ ಮಾಡ್‌ವದಾಚೇಂಗಿ ದೇವ ಅಂವೊಂಗ್ ಕೊಡ್‍ತಿತುಳ್ಳ ಶಕ್ತಿರನೆಕೆ ಮಾಡಂಡು, ಅಕ್ಕ ನಿಂಗ ಎಂತ ಮಾಡ್‍ಚೇಂಗಿಯು, ಯೇಸು ಕ್ರಿಸ್ತಂಡ ಮೂಲಕ ದೇವಕ್ ಮಹಿಮೆ ಕ್‍ಟ್ಟುವನೆಕೆ ಮಾಡ್‌ವಕಾಪ. ಅಂವೊಂಗ್ ಎಕ್ಕಾಲು ಮಹಿಮೆ, ಶಕ್ತಿ ಬರಡ್. ಆಮೆನ್.
ಯೇಸು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್‍ಲ್ ನಂಗಳ ತಾಂಡ ನಿತ್ಯ ಮಹಿಮೇಕ್ ಕಾಕ್‍ನ ಕೃಪೆ ದುಂಬ್‍ನ ದೇವ, ಚೆನ್ನ ಕಾಲ ಕಷ್ಟ ಅನುಬವಿಚಿಡುವ ನಿಂಗಳ ಚಾಯಿ ಮಾಡಿತ್, ಬಲಪಡ್‍ತಿತ್, ಸ್ತಿರಪಡ್‌ತಿತ್, ನಿಪ್ಪ್‌ಚಿಡಡ್.
ಅಪ್ಪಂಗಳೇ, ಆದಿಯಿಂಜಲೆ ಯೇಸು ಕ್ರಿಸ್ತನ ನಿಂಗಕ್ ಗೊತ್ತಾನಗುಂಡ್ ನಾನ್ ಇದ್‍ನ ನಿಂಗಕ್ ಒಳ್‍ದಿಯೆ. ಬಾಲೆಕಾರಂಗಳೇ ನಿಂಗ ಬಲಶಾಲಿಯಾಯಿತ್ ಉಳ್ಳಿರ, ದೇವಡ ವಾಕ್ಯ ನಿಂಗಡಲ್ಲಿ ಉಳ್ಳಗುಂಡ್ ಪಿಂಞ ನಿಂಗ ಸೈತಾನನ ಗೆದ್ದಗುಂಡ್ ನಾನ್ ಇದ್‍ನ ನಿಂಗಕ್ ಒಳ್‍ದಿಯೆ.