7 ಪ್ರೀತಿರ ತಮ್ಮಣ ತುಖಿಕ, ನಿಂಗಕ್ ನಾಡ ವಿಷಯತ್‌ನೆಲ್ಲ ಎಣ್ಣಿ ತಪ್ಪ. ಅಂವೊ ನಂಬಿಕಸ್ತನಾನ ಸೇವಕನು, ನಂಗಡ ಕೂಡೆ ಒಡೆಯಂಡ ಸೇವೆ ಮಾಡ್‍ವಂವೊನಾಯಿತು ಉಂಡ್.
ಪೌಲಂಡ ಕೂಡೆ, ಬೆರೋಯ ಪಟ್ಟಣತ್‍ರ ಪಿರಸಂಡ ಮೋಂವೊನಾನ ಸೋಪತ್ರ ಎಣ್ಣ್‌ವಂವೊನು, ಥೆಸಲೊನೀಕ ಪಟ್ಟಣತ್‍ರ ಅರಿಸ್ತಾರ್ಕ ಪಿಂಞ ಸೆಕುಂದ ಎಣ್ಣುವಯಿಂಗಳು, ದೆರ್ಬೆ ಪಟ್ಟಣತ್‍ರ ಗಾಯನ ಪಿಂಞ ತಿಮೊಥೆಯ ಎಣ್ಣುವಯಿಂಗಳು, ಆಸ್ಯ ಸೀಮೆರ ತುಖಿಕನ ಪಿಂಞ ತ್ರೊಫಿಮ ಎಣ್ಣುವಯಿಂಗಳು ಆಸ್ಯ ಸೀಮೆಕತ್ತನೆ ಪೋಚಿ.
ನಾಡ ತಮ್ಮಣನು, ನಾಡ ಕೂಡೆ ಸೇವೆ ಮಾಡ್‌ವಂವೊನು, ಒರ್ ಪಟ್ಟಾಳಕಾರನೆಕೆ ನಾಡ ಕೂಡೆ ನಿಪ್ಪಂವೊನು, ನಾಕ್ ಸಹಾಯ ಮಾಡ್‌ವಕ್ ನಿಂಗ ಅಯಿಚಂವೊನು ಆಯಿತುಳ್ಳ ಎಪಫ್ರೊದೀತನ ನಿಂಗಡ ಪಕ್ಕ ಪುನಃ ಅಯಿಕಂಡೂಂದ್ ಗೇನ ಮಾಡ್‍ನ.
ಅದ್‍ನ ನಿಂಗ ನಂಗಡ ಕೂಡೆ ಸೇವೆ ಮಾಡ್‌ವ ಪ್ರೀತಿರ ಎಪಫ್ರಯಿಂಜ ಪಡಿಚಿರ. ಅಂವೊ ನಿಂಗಕಾಯಿತ್ ಕ್ರಿಸ್ತಂಡಲ್ಲಿ ನೇರಾನ ಸೇವಕನಾಯಿತುಂಡ್.
ಕ್ರಿಸ್ತ ಯೇಸುರ ಸೇವಕನು, ನಿಂಗಡ ಪಟ್ಟಣಕ್ ಕೂಡ್‍ನಂವೊನಾನ ಎಪಫ್ರ ಸಹ ನಿಂಗಕ್ ವಂದನೆ ಎಣ್ಣಿಯಂಡುಂಡ್. ಅಂವೊ ನಿಂಗಕಾಯಿತ್ ಎಕ್ಕಾಲು ದೇವಡ ಪಕ್ಕ ನೇರಾಯಿತು ಪ್ರಾರ್ಥನೆ ಮಾಡಿಯಂಡುಂಡ್. ದೇವ ನಿಂಗಳ ಬಲ ಉಳ್ಳಯಿಂಗಳಾಯಿತ್ ಮಾಡಂಡೂಂದು, ನಿಂಗ ಏದ್ ತಪ್ಪಿಲ್ಲತಯಿಂಗಳಾಯಿತು, ನಿಂಗಕ್ ದೇವಡ ಚಿತ್ತ ಪೂರ್ತಿ ಗೊತ್ತಾಂಡೂಂದೂ ಅಂವೊ ಪ್ರಾರ್ಥನೆ ಮಾಡಿಯಂಡುಂಡ್.
ನಿಂಗಡಲ್ಲಿ ಒಬ್ಬನಾಯಿತು, ನಂಬಿಕಸ್ತನಾಯಿತು ಉಳ್ಳ ಪ್ರೀತಿರ ತಮ್ಮಣನಾನ ಒನೇಸಿಮನ ಸಹ ನಿಂಗಡ ಪಕ್ಕ ಅಯಿಚಂಡುಳ್ಳ. ಅಯಿಂಗ ಇಲ್ಲಿ ನಡ್ಂದಂಡುಳ್ಳಾನೆಲ್ಲ ನಿಂಗಕ್ ಎಣ್ಣುವ.
ನಾನ್ ತುಖಿಕನ ಎಫೆಸಕ್ ಅಯಿಚಿಯೆ.
ನಾನ್ ನೀಡ ಪಕ್ಕ ಅರ್ತೆಮನ ಎಣ್ಣ್‌ವಂವೊನ ಪಿಂಞ ತುಖಿಕ ಎಣ್ಣ್‌ವಂವೊನ ಅಯಿಪಕ, ನೀನ್ ನಿಕೊಪೊಲಿ ಎಣ್ಣುವ ಪಟ್ಟಣಕ್ ನಾಡ ಪಕ್ಕ ಬಪ್ಪಕ್ ಪ್ರಯತ್ನಪಡ್; ಎನ್ನಂಗೆಣ್ಣ್‌ಚೇಂಗಿ, ಕುಳ್‌ರ್ ಕಾಲತ್‍ಲ್ ನಾನ್ ಅಲ್ಲಿ ಇಪ್ಪಕ್ ಗೇನ ಮಾಡಿಯೆ.