14 ಪಿಂಞ ಇಲ್ಲಿಯು ನೀಡ ಪೆದತ್‍ಲ್ ಆರಾದನೆ ಮಾಡ್‌ವಯಿಂಗಳ ಬಂದನೆ ಮಾಡ್‌ವ ಅದಿಕಾರತ್‍ನ ಮುಕ್ಯ ಯಾಜಕಯಿಂಜ ಪಡ್ಂದಿತುಂಡ್.
ಆಚೇಂಗಿ ನನ್ನ ದಾರ್ ಅಯಿಚತೋ ಅಂವೊನ ಗೊತ್ತಿಲ್ಲತಗುಂಡ್, ನಾಡಗುಂಡ್ ನಿಂಗಕ್ ಇನ್ನನೆ ಮಾಡ್‌ವ.
ಇಕ್ಕ ಎನ್ನಂಗ್ ನೀನ್ ತಡೆ ಮಾಡ್‌ವಿಯ? ಅಂವೊಂಡ ಪೆದತ್‍ನ ನೀನ್ ಕಾಕಿಯಂಡಿಪ್ಪಕಲೇ, ಎದ್ದಿತ್ ದೀಕ್ಷಾಸ್ನಾನ ಮಾಡ್‍ಚಿಟ್ಟಂಡ್, ನೀಡ ಪಾಪತ್‍ನ ಕತ್ತ್‍ೕಂದ್ ಎಣ್ಣ್‌ಚಿ.
ಅಯಿಂಗ ಸ್ತೆಫನಂಡ ಮೇಲೆ ಕಲ್ಲ್ ಕನ್‍ಚಂಡಿಪ್ಪಕ, ಅಂವೊ: ಒಡೆಯನಾನ ಯೇಸು ಕ್ರಿಸ್ತನೇ, ನಾಡ ಆತ್ಮತ್‌ನ ಸ್ವೀಕಾರ ಮಾಡ್‍ೕಂದ್ ಪ್ರಾರ್ಥನೆ ಮಾಡ್‍ಚಿ.
ಕ್‍ೕಟಯಿಂಗ ಎಲ್ಲಾರು ಆಶ್ಚರ್ಯಪಟ್ಟಿತ್: ಯೆರೂಸಲೇಮ್‍ಲ್ ಈ ಪೆದತ್‍ನ ಎಣ್ಣ್‌ವಯಿಂಗಳ ಪಾಳ್ ಮಾಡಿತ್, ಇಲ್ಲಿಯು ಅನ್ನನೆ ಉಳ್ಳ ಜನಳ ಬಂದಿಚಿಟ್ಟಿತ್, ಮುಕ್ಯ ಯಾಜಕಂಗಡ ಪಕ್ಕ ಕಾಕಿಯಂಡ್ ಪೋಪಕಾಯಿತ್ ಬಂದಂವೊ ಇಂವೊ ತಾನೇಂದ್ ಕ್‍ೕಟತ್.
ಕೊರಿಂಥ ಪಟ್ಟಣತ್‍ಲ್ ಉಳ್ಳ ಸಬೇಲ್ ಯೇಸು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್‍ಲ್ ಮಿಂಞಲೇ ದೇವಡ ಮಕ್ಕಳಾಯಿತ್ ಆನಯಿಂಗಕ್ ಪಿಂಞ ಅಯಿಂಗಕು ನಂಗಕು ಒಡೆಯನಾನ ಯೇಸು ಕ್ರಿಸ್ತಂಡ ಪೆದತ್‍ಲ್, ಎಲ್ಲಾ ಜಾಗತ್‍ಲ್ ಆರಾದನೆ ಮಾಡ್‌ವ ಜನತ್‍ರಕೂಡೆ, ಪವಿತ್ರವಾಯಿತ್ ಇಪ್ಪಕ್ ಕಾಕ್‍ಚಿಟ್ಟ ನಿಂಗಕ್, ಒಳ್‍ದ್‍ವ ಕಾಗದ ಇದ್.
ಬಾಲ್ಯ ವಯಸ್ಸ್‌ಲ್ ಬಪ್ಪ ಇಚ್ಛೆಯಿಂಜ ನೀ ಓಡಿ ಪೋ. ನೀತಿ, ನಂಬಿಕೆ, ಪ್ರೀತಿ, ಸಮಾದಾನತ್‍ನ ಪಡೆಯುವಕ್ ಶುದ್ದ ಹೃದಯತ್ಂಜ ಒಡೆಯನ ಆರಾದನೆ ಮಾಡ್‌ವಯಿಂಗಡ ಕೂಡೆ ಅದ್‍ನ ಪಡೆಯುವಕ್ ಪೇಚಾಡ್.