30 ಅದ್‍ನೆಲ್ಲ ಪೌಲ ಎಣ್ಣ್‌ನ ಪಿಂಞ ಅಗ್ರಿಪ್ಪ ರಾಜನು, ದೇಶತ್‍ರ ಅದಿಪತಿಯು, ಬೆರ್ನಿಕೆಳು, ಅಯಿಂಗಡ ಕೂಡೆ ಅಳ್‍ತಂಡಿಂಜಯಿಂಗಳು ಎದ್ದಿತ್,
ಆಚೇಂಗಿ ನಿಂಗ ಕುತ್ತ ಪರಿಯುವ ವಿಷಯ, ಬೋದನೆರ ವಿಷಯವಾಯಿತು, ಪೆದತ್‍ರ ವಿಷಯವಾಯಿತು ಪಿಂಞ ನಿಂಗಡ ಸ್ವಂತ ನ್ಯಾಯಪ್ರಮಾಣತ್‍ರ ವಿಷಯವಾಯಿತುಳ್ಳಗುಂಡ್, ಇದ್‍ನ ವಿಚಾರಣೆ ಮಾಡ್‌ವಕ್ ನಾಕ್ ಕುಶಿ ಇಲ್ಲೆ, ನಿಂಗಳೇ ಸರಿ ಮಾಡಿಯೊಳೀಂದ್ ಎಣ್ಣ್‌ಚಿ.
ಪಿತ್ಯಾಂದ್ ಅಗ್ರಿಪ್ಪ ರಾಜನು ಬೆರ್ನಿಕೆ ರಾಣಿಯು ರಾಜ್ಯತ್‍ರ ಬಲ್ಯ ಆಡಂಬರತ್‌ಲ್, ಸೇನೆರ ಅದಿಪತಿಯಂಗ ಪಿಂಞ ಪಟ್ಟಣತ್‍ರ ಮುಕ್ಯಪಟ್ಟಯಿಂಗಡ ಕೂಡೆ ವಿಚಾರಣೆ ಸ್ತಳಕ್ ಬಾತ್. ಅಕ್ಕ ಫೆಸ್ತ ಹುಕುಮ್ ಕೊಡ್‌ಪಕ, ಪೌಲನ ಅಲ್ಲಿಕ್ ಕಾಕಿಯಂಡ್ ಬಾತ್.
ಅಲ್ಲಿಯಿಂಜ ಪೋಯಂಡಿಪ್ಪಕ, ಈ ಮನುಷ್ಯ ಮರಣ ಶಿಕ್ಷೆಕಾಡ್, ಜೈಲ್‍ಲ್ ಇಡ್‍ವಕಾಡ್ ತಕ್ಕಂತ ಒರ್ ಕುತ್ತವು ಮಾಡಿತ್‌ಲ್ಲೇಂದ್ ಅಯಿಂಗಯಿಂಗಳೇ ತಕ್ಕ್ ಪರ್ಂದತ್.
ಆಚೇಂಗಿ ಎಲ್ಲಾ ಜಾಗತ್‍ಲು, ಈ ಮಾರ್ಗತ್‍ರ ವಿಷಯಕ್ ವಿರೋದವಾಯಿತ್ ತಕ್ಕ್ ಪರ್ಂದಂಡುಂಡ್. ಆಚೇಂಗಿ, ಇದ್‍ಲ್ ನೀಡ ಅಬಿಪ್ರಾಯತ್‍ನ ಕ್‍ೕಪದ್ ನಂಗಕ್ ನಲ್ಲದ್‍ೕಂದ್ ಎಣ್ಣ್‌ಚಿ.