12 ದೇವಾಲಯತ್‍ಲ್ ನಾನ್ ಒಬ್ಬಂಡ ಕೂಡೆಯಾಚೇಂಗಿಯು ವಾದ ಮಾಡ್‍ನದಾಡ್, ಸಬಾಮಂದಿರತ್‍ಲ್ ಪಿಂಞ ಪಟ್ಟಣತ್‍ರ ಏದ್ ಜಾಗತ್‌ಲು ನಾನ್ ಜನಳ ಗುಂಪು ಕೂಟಿತ್ ಕಲಹ ಮಾಡ್‍ನದಾಡ್ ಈಂಗ ಕಂಡಿತ್‌ಲ್ಲೆ.
ಪಿಂಞ ಅಯಿಂಗ ಕುಂದ್‌ರ ಅಡಿಕ್ ಬಪ್ಪಕ ಬಾಕಿ ಶಿಷ್ಯಂಗಡ ಕೂಡೆ ದುಂಬ ಜನ ಕೂಡಿತ್ಂಜತ್. ಚೆನ್ನ ನ್ಯಾಯಪ್ರಮಾಣತ್‍ರ ಉಪಾದ್ಯಂಗ ಅಯಿಂಗಡ ಪಕ್ಕ ತರ್ಕ ಮಾಡ್‌ವಾನ ಕಂಡತ್.
ನನ್ನ ಎನ್ನಂಗ್ ನಿಂಗ ಪ್ರಶ್ನೆ ಕ್‍ೕಟಂಡ್ ಉಳ್ಳಿರಾ? ಜನಳ ಕ್‍ೕಳಿ ನಾನ್ ಎಂತ ಅಯಿಂಗಕ್ ಬೋದನೆ ಮಾಡಿಯೇಂದು, ನಾನ್ ಎಂತ ಎಣ್ಣಿಯೇಂದು ಅಯಿಂಗಕ್ ಗೊತ್ತುಂಡ್‍ೕಂದ್ ಯೇಸು ಅಂವೊಂಗ್ ಎಣ್ಣ್‌ಚಿ.
ದೇವಾಲಯತ್‍ಲ್ ಜನಡ ಗುಂಪ್ ಪಿಂಞ ಗಲಾಟೆರ ಗುಂಪ್ ಏದು ನಾಡ ಕೂಡೆ ಇಲ್ಲತಿಪ್ಪಕ, ನಾನ್ ದೇವಾಲಯತ್‍ಲ್ ಶುದ್ದ ಮಾಡ್‌ವ ಆಚಾರತ್‍ನ ಪೂರ್ತಿ ಮಾಡಿಯಂಡಿಂಜ, ಅಕ್ಕ ಆಸ್ಯ ದೇಶತ್ಂಜ ಬಂದ ಚೆನ್ನ ಯೆಹೂದ್ಯಂಗ ನನ್ನ ಕಂಡತ್.
ಅದ್ ಎಂತ ಎಣ್ಣ್‌ಚೇಂಗಿ: ಈ ಮನುಷ್ಯ ಲೋಕತ್‍ರ ಎಲ್ಲಾ ಜಾಗತ್‍ಲ್ ವಾಸ ಉಳ್ಳ ಯೆಹೂದ್ಯಂಗಡ ಮದ್ಯತ್‍ಲ್ ಕಲಹ ಮಾಡ್‍ವಂವೊನಾಯಿತು, ಜಗಳ ಆಪಕ್ ಕಾರಣವಾಯಿತು ಉಂಡ್. ಇದ್‍ಲ್ಲತೆ ನಜರೇತ್‍ರ ಮಾರ್ಗಕ್ ತಲೆಯೆನಾಯಿತು ಉಂಡ್‍ೕಂದ್ ನಂಗಕ್ ಗೊತ್ತಾಚಿ.
ಪೌಲ ಅಯಿಂಗಕ್: ಯೆಹೂದ್ಯಂಗಡ ನ್ಯಾಯಪ್ರಮಾಣಕ್ ಆಡ್, ದೇವಾಲಯತ್‍ರ ವಿಷಯತ್‍ಲಾಡ್, ಕೈಸರಂಡ ವಿಷಯತ್‍ಲಾಡ್ ನಾನ್ ಏದ್ ತಪ್ಪು ಮಾಡಿತ್‌ಲ್ಲೇಂದ್ ಅಂವೊಂಗಾಯಿತ್ ವಾದ ಮಾಡ್‍ಚಿ.
ಮೂಂದ್ ದಿವಸ ಕಯಿಂಜ ಪಿಂಞ, ಪೌಲ ಯೆಹೂದ್ಯ ಜನಡಡೆಲ್ ಮುಕ್ಯಪಟ್ಟಯಿಂಗಳ ತಾಂಡ ಪಕ್ಕ ಕಾಕ್‌ಚಿಟ್ಟತ್. ಅಯಿಂಗೆಲ್ಲಾರು ಸಬೇಕೂಡ್‌ನ ಪಿಂಞ, ಅಂವೊ ಅಯಿಂಗಳ ನೋಟಿತ್: ನಾಡ ಅಣ್ಣತಮ್ಮಣಂಗಳೇ, ನಾನ್ ನಂಗಡ ಜನಕ್, ನಂಗಡ ಅಜ್ಜಂಗಡ ಆಚಾರಕ್ ವಿರೋದವಾಯಿತ್ ಒಂದು ಮಾಡತೆ ಪೋಚೇಂಗಿಯು, ಯೆರೂಸಲೇಮ್‍ಲ್ ರೋಮ್ ರಾಜ್ಯತ್‍ರ ಜನಡ ಕೈಕ್ ಕೈದಿಯಾಯಿತ್ ನನ್ನ ಒಪ್ಪ್‌ಚಿಟ್ಟತ್.