37 ನಿಂಗ ಕಾಕಿಯಂಡ್ ಬಂದ ಈ ಮನುಷ್ಯಂಗ ದೇವಸ್ತಾನತ್‍ರ ಕಳ್ಳಂಗಳು ಅಲ್ಲ, ನಂಗಡ ದೇವಿನ ದೂಷಣೆ ಮಾಡ್‌ವಯಿಂಗಳು ಅಲ್ಲ.
ಆನಗುಂಡ್, ಈ ಸಂಗತಿ ಅಲ್ಲಾಂದ್ ಎಣ್ಣುವಕ್ ದಾರ್‌ಕು ಆಕತಗುಂಡ್ ನಿಂಗ ಶಾಂತಿಯಾಯಿತಿರಂಡು, ಮುಂಡತೆ ಬೆರಿಯ ದುಡ್‍ಕಿತ್ ಒಂದು ಮಾಡ್‌ವಕ್ಕಾಗ.
ಪೌಲ ಅಯಿಂಗಕ್: ಯೆಹೂದ್ಯಂಗಡ ನ್ಯಾಯಪ್ರಮಾಣಕ್ ಆಡ್, ದೇವಾಲಯತ್‍ರ ವಿಷಯತ್‍ಲಾಡ್, ಕೈಸರಂಡ ವಿಷಯತ್‍ಲಾಡ್ ನಾನ್ ಏದ್ ತಪ್ಪು ಮಾಡಿತ್‌ಲ್ಲೇಂದ್ ಅಂವೊಂಗಾಯಿತ್ ವಾದ ಮಾಡ್‍ಚಿ.
ವ್ಯಬಿಚಾರ ಮಾಡ್‌ವಕ್ಕಾಗಾಂದ್ ಎಣ್ಣುವ ನಿಂಗಳೇ ವ್ಯಬಿಚಾರ ಮಾಡಲುವ? ವಿಗ್ರಹತ್‍ನ ವಿರೋದಿಚಿಡುವ ನಿಂಗ, ಆರಾದನೆ ಮಾಡ್‌ವ ಜಾಗತ್‍ನ ಲೂಟಿ ಮಾಡಲುವ?
ನಾನ್ ನಾಕ್ ಪ್ರಯೋಜನ ಉಳ್ಳದ್‍ನ ಮಾಡತೆ, ಎಲ್ಲಾಡ ಪ್ರಯೋಜನತ್‍ನ ತ್‍ೕಡಿತ್, ಎನ್ನನೆ ಆಚೇಂಗಿಯು ದುಂಬ ಜನತ್‍ನ ಕುಶಿಪಡುತ್‌ವಕಾಯಿತ್ ನಾನ್ ಮಾಡ್‌ವನೆಕೆ,
ಈ ಸೇವೇನ ದಾರೂ ಕುತ್ತ ಪರಿಯತನೆಕೆ, ನಂಗಡಗುಂಡ್ ಒಬ್ಬನು ಬೂವತನೆಕೆ ಎಲ್ಲಾ ವಿಷಯತ್‍ಲು ದೇವಡ ಸೇವಕಂಗಳಾಯಿತ್ ಬದ್‍ಕಿಯಂಡುಂಡ್.