17 ನಿಂಗಡ ಹೃದಯಕ್ ಒತ್ತಾಸೆ ಮಾಡಿತ್, ಎಲ್ಲಾ ನಲ್ಲ ಕೆಲಸ ಮಾಡ್‌ವಕ್ ಪಿಂಞ ನಲ್ಲ ತಕ್ಕ್ ಪರಿಯುವಕ್ ಬಲಪಡ್‍ತಡ್.
ನಿಂಗಕ್ ಆತ್ಮೀಯ ವರತ್‍ನ ಪಾಲ್ ಮಾಡಿತ್, ನಿಂಗಳ ದೇವಡ ವಿಷಯತ್‍ಲ್ ಸ್ತಿರಪಡ್‌ತ್‍ವಕಾಯಿತ್, ನಿಂಗಳೆಲ್ಲ ಕಾಂಬಕ್ ನಾನ್ ದುಂಬ ಕುಶೀಲ್ ಉಳ್ಳ.
ಪವಿತ್ರಾತ್ಮತ್‍ರ ಶಕ್ತಿರಗುಂಡ್ ನಿಂಗಡ ನಿರೀಕ್ಷೆ ಬಲ್ಯದಾಪಕಾಯಿತ್, ನಿರಿಕ್ಷೇರ ದೇವ, ನಂಬಿಕೇರ ಮೂಲಕ ಕ್‍ಟ್ಟುವ ಎಲ್ಲಾ ಕುಶೀರಗುಂಡ್ ಸಮಾದಾನತ್‍ರಗುಂಡ್ ನಿಂಗಳ ದುಂಬ್‌ಚಿಡಡ್.
ನಾಡ ದೇವಡ ನಲ್ಲ ಸುದ್ದಿ ಎಣ್ಣುವನೆಕೆ, ನಿಂಗಳ ಸ್ತಿರಪಡ್‌ತ್‍ವಕ್ ಶಕ್ತಿ ಉಳ್ಳಂವೊನಾಯಿತ್ತುಳ್ಳ ದೇವಕ್ ಎಲ್ಲಾ ಮಹಿಮೆಯು ಇರಡ್. ಯೇಸು ಕ್ರಿಸ್ತಂಡ ಈ ವಿಷಯತ್‍ರ ಮೂಲಕ ಯೆಹೂದ್ಯಂಗಲ್ಲತಯಿಂಗಕ್, ಪಂಡಿಂಜೇ ಗುಟ್ಟಾಯಿತ್ ಬೆಚ್ಚಿತ್ಂಜ ಮರ್ಮ, ಪ್ರಕಟನೆ ಆಚಿ.
ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ದಿವಸತ್‍ಲ್ ನಿಂಗ ಒರ್ ತಪ್ಪು ಇಲ್ಲತಯಿಂಗಳಾಯಿತ್ ನಿಪ್ಪಕ್ ಕಡೇಕತ್ತನೆ ಅಂವೊ ನಿಂಗಳ ಸ್ತಿರಪಡ್‍ತ್‌ವ.
ಆಚೇಂಗಿ, ಇಕ್ಕ ದೇವನೇ ನಂಗಳ ಕ್ರಿಸ್ತಂಡಲ್ಲಿ ನಿಂಗಡ ಕೂಡೆ ಸ್ತಿರಪಡ್‌ತಿತ್, ಅಂವೊನೇ ನಂಗಳ ಅಬಿಷೇಕವೂ ಮಾಡ್‍ಚಿ.
ನಿಂಗಡ ಬೇರ್ ಅಂವೊಂಡಲ್ಲಿ ಆಳವಾಯಿತ್ ಬೇರೂರಿತ್, ನಿಂಗಡ ಬದ್‍ಕ್‍ನ ಅಂವೊಂಡ ಮೇಲೆ ಕೆಟ್ಟುವಿರ. ಅಕ್ಕ ನಿಂಗಕ್ ಕ್‍ಟ್ಟ್‌ನ ನಂಬಿಕೇಲ್ ನಿಂಗ ದೃಡವಾಯಿತ್ ಬೊಳ್ಂದಿತ್, ದೇವಕ್ ವಂದನೆ ಎಣ್ಣುವದ್‍ಲ್ ದುಂಬ ಬೊಳಿವಿರ.
ಇನ್ನನೆ, ನಂಗಡ ಒಡೆಯನಾನ ಯೇಸು ಕ್ರಿಸ್ತ ತಾಂಡ ಪವಿತ್ರವಾನಯಿಂಗಡ ಕೂಡೆ ಪುನಃ ಬಪ್ಪಕಾಪಕ, ದೇವಡ ಸನ್ನಿದಾನತ್‍ಲ್ ನಿಂಗೆಲ್ಲಾರು ಒರ್ ತಪ್ಪಿಲ್ಲತನೆಕೆ, ಪವಿತ್ರವಾನಯಿಂಗಳಾಯಿತ್ ಇಪ್ಪಕ್ ನಿಂಗಡ ಹೃದಯತ್‍ನ ಸ್ತಿರಪಡ್‍ತಡ್.
ಅದ್ಂಗಾಯಿತ್ ನಂಗ ತಿಮೊಥೆಯನ ನಿಂಗಡ ಪಕ್ಕ ಅಯಿಚತ್. ಅಂವೊ ನಂಗಡ ತಮ್ಮಣನು, ನಂಗಡ ಕೂಡೆ ದೇವಡ ಸೇವೆ ಮಾಡ್‌ವಂವೊನು, ಕ್ರಿಸ್ತಂಡ ನಲ್ಲ ಸುದ್ದಿರ ಸೇವೇಲ್ ನಂಗಡ ಕೂಡೆ ಪ್ರಚಾರ ಮಾಡ್‍ವಂವೊನಾಯಿತು ಉಂಡ್. ಅಂವೊ ನಿಂಗಡ ಪಕ್ಕ ಬಂದಿತ್, ನಿಂಗಡ ನಂಬಿಕೇನ ಸ್ತಿರಪಡ್‌ತಿತ್, ನಿಂಗ ಆತ್ಮೀಯ ಬದ್‍ಕ್‍ಲ್ ಬೂವತನೆಕೆ ಇಪ್ಪಕ್ ಸಹಾಯ ಮಾಡ್‌ವ.
ನಂಗಡ ಒಡೆಯನಾನ ಯೇಸು ಕ್ರಿಸ್ತನು, ನಂಗಡ ಮೇಲೆ ಪ್ರೀತಿ ಬೆಚ್ಚಿತ್ ನಂಗಡ ಹೃದಯತ್‍ಲ್ ನಿತ್ಯ ಒತ್ತಾಸೆನೆ, ಕುಶೀರ ನಿರಿಕ್ಷೇನ, ನಂಗಕ್ ಕೃಪೆಯಾಯಿತ್ ದಾನಮಾಡ್‍ನ ಅಪ್ಪನಾನ ದೇವನು,
ಆಚೇಂಗಿ, ನಂಗಡ ದೇವ ಸತ್ಯವಂತಂವೊ, ಆನಗುಂಡ್, ಅಂವೊ ನಿಂಗಳ ಸ್ತಿರಪಡ್‌ತಿತ್, ಮೋಸ ಮಾಡ್‌ವ ಸೈತಾನಂಡ ಕೈಯಿಂಜ ಕಾಪಾಡ್‌ವ.
ಬೋರೆ ಬೋರೆ ಬೋದನೆಲ್ ಚಿಕ್ಕಿತ್ ಬಟ್ಟೆ ತಪ್ಪಿ ಪೋಕತಿ. ಏದ್ ತರ ಕೂಳ್ ಎನ್ನನೆ ತಿಂಗಂಡೂಂದ್ ತಿಂಬಗುಂಡ್ ಅಲ್ಲ, ಕೃಪೇರ ಮೂಲಕ ಹೃದಯ ಸ್ತಿರವಾಪದ್ ನಲ್ಲದ್. ಕೂಳ್‍ರ ವಿಷಯತ್ ಆಚಾರ ವಿಚಾರ ಮಾಡ್‌ವಗುಂಡ್ ಒರ್ ಪ್ರಯೋಜನವು ಇಲ್ಲೆ.
ಯೇಸು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್‍ಲ್ ನಂಗಳ ತಾಂಡ ನಿತ್ಯ ಮಹಿಮೇಕ್ ಕಾಕ್‍ನ ಕೃಪೆ ದುಂಬ್‍ನ ದೇವ, ಚೆನ್ನ ಕಾಲ ಕಷ್ಟ ಅನುಬವಿಚಿಡುವ ನಿಂಗಳ ಚಾಯಿ ಮಾಡಿತ್, ಬಲಪಡ್‍ತಿತ್, ಸ್ತಿರಪಡ್‌ತಿತ್, ನಿಪ್ಪ್‌ಚಿಡಡ್.
ನಾಡ ಪ್ರೀತಿರ ಮಕ್ಕಳೇ, ನಂಗಡ ಪ್ರೀತಿ ಬರಿ ತಕ್ಕ್‌ಬಾಕ್‍ಲ್ ಮಾತ್ರ ಇಪ್ಪಕ್ಕಾಗ, ಆಚೇಂಗಿ ಸತ್ಯತ್‍ಲ್ ಪಿಂಞ ಕ್ರಿಯೇಲ್ ಕಾಟಂಡು.
ತಾಂಡ ಮಹಿಮೆಯುಳ್ಳ ಪ್ರಸನ್ನತ್‌ಲ್ ಬಲ್ಯ ಕುಶೀಲ್ ಒರ್ ತಪ್ಪು ಇಲ್ಲತಯಿಂಗಳಾಯಿತ್ ನಿಂಗಳ ಬೂವತನೆಕೆ ನಿಪ್ಪ್‌ಚಿಡ್‍ವಕ್ ಶಕ್ತಿಯುಳ್ಳಂವೊನು,