3 ನಂಗಡ ಅಪ್ಪನಾನ ದೇವಡಯಿಂಜಲು, ಅಪ್ಪಂಡ ಮೋಂವೊನಾನ ಯೇಸು ಕ್ರಿಸ್ತಡಿಂಜಲು, ನಿಂಗಕ್ ಕೃಪೆ ಕರುಣೆ ಪಿಂಞ ಸಮಾದಾನ, ಸತ್ಯತ್‍ಲ್ ಪ್ರೀತಿಲ್ ನಿಂಗಡ ಕೂಡೆ ಇರಡ್.
ದೇವ ನಿಂಗಳ ಪ್ರೀತಿ ಮಾಡಿತ್, ಪವಿತ್ರವಾನಯಿಂಗಳಾಯಿತ್ ಇಪ್ಪಕ್ ಕಾಕ್‍ಚಿ. ನಂಗಡ ಅಪ್ಪನಾನ ದೇವಡ ಪಿಂಞ ಒಡೆಯನಾನ ಯೇಸು ಕ್ರಿಸ್ತಂಡ ಕೃಪೆಯು ಸಮಾದಾನವು ನಿಂಗಕ್ ಕ್‍ಟ್ಟಡ್.
ನಂಗಡ ನಂಬಿಕೆ ಯೇಸು ಕ್ರಿಸ್ತಂಡ ಮೇಲೆ ಇಂಜತೇಂಗಿ, ಸುನ್ನತಿ ಮಾಡಿತ್ಂಜತೇಂಗಿಯು, ಮಾಡತ ಇಂಜತೇಂಗಿಯು, ಅದ್ ಒಂದು ಲೆಕ್ಕ ಆಪುಲೆ. ಅದ್ಂಡ ಬದ್‍ಲಾಯಿತ್ ನಂಬಿಕೇಲ್, ಪ್ರೀತಿರಗುಂಡ್ ನಂಗ ಮಾಡ್‌ವ ಕಾರ್ಯವೇ ಮುಕ್ಯವಾನದ್.
ನಂಗಡ ಒಡೆಯಂಡ ಕೃಪೆ, ಯೇಸು ಕ್ರಿಸ್ತಂಡ ಕೂಡೆ ಉಳ್ಳ ಐಕ್ಯತ್‍ರ ನಂಬಿಕೆ ಪಿಂಞ ಪ್ರೀತಿನ ನಾಡ ಮೇಲೆ ಪೂರ್ತಿಯಾಯಿತ್ ದುಂಬ್‍ಚಿಟ್ಟತ್.
ದೇವಡ ನಂಬಿಕೇಲ್ ನಾಡ ನೇರಾನ ಮೋಂವೊನಾನ ತಿಮೊಥೆಯಂಗ್ ಒಳ್‍ದ್‍ವ ಕಾಗದ ಇದ್. ನಂಗಡ ಅಪ್ಪನಾನ ದೇವಡಯಿಂಜಲು, ನಂಗಡ ಒಡೆಯನಾನ ಯೇಸು ಕ್ರಿಸ್ತಡಿಂಜಲು ಕೃಪೆ, ಕರುಣೆ ಪಿಂಞ ಸಮಾದಾನ ಕ್‍ಟ್ಟಡ್.
ನೀನ್ ಯೇಸು ಕ್ರಿಸ್ತಂಡ ಮೇಲೆ ಉಳ್ಳ ನಂಬಿಕೆಯಿಂಜ, ಪ್ರೀತಿಯಿಂಜ, ನಾಡ ಪಕ್ಕ ಕ್‍ೕಟಿತ್ತುಳ್ಳ ಆರೋಗ್ಯವಾನ ಬೋದನೆನ ಒರ್ ಉದಾರಣೆಯಾಯಿತ್ ಬೆಚ್ಚಂಡ್, ಅನ್ನನೆ ಮಾಡ್.
ನೇರಾನ ಪ್ರೀತಿ ಎಂತ ಎಣ್ಣ್‌ಚೇಂಗಿ, ನಂಗ ದೇವಡ ಮೇಲೆ ಬೆಚ್ಚ ಪ್ರೀತಿ ಅಲ್ಲ, ದೇವ ನಂಗಡ ಮೇಲೆ ಬೆಚ್ಚ ಪ್ರೀತಿಯೇ. ಅದ್, ನಂಗಡ ಪಾಪತ್‍ನ ಪರಿಹಾರ ಮಾಡ್‌ವಕ್ ದೇವ ತಾಂಡ ಒರೇ ಮೋಂವೊನ ಈ ಲೋಕಕ್ ಅಯಿಚದ್.
ಮೂಪನಾನ ನಾನ್ ನೇರಾಯಿತ್ ಪ್ರೀತಿಚಿಡ್‍ವ ದೇವ ಗೊತ್ತ್ ಮಾಡ್‍ನ ಪ್ರೀತಿರ ಅವ್ವಂಗ್ ಪಿಂಞ ಅವಡ ಮಕ್ಕಕ್ ಒಳ್‍ದ್‍ವ ಕಾಗದ. ನಾನ್ ಒಬ್ಬ ಮಾತ್ರ ಅಲ್ಲ, ಆಚೇಂಗಿ ನೇರಾನ ಸತ್ಯ ಗೊತ್ತುಳ್ಳ ಎಲ್ಲಾರು ನಿಂಗಳ ಪ್ರೀತಿ ಮಾಡ್‌ವ.